Home Bibles ವಿಲಾಪಗಳು 4:2 · ಕನ್ನಡ ಬೈಬಲ್
ವಿಲಾಪಗಳು 4:2 · ಕನ್ನಡ ಬೈಬಲ್

ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಕುಮಾರರು ಹೇಗೆ ಮಣ್ಣಿನ ಪಾತ್ರೆಗಳಂತೆಯೂ ಕುಂಬಾರನ ಕೈಕೆಲಸದ ಹಾಗೆಯೂ ಎಣಿಸಲ್ಪಟ್ಟಿ ದ್ದಾರಲ್ಲಾ!

Cross references

ಯೆಶಾಯ 30:14

ಉರಿಯಿಂದ ಕೆಂಡವನ್ನು ತೆಗೆಯುವದಕ್ಕಾಗಲಿ ಬಾವಿಯಿಂದ ನೀರನ್ನು ತೆಗೆಯುವದಕ್ಕಾಗಲಿ ಬೋಕಿ ಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.

ಯೆಶಾಯ 51:18

ಅವಳು ಹೆತ್ತ ಎಲ್ಲಾ ಕುಮಾರರಲ್ಲಿ ಅವಳನ್ನು ನಡಿಸುವದಕ್ಕೆ ಒಬ್ಬನೂ ಇಲ್ಲ; ಇಲ್ಲವೆ ಅವಳು ಬೆಳೆ ಸಿದ ಎಲ್ಲಾ ಕುಮಾರರಲ್ಲಿ ಅವಳ ಕೈಯನ್ನು ಹಿಡಿ ಯುವವನು ಒಬ್ಬನೂ ಇಲ್ಲ.

ಯೆರೆಮಿಯ 19:11

ಆದರೆ ಕರ್ತನು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾನೆ; ಆದದರಿಂದ ನನ್ನನ್ನು ಹಿಂಸಿಸು ವವರು ಎಡವುವರು, ಗೆಲ್ಲುವದಿಲ್ಲ; ಅನುಕೂಲ ವಾಗದೆ ಇದ್ದದರಿಂದ ಅವರು ಬಹಳ ನಾಚಿಕೆಪಡುವರು; ಅವರ ಗಲಿಬಿಲಿಯು ನಿತ್ಯವಾಗಿರುವದು. ಅದು ಮರೆತು ಹೋಗಲ್ಪಡುವದಿಲ್ಲ.

ಯೆರೆಮಿಯ 22:28

ಕನಸು ಉಂಟಾದ ಪ್ರವಾದಿಯು ಕನಸನ್ನು ತಿಳಿಸಲಿ, ನನ್ನ ವಾಕ್ಯ ಉಂಟಾದವನು ನನ್ನ ವಾಕ್ಯವನ್ನು ನಂಬಿಗಸ್ತನಾಗಿ ಹೇಳಲಿ; ಗೋಧಿಗೂ ಹೊಟ್ಟಿಗೂ ಸಂಬಂಧವೇನೆಂದು ಕರ್ತನು ಅನ್ನುತ್ತಾನೆ.

ವಿಲಾಪಗಳು 2:21

ಎಳೇ ಪ್ರಾಯದವರೂ ಮುದುಕರೂ ಬೀದಿಗಳಲ್ಲಿ ಬಿದ್ದಿದ್ದಾರೆ; ನನ್ನ ಕನ್ಯೆಯರೂ ಯೌವನಸ್ಥರೂ ಕತ್ತಿಯಿಂದ ಹತರಾಗಿದ್ದಾರೆ; ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿ; ಕನಿಕರಿಸದೆ ಕೊಂದುಹಾಕಿ ಬಿಟ್ಟಿದ್ದೀ.ಪರಿಶುದ್ಧ ದಿನದಲ್ಲಿ ಆದ ಹಾಗೆ ಸುತ್ತಲೂ ನನ್ನ ಭಯಾನಕಗಳನ್ನು ನೀನು ಕರೆದಿರುವಿ, ಆದರೆ ಕರ್ತನ ಕೋಪದ ದಿನದಲ್ಲಿ ತಪ್ಪಿಸಿಕೊಂಡು ಉಳಿದವನು ಒಬ್ಬನೂ ಇಲ್ಲ; ನಾನು ಸಾಕಿ ಬೆಳೆಸಿದವರನ್ನು ನನ್ನ ಶತ್ರುವು ನಿರ್ಮೂಲ ಮಾಡಿದ್ದಾನೆ.

ವಿಲಾಪಗಳು 5:12

ಪ್ರಭುಗಳು ಅವರ ಕೈಯಿಂದ ಗಲ್ಲಿಗೇರಿಸಲ್ಪಟ್ಟರು; ಹಿರಿಯರ ಮುಖಗಳು ಗೌರವಿ ಸಲ್ಪಡಲಿಲ್ಲ.

ಹೊಶೇಯ 8:8

ಇಸ್ರಾಯೇಲು ನುಂಗಲ್ಪಟ್ಟಿದೆ; ಅವರು ಅನ್ಯಜನಾಂಗಗಳಲ್ಲಿ ಮೆಚ್ಚಿಕೆಯಿಲ್ಲದ ಪಾತ್ರೆಯ ಹಾಗೆ ಇದ್ದಾರೆ.

ಜೆಕರ್ಯ 9:13

ಯೆಹೂದವನ್ನು ನನಗಾಗಿ ಬೊಗ್ಗಿಸಿದಾಗ ಎಫ್ರಾಯಾಮನ್ನು ಬಿಲ್ಲುಗಳಿಂದ ತುಂಬಿಸಿದ್ದೇನೆ; ಚೀಯೋನೇ, ನಿನ್ನ ಕುಮಾರರನ್ನು ಗ್ರೀಕ್‌ ಕುಮಾರರಿಗೆ ವಿರೋಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯಂತೆ ಮಾಡಿದ್ದೇನೆ.

ರೋಮಾಪುರದವರಿಗೆ 9:21

ಒಂದು ಪಾತ್ರೆಯನ್ನು ಗೌರ ವಕ್ಕೂ ಇನ್ನೊಂದನ್ನು ಅಗೌರವಕ್ಕೂ ಒಂದೇ ಮುದ್ದೆ ಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?

2 ಕೊರಿಂಥದವರಿಗೆ 4:7

ಬಲಾಧಿಕ್ಯವು ನಮ್ಮದಲ್ಲ, ಅದು ದೇವರದಾಗಿ ರುವ ಹಾಗೆ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.

2 ತಿಮೋಥೆಯ 2:20

ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಕೆಲವು ಗೌರವಕ್ಕೂ ಕೆಲವು ಅಗೌರವಕ್ಕೂ ಇರುತ್ತವೆ.

Interlinear

Choose Theme