Home Bibles ಲೇವ್ಯಕಾಂಡ 10:13 · ಕನ್ನಡ ಬೈಬಲ್
ಲೇವ್ಯಕಾಂಡ 10:13 · ಕನ್ನಡ ಬೈಬಲ್

ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಬೆಂಕಿಯಿಂದ ಮಾಡಿದ ಕರ್ತನ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಇವು ಸಲ್ಲತಕ್ಕವುಗಳು. ಹೀಗೆ ನಾನು ಆಜ್ಞೆ ಹೊಂದಿದ್ದೇನೆ.

Cross references

ಲೇವ್ಯಕಾಂಡ 2:3

ಆಹಾರದ ಸಮರ್ಪಣೆ ಯಲ್ಲಿ ಉಳಿದದ್ದು ಆರೋನನಿಗೂ ಅವನ ಕುಮಾರ ರಿಗೂ ಆಗಬೇಕು; ಅದು ಬೆಂಕಿಯಿಂದ ಮಾಡಿದ ಕರ್ತನ ಸಮರ್ಪಣೆಗಳಲ್ಲಿ ಅತಿ ಪರಿಶುದ್ಧವಾದದ್ದು.

ಲೇವ್ಯಕಾಂಡ 6:16

ಅದ ರಲ್ಲಿ ಉಳಿದದ್ದನ್ನು ಆರೋನನೂ ಅವನ ಕುಮಾರರೂ ತಿನ್ನಬೇಕು; ಅದನ್ನು ಪರಿಶುದ್ಧ ಸ್ಥಳದಲ್ಲಿ ಹುಳಿಯಿಲ್ಲದ ರೊಟ್ಟಿಯೊಂದಿಗೆ ತಿನ್ನಬೇಕು; ಅದನ್ನು ಅವರು ಸಭೆಯ ಗುಡಾರದ ಅಂಗಳದಲ್ಲಿ ತಿನ್ನಬೇಕು.

ಅಂಕೆಗಳ ಪುಸ್ತಕ 5:10

ಪ್ರತಿ ಮನುಷ್ಯನ ಪರಿಶುದ್ಧವಾದವುಗಳು ಅವನಿಗೇ ಸಲ್ಲಬೇಕು. ಯಾವನಾದರೂ ಏನಾದರೂ ಯಾಜಕನಿಗೆ ಕೊಟ್ಟದ್ದು ಅವನಿಗೇ ಆಗಬೇಕು ಎಂದು ಹೇಳಿದನು.

ಅಂಕೆಗಳ ಪುಸ್ತಕ 18:10

ನೀನು ಅದನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು; ಎಲ್ಲಾ ಗಂಡಸರು ಅದನ್ನು ತಿನ್ನಬೇಕು. ಅದು ನಿನಗೆ ಪರಿಶುದ್ಧವಾಗಿರುವದು.

Interlinear

Choose Theme