Home Bibles ☰ Books ಲೇವ್ಯಕಾಂಡ 13:4 · ಕನ್ನಡ ಬೈಬಲ್
ಲೇವ್ಯಕಾಂಡ 13:4 · ಕನ್ನಡ ಬೈಬಲ್

ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು.

Cross references

ಲೇವ್ಯಕಾಂಡ 13:25

ಯಾಜಕನು ಆಗ ಅದನ್ನು ನೋಡ ಬೇಕು. ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡು ವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆ ಯಿಂದ ಒಡೆದ ಕುಷ್ಠವಾಗಿರುವದು; ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಕುಷ್ಠವ್ಯಾಧಿಯೇ.

ಲೇವ್ಯಕಾಂಡ 13:26

ಆದರೆ ಯಾಜಕನು ಅದನ್ನು ನೋಡಿದಾಗ ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೊಬ್ಬಾಗಿದ್ದರೆ ಯಾಜಕನು ಆಗ ಅವನನ್ನು ಏಳು ದಿನಗಳು ಮುಚ್ಚಿಡಬೇಕು.

ಲೇವ್ಯಕಾಂಡ 13:50

ಯಾಜಕನು ವ್ಯಾಧಿಯನ್ನು ನೋಡಿ ಅದನ್ನು ಏಳು ದಿನಗಳು ಮುಚ್ಚಿಡಬೇಕು:

ಲೇವ್ಯಕಾಂಡ 14:38

ಯಾಜಕನು ಆ ಮನೆಯ ಹೊರಗೆ ಮನೆಯಬಾಗಿಲ ಬಳಿಗೆ ಹೋಗಿ ಅದನ್ನು ಏಳು ದಿವಸಗಳ ವರೆಗೆ ಮುಚ್ಚಿಡಬೇಕು.

ಅಂಕೆಗಳ ಪುಸ್ತಕ 12:14

ಆಗ ಕರ್ತನು ಮೋಶೆಗೆ--ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ ಆಕೆಯು ಏಳು ದಿವಸ ನಾಚಿಕೊಳ್ಳುವದಿಲ್ಲವೋ? ಆಕೆಯು ಏಳು ದಿವಸ ಪಾಳೆಯದ ಹೊರಗೆ ಮರೆಯಾಗಿದ್ದು ತರುವಾಯ ಸೇರಿಸಲ್ಪಡಲಿ ಎಂದು ಹೇಳಿದನು.

ಅಂಕೆಗಳ ಪುಸ್ತಕ 12:15

ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿಯಿಟ್ಟರು. ಮಿರ್ಯಾಮಳು ತಿರಿಗಿ ಒಳಗೆ ಬರುವ ವರೆಗೆ ಜನರು ಪ್ರಯಾಣ ಮಾಡಲಿಲ್ಲ.ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್‌ ಅರಣ್ಯದಲ್ಲಿ ಇಳುಕೊಂಡರು.

ದ್ವಿತೀಯೋಪದೇಶಕಾಂಡ 13:14

ನೀನು ಹುಡುಕಿ ಶೋಧಿಸಿ ಚೆನ್ನಾಗಿ ವಿಚಾರಣೆ ಮಾಡಬೇಕು; ಆ ಕಾರ್ಯವು ನಿಶ್ಚಯವಾಗಿ ಸತ್ಯ ವಾದರೆ, ಅಂಥ ಅಸಹ್ಯವು ನಿಮ್ಮಲ್ಲಿ ನಡೆದದ್ದಾದರೆ,

ಯೆಹೆಜ್ಕೇಲ 44:10

ಇಸ್ರಾಯೇಲ್ಯರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿ ಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರು ಸಹ ತಮ್ಮ ಅಕ್ರಮಗಳನ್ನು ಹೊರುವರು.

1 ಕೊರಿಂಥದವರಿಗೆ 4:5

ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.

1 ತಿಮೋಥೆಯ 5:24

ಕೆಲವರ ಪಾಪಗಳು ತೀರ್ಪಿಗೆ ಮೊದಲೇ ಬಹಿರಂಗವಾಗುತ್ತವೆ; ಕೆಲವರ ಪಾಪಗಳು ತರುವಾಯ ಹಿಂಬಾಲಿಸುತ್ತವೆ.ಅದರಂತೆಯೇ ಕೆಲವರ ಒಳ್ಳೇ ಕ್ರಿಯೆಗಳು ಮೊದಲೇ ಪ್ರತ್ಯಕ್ಷವಾಗಿರುತ್ತವೆ. ಪ್ರತ್ಯಕ್ಷವಾಗದಿರುವವುಗಳು ಮರೆ ಯಾಗಿರಲಾರವು.

Interlinear

Choose Theme