ಒಬ್ಬನಿಗೆ ವೀರ್ಯವು ಹೊರಟುಹೋದರೆ ಅವನು ತನ್ನ ಶರೀರವನ್ನೆಲ್ಲಾ ನೀರಿನಲ್ಲಿ ತೊಳೆದು ಸಾಯಂಕಾ ಲದ ವರೆಗೆ ಅಶುದ್ಧನಾಗಿರಬೇಕು.
Cross references
ಅವನ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
ಆರೋನನ ಸಂತತಿಯವರಲ್ಲಿ ಒಬ್ಬನು ಕುಷ್ಠರೋಗಿ ಇಲ್ಲವೆ ಸ್ರಾವವುಳ್ಳವನಿದ್ದರೆ ಅವನು ಶುದ್ಧನಾಗುವ ವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
ರಾತ್ರಿಯಲ್ಲಿ ಸಂಭವಿಸಿದ ಕಾರ್ಯದ ದೆಸೆಯಿಂದ ಶುದ್ಧವಲ್ಲದ ಮನುಷ್ಯನು ನಿಮ್ಮಲ್ಲಿದ್ದರೆ ಅವನು ಪಾಳೆಯದ ಹೊರಗೆ ಹೋಗಬೇಕು; ಪಾಳೆಯದ ಒಳಗೆ ಬರಬಾರದು.
ಸಂಜೆ ಆಗುತ್ತಿರುವಾಗ ಅವನು ನೀರಿನಲ್ಲಿ ತೊಳ ಕೊಳ್ಳಲಿ; ಸೂರ್ಯನು ಮುಣುಗಿದಾಗ ಪಾಳೆಯದ ಒಳಗೆ ತಿರಿಗಿ ಬರಲಿ.
ಇದಲ್ಲದೆ ನೀನು ಹೊರಗಡೆ ಹೋಗುವದಕ್ಕೆ ನಿನಗೆ ಪಾಳೆಯದ ಹೊರಗೆ ಸ್ಥಳವಿರಬೇಕು.
ಅತಿ ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತ್ವನ್ನು ಸಿದ್ದಿಗೆ ತರೋಣ.
ಅತಿ ಪ್ರಿಯರೇ, ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿ ರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ಆತನು ಬೆಳಕಿನಲ್ಲಿರು ವಂತೆಯೇ ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ; ಆತನ ಮಗನಾದ ಯೇಸುಕ್ರಿಸ್ತನ ರಕ್ತವು ನಮ್ಮನ್ನು ಸಕಲ ಪಾಪದಿಂದ ಶುದ್ಧಿಮಾಡುತ್ತದೆ.