ಆಗ ಆರೋನನ ಕುಮಾರರಾದ ಯಾಜಕರು ಅದರ ಭಾಗಗಳನ್ನು ಅಂದರೆ ತಲೆಯನ್ನೂ ಕೊಬ್ಬನ್ನೂ ಯಜ್ಞವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು;
Cross references
ಇದಲ್ಲದೆ ಆ ಟಗರನ್ನು ತುಂಡು ತುಂಡಾಗಿ ಕಡಿದು ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅದರ ತುಂಡುಗಳನ್ನು ತಲೆಯ ಸಂಗಡ ಇಡಬೇಕು.
ಅವನು ಅದರ ತಲೆ ಮತ್ತು ಕೊಬ್ಬಿನೊಂದಿಗೆ ತುಂಡುಗಳನ್ನಾಗಿ ಮಾಡ ಬೇಕು. ಯಾಜಕನು ಅವುಗಳನ್ನು ಕ್ರಮವಾಗಿ ಯಜ್ಞ ವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಇಡಬೇಕು.
ದಹನಬಲಿಗಾಗಿ ಟಗರನ್ನು ತಂದನು. ಆರೋ ನನು ಅವನ ಕುಮಾರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದುಕೊಡಲು ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಸುಟ್ಟನು.
ಈಗ ಎರಡು ಹೋರಿಗಳನ್ನು ಅವರು ನಮಗೆ ಕೊಡಲಿ; ಒಂದು ಹೋರಿಯನ್ನು ಅವರು ಆದು ಕೊಂಡು ಅದನ್ನು ತುಂಡು ತುಂಡಾಗಿ ಕಡಿದು ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡಲಿ. ನಾನು ಇನ್ನೊಂದು ಹೋರಿಯನ್ನು ಹಾಗೆಯೇ ಮಾಡಿ ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡುವೆನು.
ತರುವಾಯ ಅವನು ಕಟ್ಟಿಗೆಗಳನ್ನು ಇಟ್ಟು ಹೋರಿ ಯನ್ನು ತುಂಡುತುಂಡಾಗಿ ಕಡಿದು ಕಟ್ಟಿಗೆಗಳ ಮೇಲೆ ಇಟ್ಟು--ನೀವು ನಾಲ್ಕು ಮಡಕೆ ನೀರನ್ನು ತುಂಬಿಕೊಂಡು ದಹನಬಲಿಯ ಮೇಲೆಯೂ ಕಟ್ಟಿಗೆಗಳ ಮೇಲೆಯೂ ಹೊಯ್ಯಿರಿ ಅಂದನು.
ಒಳಗೆ ಸುತ್ತಲಾಗಿ ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ಮೇಜುಗಳ ಮೇಲೆ ಅರ್ಪಣೆಯ ಮಾಂಸವಿತ್ತು.