ನಾನು ನಿಮಗೆ ಸ್ವಾಸ್ತ್ಯವಾಗಿ ಕೊಡುವದಕ್ಕಿರುವ ಕಾನಾನ್ ದೇಶದೊ ಳಗೆ ನೀವು ಬಂದಾಗ ನಿಮಗೆ ಸ್ವಾಸ್ತ್ಯವಾಗಿ ಕೊಡುವ ಮನೆಯಲ್ಲಿ ಕುಷ್ಠವನ್ನು ಬರಮಾಡಿದಾಗ
Cross references
ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಿನ್ನ ಸಂತತಿಗೆ ನಾನು ಈ ದೇಶವನ್ನು ಕೊಡುವೆನು ಅಂದನು. ಆಗ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಕರ್ತನಿಗೆ ಬಲಿಪೀಠವನ್ನು ಕಟ್ಟಿದನು.
ಎದ್ದು ಭೂಮಿಯ ಉದ್ದಗಲದ ಪ್ರಕಾರ ಅದರಲ್ಲಿ ತಿರುಗಾಡು. ನಾನು ನಿನಗೆ ಅದನ್ನು ಕೊಡುವೆನು ಅಂದನು.ಆಗ ಅಬ್ರಾಮನು ತನ್ನ ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನ ಲ್ಲಿರುವ ಮಮ್ರೆಯ ಮೈದಾನಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಅವನು ಅಲ್ಲಿ ಕರ್ತನಿಗೆ ಬಲಿ ಪೀಠವನ್ನು ಕಟ್ಟಿದನು.
ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು.
ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.
ಬಟ್ಟೆಯ ಮತ್ತು ಮನೆಯ ಕುಷ್ಠಕ್ಕೂ
ನಾನು ನಿಮಗೆ ಹೇಳಿದ್ದೇನಂದರೆ--ನೀವು ಅವರ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವಿರಿ. ಹಾಲೂ ಜೇನೂ ಹರಿಯುವ ಆ ದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳುವಂತೆ ನಾನು ಅದನ್ನು ನಿಮಗೆ ಕೊಡುತ್ತೇನೆ. ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಪಡಿಸಿದಂಥ ನಿಮ್ಮ ದೇವರಾಗಿರುವ ಕರ್ತನು ನಾನೇ.
ಇಸ್ರಾಯೇಲ್ ಮಕ್ಕಳೊಂದಿಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿ (ಬೆಳೆ)ಯನ್ನು ಕೊಯಿದರೆ ನಿಮ್ಮ ಸುಗ್ಗಿಯ ಮೊದಲನೆಯ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು.
ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು--ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ ದೇಶವು ಕರ್ತನಿ ಗಾಗಿ ಸಬ್ಬತ್ತನ್ನು ಕೈಕೊಳ್ಳಬೇಕು.
ದೇಶವು ಕರ್ತನ ಮುಂದೆ ವಶವಾದ ತರುವಾಯ ನೀವು ಕರ್ತನಿಂದಲೂ ಇಸ್ರಾ ಯೇಲ್ಯರಿಂದಲೂ ನಿರಪರಾಧಿಗಳಾಗಿದ್ದು ತಿರುಗಿಕೊಳ್ಳ ಬಹುದು; ಈ ದೇಶವು ಕರ್ತನ ಮುಂದೆ ನಿಮ್ಮ ಸ್ವಾಸ್ತ್ಯಕ್ಕಾಗುವದು.
ನಾವು ಯುದ್ಧಕ್ಕೆ ಸಿದ್ಧವಾಗಿ ಕರ್ತನ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು; ಆದರೆ ಯೊರ್ದನ್ ನದಿಯ ಈಚೆ ಯಲ್ಲಿರುವ ನಮ್ಮ ಸ್ವಾಸ್ತ್ಯದ ಭಾಗವೇ ನಮಗಿರಲಿ ಎಂದು ಹೇಳಿದರು.
ನೀನು ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಯೊರ್ದ ನನ್ನು ದಾಟಿ ಕಾನಾನ್ ದೇಶಕ್ಕೆ ಬಂದಾಗ
ನೀನು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಬರಮಾಡಿದಾಗ ಆತನು ನಿನಗಿಂತ ದೊಡ್ಡ ವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಅಂದರೆ ಹಿತ್ತಿಯರನ್ನೂ ಗಿರ್ಗಾಷಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗ ಗಳನ್ನು ನಿನ್ನ ಮುಂದೆ ಹೊರಡಿಸಿ
ಕರ್ತನು ಎಲ್ಲಾ ರೋಗಗಳನ್ನು ನಿನ್ನಿಂದ ತೆಗೆದು ಬಿಡುವನು; ನಿನಗೆ ತಿಳಿದಿರುವ ಐಗುಪ್ತದ ಕೆಟ್ಟ ರೋಗಗಳನ್ನೆಲ್ಲಾ ನಿನ್ನ ಮೇಲೆ ಬರಮಾಡದೆ ನಿನ್ನನ್ನು ಹಗೆಮಾಡುವವರೆಲ್ಲರ ಮೇಲೆ ಅವುಗಳನ್ನು ಬರ ಮಾಡುವನು.
ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ನಿನ್ನ ಪಿತೃಗಳ ದೇವರಾದ ಕರ್ತನು ಕೊಡುವ ದೇಶದಲ್ಲಿ ನೀವು ಭೂಮಿಯ ಮೇಲೆ ಬದುಕುವ ದಿವಸಗಳಲ್ಲೆಲ್ಲಾ ಲಕ್ಷಿಸಿ ಮಾಡತಕ್ಕ ನಿಯಮ ನ್ಯಾಯಗಳು ಇವೇ.
ನಾವು ಈಗ ಇಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ದೃಷ್ಟಿಯಲ್ಲಿ ತೋರುವ ಪ್ರಕಾರ ಮಾಡುವಂತೆ ನೀವು ಮಾಡಬೇಡಿರಿ.
ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶದ ಜನಾಂಗಗಳನ್ನು ನಿನ್ನ ದೇವರಾದ ಕರ್ತನು ಕಡಿದುಬಿಟ್ಟ ತರುವಾಯ ನೀನು ಅವುಗಳನ್ನು ಸ್ವಾಧೀನಮಾಡಿಕೊಂಡು ಅವುಗಳ ಪಟ್ಟಣಗಳಲ್ಲಿಯೂ ಮನೆಗಳಲ್ಲಿಯೂ ವಾಸಮಾಡುವಾಗ
ಇದಲ್ಲದೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡುವಾಗ
ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.
ಈ ಅಬಾರೀಮ್ ಪರ್ವತದ ಮೇಲೆ ಮೋವಾಬ್ ದೇಶದ ಲ್ಲಿಯೂ ಯೆರಿಕೋವಿಗೆ ಎದುರಾಗಿಯೂ ಇರುವ ನೆಬೋ ಬೆಟ್ಟದ ಮೇಲೆ ಏರಿಹೋಗು; ನಾನು ಇಸ್ರಾ ಯೇಲ್ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವ ಕಾನಾನ್ ದೇಶವನ್ನು ನೋಡು,
ಯೆಹೋಶುವನು ದಿನ ತುಂಬಿದ ಮುದುಕ ನಾಗಲು ಕರ್ತನು ಅವನಿಗೆ--ನೀನು ಮುದುಕನಾಗಿ ದಿನಗಳು ಹೋದವನಾದಿ; ಆದರೆ ಸ್ವಾಧೀನಮಾಡಿಕೊಳ್ಳತಕ್ಕ ಸೀಮೆಯು ಇನ್ನು ಬಹಳ ವಾಗಿ ಇರುತ್ತದೆ.
ಕರ್ತನು ಸಾಯಿಸುವಾತನೂ ಬದುಕಿಸುವಾತನೂ ಆಗಿದ್ದಾನೆ. ಸಮಾಧಿಗೆ ಇಳಿಯುವಂತೆ ಮಾಡುತ್ತಾನೆ. ಮೇಲಕ್ಕೆ ತರುತ್ತಾನೆ.
ಕರ್ತನ ಶಾಪವು ದುಷ್ಟರ ಮನೆಯಲ್ಲಿದೆ; ಆದರೆ ನ್ಯಾಯಸ್ಥರ ನಿವಾಸವನ್ನು ಆತನು ಆಶೀರ್ವದಿಸುತ್ತಾನೆ.
ನಾನು ಬೆಳಕನ್ನು ರೂಪಿಸುವವನೂ ಕತ್ತಲನ್ನು ನಿರ್ಮಿಸುವವನೂ ಸಮಾಧಾನವನ್ನು ಮಾಡು ವವನೂ ಕೆಟ್ಟದ್ದನ್ನು ನಿರ್ಮಿಸುವವನೂ ನಾನೇ; ಕರ್ತ ನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.
ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವದಿಲ್ಲವೇ? ಪಟ್ಟಣದಲ್ಲಿ ಕೇಡು ಇರು ವದಾದರೆ ಅದು ಕರ್ತನಿಂದ ಅಲ್ಲವೇ?
ಇಗೋ, ಕರ್ತನು ಆಜ್ಞಾಪಿಸುತ್ತಾನೆ; ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.
ಕರ್ತನ ಸ್ವರವು ಪಟ್ಟಣಕ್ಕೆ ಕೂಗುತ್ತದೆ, ಮತ್ತು ಬುದ್ಧಿವಂತನು ನಿನ್ನ ಹೆಸರನ್ನು ನೋಡುವನು; ಬೆತ್ತ ವನ್ನೂ ಅದನ್ನು ನೇಮಿಸಿದವನನ್ನೂ ಕೇಳಿರಿ.