Home Bibles ಲೇವ್ಯಕಾಂಡ 15:12 · ಕನ್ನಡ ಬೈಬಲ್
ಲೇವ್ಯಕಾಂಡ 15:12 · ಕನ್ನಡ ಬೈಬಲ್

ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು, ಮರದ ಪ್ರತಿಯೊಂದು ಪಾತ್ರೆಯನ್ನು ನೀರಿನಲ್ಲಿ ಜಾಲಿಸಿ ತೊಳೆಯಬೇಕು.

Cross references

ಲೇವ್ಯಕಾಂಡ 6:21

ಅದನ್ನು ಒಂದು ಬೋಗುಣಿಯಲ್ಲಿ ಎಣ್ಣೆಯೊಂದಿಗೆ ಮಾಡಬೇಕು; ಅದು ಬೇಯಿಸಲ್ಪಟ್ಟಾಗ ನೀನು ಅದನ್ನು ಒಳಗೆ ತರಬೇಕು; ಬೇಯಿಸಲ್ಪಟ್ಟ ಆಹಾರ ಬಲಿಯ ತುಂಡುಗಳನ್ನು ನೀನು ಕರ್ತನಿಗೆ ಸುವಾಸನೆಗಾಗಿ ಸಮರ್ಪಿಸಬೇಕು.

ಲೇವ್ಯಕಾಂಡ 6:28

ಆದರೆ ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯು ಒಡೆಯಲ್ಪಡಬೇಕು; ಅದನ್ನು ಒಂದು ಹಿತ್ತಾಳೆಯ ಪಾತ್ರೆಯಲ್ಲಿ ಬೇಯಿಸಿ ದ್ದಾದರೆ ಅದನ್ನು ಬೆಳಗಿ ನೀರಿನಿಂದ ತೊಳೆಯಬೇಕು.

ಲೇವ್ಯಕಾಂಡ 11:32

ಅವು ಸತ್ತುಹೋಗಿ ಯಾವದರ ಮೇಲೆ ಬೀಳುವವೊ ಅವೆಲ್ಲಾ ಅಶುದ್ಧವಾಗಿರುವವು; ಅದು ಮರದ ಪಾತ್ರೆ ಯಾಗಲಿ ಉಡುಪಾಗಲಿ ಚರ್ಮವಾಗಲಿ ಚೀಲ ವಾಗಲಿ ಕೆಲಸಮಾಡುವ ಯಾವ ಸಾಮಾನಾಗಲಿ ಅದು ಏನೇ ಆಗಿರಲಿ ಸಾಯಂಕಾಲದ ವರೆಗೆ ನೀರಲ್ಲಿ ಇಡಲ್ಪಟ್ಟು ಅಶುದ್ಧವಾಗಿರುವದು; ತರುವಾಯ ಅದು ಶುದ್ಧವಾಗುವದು.

ಕೀರ್ತನೆಗಳು 2:9

ಕಬ್ಬಿಣದ ಕೋಲಿನಿಂದ ಅವರನ್ನು ಮುರಿದುಬಿಡುವಿ. ಕುಂಬಾರನ ಗಡಿಗೆಯ ಹಾಗೆ ಅವ ರನ್ನು ಒಡೆದು ಚೂರುಚೂರಾಗಿ ಮಾಡಿಬಿಡುವಿ.

ಸಾಮೇತಿಗಳು 1:21

ಸಮೂಹದ ಮುಖ್ಯ ಸ್ಥಳದಲ್ಲಿಯೂ ದ್ವಾರಗಳ ಬಳಿಯಲ್ಲಿಯೂ ಅವಳು ಕೂಗುತ್ತಾಳೆ, ಪಟ್ಟಣದಲ್ಲಿ ಅವಳು ತನ್ನ ಮಾತುಗಳನ್ನು ಉಚ್ಚರಿಸುತ್ತಾ--

ಸಾಮೇತಿಗಳು 1:23

ನನ್ನ ಗದರಿಕೆಗೆ ನೀವು ತಿರುಗಿ ಕೊಳ್ಳಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ ನಿಮಗೆ ನನ್ನ ಮಾತುಗಳು ತಿಳಿಯುವಂತೆ ಮಾಡುವೆನು.

ಸಾಮೇತಿಗಳು 3:21

ನನ್ನ ಮಗನೇ, ನಿನ್ನ ಕಣ್ಣುಗಳಿಂದ ಅವುಗಳು ತಪ್ಪಿಸಿಕೊಳ್ಳದೆ ಇರಲಿ. ಸುಜ್ಞಾನವನ್ನೂ ವಿವೇಕವನ್ನೂ ಇಟ್ಟುಕೋ.

2 ಕೊರಿಂಥದವರಿಗೆ 5:1

ಈ ಗುಡಾರವಾಗಿರುವ ಮಣ್ಣಿನ ನಮ್ಮ ಮನೆಯು (ಶರೀರವು) ತೆಗೆದುಹಾಕಲ್ಪ ಟ್ಟರೆ ಕೈಗಳಿಂದ ಮಾಡದಿರುವಂಥಾದ್ದೂ ಪರಲೋಕ ಗಳಲ್ಲಿ ನಿತ್ಯವಾಗಿರುವಂಥಾದ್ದೂ ಆಗಿರುವ ದೇವರ ಕಟ್ಟಡವು ನಮಗಿದೆಯೆಂದು ನಾವು ಬಲ್ಲೆವು.

ಫಿಲಿಪ್ಪಿಯವರಿಗೆ 3:21

ಆತನು ಎಲ್ಲವನ್ನೂ ತನಗೆ ಅಧೀನ ಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾ ವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸು ವದಕ್ಕೆ ಶಕ್ತನಾಗಿದ್ದು ಪ್ರಭಾವವುಳ್ಳ ತನ್ನ ದೇಹಕ್ಕೆ ಸಾರೂಪ್ಯವಾಗುವಂತೆ ಮಾಡುವನು.

Interlinear

Choose Theme