Home Bibles ವಿಲಾಪಗಳು 2:22 · ಕನ್ನಡ ಬೈಬಲ್
ವಿಲಾಪಗಳು 2:22 · ಕನ್ನಡ ಬೈಬಲ್

ಪರಿಶುದ್ಧ ದಿನದಲ್ಲಿ ಆದ ಹಾಗೆ ಸುತ್ತಲೂ ನನ್ನ ಭಯಾನಕಗಳನ್ನು ನೀನು ಕರೆದಿರುವಿ, ಆದರೆ ಕರ್ತನ ಕೋಪದ ದಿನದಲ್ಲಿ ತಪ್ಪಿಸಿಕೊಂಡು ಉಳಿದವನು ಒಬ್ಬನೂ ಇಲ್ಲ; ನಾನು ಸಾಕಿ ಬೆಳೆಸಿದವರನ್ನು ನನ್ನ ಶತ್ರುವು ನಿರ್ಮೂಲ ಮಾಡಿದ್ದಾನೆ.

Cross references

ದ್ವಿತೀಯೋಪದೇಶಕಾಂಡ 28:18

ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಶಾಪ.

2 ದಿನವೃತ್ತಾಂತ 36:17

ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.

ಕೀರ್ತನೆಗಳು 31:13

ನಾನು ಅನೇಕರ ಚಾಡಿಯನ್ನು ಕೇಳಿದ್ದೇನೆ; ಸುತ್ತಲೂ ಭಯ ಅದೆ; ನನಗೆ ವಿರೋಧ ವಾಗಿ ಆಲೋಚನೆ ಮಾಡಿ ನನ್ನ ಪ್ರಾಣ ತೆಗೆದು ಕೊಳ್ಳುವದಕ್ಕೆ ಅವರು ಯೋಚಿಸುತ್ತಾರೆ.

ಯೆಶಾಯ 24:17

ಓ, ಭೂಮಿಯ ನಿವಾಸಿಗಳೇ, ಭಯವೂ ಗುಂಡಿಯೂ ಬಲೆಯೂ ನಿಮಗೆ ಕಾದಿವೆ.

ಯೆರೆಮಿಯ 6:25

ನಿಮ್ಮ ಪಿತೃಗಳು ಐಗುಪ್ತ ದೇಶವನ್ನು ಬಿಟ್ಟು ಹೋದಂದಿನಿಂದ ಇಂದಿನ ವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ದಿನ ದಿನವೂ ಬೆಳಿಗ್ಗೆ ಎದ್ದು ನಿಮ್ಮ ಬಳಿಗೆ ಕಳುಹಿಸಿದೆನು.

ಯೆರೆಮಿಯ 14:19

ಆದದರಿಂದ ಕರ್ತನು -- ನೀನು ಹಿಂತಿರುಗಿ ಕೊಂಡರೆ ನಾನು ನಿನ್ನನ್ನು ತಿರುಗಿ ತರುವೆನು; ಆಗ ನೀನು ನನ್ನ ಮುಂದೆ ನಿಲ್ಲುವಿ; ನೀನು ಅಮೂಲ್ಯವಾದ ದ್ದನ್ನು ನೀಚವಾದದರೊಳಗಿಂದ ಹೊರಗೆ ತಂದರೆ ನನ್ನ ಬಾಯಿಯ ಹಾಗಿರುವಿ; ಅವರು ನಿನ್ನ ಕಡೆಗೆ ತಿರುಗಲಿ, ಆದರೆ ನೀನು ಅವರ ಕಡೆಗೆ ಹಿಂತಿರುಗಬೇಡ.

ಯೆರೆಮಿಯ 16:2

ಅವರ ಮಕ್ಕಳು ಅವರ ಬಲಿಪೀಠಗ ಳನ್ನೂ ಹಸುರಾದ ಗಿಡಗಳಲ್ಲಿಯೂ ಎತ್ತರವಾದ ಗುಡ್ಡಗಳ ಮೇಲೆಯೂ ಇರುವ ಅವರ ತೋಪುಗಳನ್ನೂ ಜ್ಞಾಪಕಮಾಡಿಕೊಳ್ಳುತ್ತಾರಲ್ಲಾ.

