Home Bibles ☰ Books ವಿಲಾಪಗಳು 1:22 · ಕನ್ನಡ ಬೈಬಲ್
ವಿಲಾಪಗಳು 1:22 · ಕನ್ನಡ ಬೈಬಲ್

ಅವರ ಕೆಡುಕೆಲ್ಲಾ ನಿನ್ನ ಮುಂದೆ ಬರಲಿ; ನನ್ನ ಎಲ್ಲಾ ದ್ರೋಹಗಳ ನಿಮಿತ್ತ ನೀನು ನನಗೆ ಮಾಡಿದ ಪ್ರಕಾರವೇ ಅವರಿಗೆ ಮಾಡು; ನನ್ನ ನಿಟ್ಟು ಸಿರುಗಳು ಅನೇಕವಾಗಿವೆ; ನನ್ನ ಹೃದಯವು ಕುಂದಿದೆ.

Cross references

ನೆಹೆಮ್ಯ 4:4

ನಮ್ಮ ದೇವರೇ, ಕೇಳು; ಯಾಕಂದರೆ ನಾವು ತಿರಸ್ಕರಿಸಲ್ಪಟ್ಟವರಾಗಿದ್ದೇವೆ. ನೀನು ಅವರ ನಿಂದೆಯನ್ನು ಅವರ ತಲೆಗಳ ಮೇಲೆ ತಿರುಗುವಂತೆ ಮಾಡಿ ಸೆರೆಯ ದೇಶದಲ್ಲಿ ಅವರನ್ನು ಕೊಳ್ಳೆಯಾಗಿ ಒಪ್ಪಿಸು.

ಕೀರ್ತನೆಗಳು 79:10

ಅವರ ದೇವರು ಎಲ್ಲಿ ಎಂದು ಅನ್ಯಜನಾಂಗಗಳು ಯಾಕೆ ಹೇಳಬೇಕು? ಚೆಲ್ಲಿರುವ ನಿನ್ನ ಸೇವಕರ ರಕ್ತದ ಪ್ರತಿ ದಂಡನೆಯನ್ನು ನಮ್ಮ ಕಣ್ಣುಗಳ ಮುಂದೆ ಅನ್ಯ ಜನಾಂಗಗಳಲ್ಲಿ ತಿಳಿಯಲ್ಪಡಲಿ.

ಕೀರ್ತನೆಗಳು 109:14

ಅವನ ತಂದೆಗಳ ಅಕ್ರಮವು ಕರ್ತನ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ.

ಕೀರ್ತನೆಗಳು 137:7

ಹಾಳುಮಾಡಿರಿ, ಅದರ ಅಸ್ತಿವಾರದ ವರೆಗೆ ಹಾಳು ಮಾಡಿರಿ ಎಂದು ಹೇಳಿದ ಎದೋಮಿನ ಮಕ್ಕಳನ್ನು ಯೆರೂಸಲೇಮಿನ ದಿವಸದಲ್ಲಿ ಕರ್ತನೇ, ಜ್ಞಾಪಕ ಮಾಡಿಕೋ.

ಯೆಶಾಯ 13:7

ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು.

ಯೆರೆಮಿಯ 8:18

ಅವರು ತ್ವರೆಪಟ್ಟು ನಮಗೋಸ್ಕರ ಗೋಳಾಟವನ್ನು ಎತ್ತಲಿ; ನಮ್ಮ ಕಣ್ಣು ಗಳು ಕಣ್ಣೀರು ಸುರಿಸಲಿ; ನಮ್ಮ ರೆಪ್ಪೆಗಳು ನೀರು ಎರೆಯಲಿ.

ಯೆರೆಮಿಯ 30:16

ಕರ್ತನು ಹೀಗೆ ಹೇಳು ತ್ತಾನೆ--ನಿನ್ನ ಸ್ವರವನ್ನು ಅಳದ ಹಾಗೆಯೂ ಕಣ್ಣುಗಳು ಕಣ್ಣೀರು ಇಡದ ಹಾಗೆಯೂ ಬಿಗಿ ಹಿಡಿ; ನಿನ್ನ ಕೆಲಸಕ್ಕೆ ಪ್ರತಿಫಲ ಉಂಟೆಂದು ಕರ್ತನು ಅನ್ನುತ್ತಾನೆ; ಅವರು ಶತ್ರುವಿನ ದೇಶದಿಂದ ತಿರುಗಿ ಬರುವರು.

ವಿಲಾಪಗಳು 1:13

ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.

ವಿಲಾಪಗಳು 5:17

ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ; ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.

Interlinear

Choose Theme