ಪುರುಷನ ತಲೆಯ ಕೂದಲು ಉದುರಿಹೋದರೆ ಅವನು ಬೋಳು ತಲೆಯವನು, ಆದಾಗ್ಯೂ ಅವನು ಶುದ್ಧನಾಗಿರುವನು.
Cross references
ತನ್ನ ಮುಂದಲೆಯ ಕೂದಲು ಉದುರಿಹೋಗಿದ್ದರೂ ಅವನು ಪಟ್ಟೆತಲೆಯವನಾ ದರೂ ಶುದ್ಧನೇ.
ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿ ರುವಾಗ ಚಿಕ್ಕ ಹುಡುಗರು ಪಟ್ಟಣದಿಂದ ಹೊರಟು ಬಂದು ಅವನನ್ನು ಹಾಸ್ಯಮಾಡಿ ಅವನಿಗೆ--ಬೋಳ ತಲೆಯವನೇ, ಏರಿ ಹೋಗು; ಬೋಳ ತಲೆಯವನೇ, ಏರಿ ಹೋಗು ಅಂದರು.
ಅವನ ತಲೆಯು ಅತಿ ಚೊಕ್ಕ ಬಂಗಾರದ ಹಾಗೆಯೂ ಅವನ ಕೂದಲು ಗುಂಗುರು ಕೂದಲೂ ಕಾಗೆಯ ಹಾಗೆ ಕಪ್ಪಾಗಿಯೂ ಅವೆ.
ಬಯಿತ್ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
ನಿಮ್ಮ ಹಬ್ಬಗಳನ್ನು ದುಃಖಕ್ಕೂ ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು; ಎಲ್ಲರೂ ಸೊಂಟಗಳಿಗೆ ಗೋಣೀತಟ್ಟನ್ನು ಕಟ್ಟಿಕೊಂಡು ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು; ಅದನ್ನು ಒಬ್ಬನೇ ಮಗನಿಗಾಗಿ ದುಃಖಿಸುವಂತೆಯೂ ಅದರ ಅಂತ್ಯವು ಕಹಿಯಾದ ದಿನವಾಗುವಂತೆಯೂ ಮಾಡುವೆನು.
ಹೀಗಿರುವದರಿಂದ ಸಾಯತಕ್ಕ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ಅದರ ದುರಾಶೆಗಳಿಗೆ ಒಳಪಡಬೇಡಿರಿ;
ನಿಮ್ಮ ಶರೀರದ ಬಲಹೀನತೆಯ ದೆಸೆಯಿಂದ ಮನುಷ್ಯ ರೀತಿಯಾಗಿ ನಾನು ಮಾತನಾಡುತ್ತೇನೆ. ಅಶುದ್ಧತ್ವಕ್ಕೆ ದಾಸರನ್ನಾಗಿ ನಿಮ್ಮ ಅಂಗಗಳನ್ನು ದುಷ್ಟತ್ವ ದಿಂದ ದುಷ್ಟತ್ವಕ್ಕೆ ಒಳಪಡಿಸಿದಂತೆಯೇ ಈಗ ಪರಿಶುದ್ಧತೆ ಗಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಳಪಡಿಸಿರಿ.
ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ದೇಹವು ಪಾಪದ ದೆಸೆಯಿಂದ ಸತ್ತದ್ದಾಗಿದ್ದರೂ ಆತ್ಮವು ನೀತಿಯ ದೆಸೆ ಯಿಂದ ಜೀವವುಳ್ಳದ್ದಾಗಿದೆ.
ನನ್ನ ಶರೀರಕ್ಕೆ ಅಸೌಖ್ಯವಿದ್ದದರಿಂದ ನಾನು ನಿಮ್ಮಲ್ಲಿದ್ದು ಮೊದಲನೆಯ ನಿಮಗೆ ಸುವಾರ್ತೆ ಸಾರಿದ್ದನ್ನು ನೀವು ಬಲ್ಲಿರಿ.