ಯೆರೆಮಿಯ 20:3

ಆಗ ಯೆರೆವಿಾಯನು ಅವರಿಗೆ ಹೇಳಿದ್ದೇನಂ ದರೆ--ಚಿದ್ಕೀಯನಿಗೆ ಹೀಗೆ ಹೇಳಿರಿ--

ಯೆರೆಮಿಯ 21:7

ನಿನಗೆ ವಿರೋಧವಾಗಿ ತಮ್ಮತಮ್ಮ ಆಯುಧಗಳಿಂದ ನಾಶಮಾಡುವವರನ್ನು ಸಿದ್ಧಮಾಡು ತ್ತೇನೆ; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.

ಯೆರೆಮಿಯ 46:5

ಗಾಜಾದ ಮೇಲೆ ಬೋಳುತನ ಬಂತು; ಅಷ್ಕೆ ಲೋನು ಅವರ ತಗ್ಗಿನ ಉಳಿದವುಗಳಿಂದ ತೆಗೆದು ಹಾಕಲ್ಪಟ್ಟಿತು; ಎಷ್ಟು ಕಾಲ ನಿನಗೆ ನೀನೇ ಗಾಯಮಾಡಿ ಕೊಳ್ಳುವಿ?

ಹೊಶೇಯ 9:12

ಅವರು ತಮ್ಮ ಮಕ್ಕಳನ್ನು ಬೆಳೆಸಿದಾಗ್ಯೂ ಒಬ್ಬ ಮನುಷ್ಯನು ಉಳಿಯದ ಹಾಗೆ ನಾನು ಅವರನ್ನು ಅನಾಥರನ್ನಾಗಿ ಮಾಡುವೆನು. ಹೌದು, ನಾನು ಅವ ರನ್ನು ಬಿಟ್ಟು ಹೋಗುವಾಗ ಅವರಿಗೆ ಅಯ್ಯೋ!

ಹೊಶೇಯ 9:13

ನಾನು ತೂರನ್ನು ನೊಡಿದಂತೆ ಎಫ್ರಾಯಾಮು ರಮ್ಯ ಸ್ಥಳದಲ್ಲಿ ನೆಡಲ್ಪಟ್ಟಿದೆ; ಆದರೆ ಎಫ್ರಾಯಾಮು ಕೊಲ್ಲುವವನಿಗೆ ತನ್ನ ಮಕ್ಕಳನ್ನು ಹೊರಗೆ ತರುವದು.

ಆಮೋಸ 9:1

ಕರ್ತನು ಯಜ್ಞವೇದಿಯ ಮೇಲೆ ನಿಂತಿರು ವದನ್ನು ನಾನು ಕಂಡೆನು. ಆತನು ಹೇಳಿದ್ದೇ ನಂದರೆ--ಹೊಸ್ತಿಲುಗಳು ಕದಲುವಂತೆ ಆಧಾರ ಬೋದಿಗೆಗಳನ್ನು ಬಲವಾಗಿ ಹೊಡೆದು ಅವು ಎಲ್ಲರ ತಲೆಗಳ ಮೇಲೆ ಬೀಳುವ ಹಾಗೆ ಅವುಗಳನ್ನು ಕಡಿದು ಬಿಡು; ಅವರಲ್ಲಿ ಉಳಿದವರನ್ನು ನಾನು ಕೊಲ್ಲುವೆನು; ಅವರಲ್ಲಿ ಓಡಿ ಹೋಗುವವನು ಓಡಿಹೋಗಲಾಗು ವದಿಲ್ಲ; ಅವರಲ್ಲಿ ತಪ್ಪಿಸಿಕೊಳ್ಳುವವನು ತಪ್ಪಿಸಿಕೊಳ್ಳ ಲಾಗುವದಿಲ್ಲ.

ಲೂಕ 23:29

ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ.

Interlinear

Choose Theme