ಕುಷ್ಠವ್ಯಾಧಿಯು ಅವನ ಉಡುಪಿನಲ್ಲಿದ್ದರೆ ಅದು ಉಣ್ಣೆಯ ಉಡುಪಾಗಲಿ ನಾರಿನ ಉಡುಪಾಗಲಿ
Cross references
ಬಟ್ಟೆಯ ಮತ್ತು ಮನೆಯ ಕುಷ್ಠಕ್ಕೂ
ಇದಲ್ಲದೆ ಕರ್ತನು ಇಂತೆನ್ನುತ್ತಾನೆ --ಚೀಯೋನ್ ಕುಮಾರ್ತೆಯರು ಅಹಂಕಾರಿಗಳಾಗಿದ್ದು ಕತ್ತು ತೂಗುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನಾಜೂಕಿ ನಿಂದ ಹೆಜ್ಜೆಇಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆ ಯುವವರಾಗಿರುವದರಿಂದ,
ಅವರ ನೂಲು ವಸ್ತ್ರಕ್ಕಾಗದು; ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದು ಕೊಳ್ಳರು; ಅವರ ಕೆಲಸಗಳು ಅಕ್ರಮದ ಕೆಲಸಗಳೇ; ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಅವೆ.
ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ.
ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ.
ಇರುಳು ಬಹಳ ಮಟ್ಟಿಗೆ ಕಳೆಯಿತು; ಹಗಲು ಸವಿಾಪವಾಯಿತು; ಆದದರಿಂದ ನಾವು ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು ಬೆಳಕಿಗೆ ಅನುಗುಣವಾದ ಆಯುಧಗಳನ್ನು ಧರಿಸಿಕೊಳ್ಳೋಣ.
ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದೆಂದರೆ--ನೀವು ನಿಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವ ವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು.
ಯಾಕಂದರೆ ನೀವು ಸತ್ತಿರಲ್ಲಾ, ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿಟ್ಟದೆ.
ಬೇರೆಯವರನ್ನು ಬೆಂಕಿಯಿಂದ ಎಳಕೊಂಡು ಭಯದಿಂದ ರಕ್ಷಿಸಿರಿ. ಶರೀರದಿಂದ ಮೈಲಿಗೆಯಾದ ಅಂಗಿಯನ್ನು ಹಗೆಮಾಡಿರಿ.