Home Bibles ನ್ಯಾಯಾಧಿಪತಿಗಳು 9:57 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 9:57 · ಕನ್ನಡ ಬೈಬಲ್

ಇದಲ್ಲದೆ ಶೆಕೆಮಿನ ಮನುಷ್ಯರು ಮಾಡಿದ ಸಮಸ್ತ ಕೆಟ್ಟತನವನ್ನು ಅವರ ತಲೆಗಳ ಮೇಲೆ ದೇವರು ಬರಮಾಡಿದನು. ಯೆರುಬ್ಬಾಳನ ಮಗನಾದ ಯೋತಾಮನ ಶಾಪವು ಅವರ ಮೇಲೆ ಬಂತು.

Cross references

ಯೆಹೋಶುವ 6:26

ಆ ಕಾಲದಲ್ಲಿ ಯೆಹೋಶುವನು ಅವರಿಗೆ--ಈ ಯೆರಿಕೋ ಪಟ್ಟಣವನ್ನು ತಿರಿಗಿ ಕಟ್ಟಿಸುವ ಮನುಷ್ಯನು ಕರ್ತನ ಮುಂದೆ ಶಪಿಸಲ್ಪಡಲಿ; ತನ್ನ ಚೊಚ್ಚಲ ಮಗನಲ್ಲಿ ಅದರ ಅಸ್ತಿವಾರವನ್ನು ಹಾಕುವನು, ತನ್ನ ಕೊನೆಯ ಮಗನಲ್ಲಿ ಅದರ ಬಾಗಲುಗಳನ್ನು ಇಡುವನು ಎಂದು ಆಣೆ ಇಟ್ಟು ಹೇಳಿದನು.ಹೀಗೆಯೇ ಕರ್ತನು ಯೆಹೋಶುವನ ಸಂಗಡ ಇದ್ದನು; ಅವನ ಕೀರ್ತಿ ದೇಶದಲ್ಲೆಲ್ಲಾ ಇತ್ತು.

ನ್ಯಾಯಾಧಿಪತಿಗಳು 1:7

ಆಗ ಅದೋನೀಬೆಜೆಕನು--ನಾನು ಕೈಕಾಲು ಗಳ ಹೆಬ್ಬೆರಳುಗಳನ್ನು ಕತ್ತರಿಸಿದ ಎಪ್ಪತ್ತು ಮಂದಿ ಅರಸುಗಳು ನನ್ನ ಮೇಜಿನ ಕೆಳಗೆ ತಮ್ಮ ಆಹಾರ ವನ್ನು ಕೂಡಿಸಿದರು; ನಾನು ಹೇಗೆ ಮಾಡಿದೆನೋ ಹಾಗಾಯೇ ದೇವರು ನನಗೆ ಮುಯ್ಯಿಗೆ ಮುಯ್ಯಿಮಾಡಿದ್ದಾನೆ ಅಂದನು. ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದರು; ಅವನು ಅಲ್ಲಿ ಸತ್ತನು.

ನ್ಯಾಯಾಧಿಪತಿಗಳು 9:20

ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನ ಜನರನ್ನೂ ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನ ರಿಂದಲೂ ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ ಅಂದನು.

ನ್ಯಾಯಾಧಿಪತಿಗಳು 9:45

ಅಬೀಮೆಲೆಕನು ಆ ದಿನವೆಲ್ಲಾ ಪಟ್ಟಣದ ಮೇಲೆ ಯುದ್ಧಮಾಡಿ ಪಟ್ಟಣವನ್ನು ಹಿಡಿದು ಅದರಲ್ಲಿದ್ದ ಜನ ವನ್ನು ಕೊಂದು ಪಟ್ಟಣವನ್ನು ಕೆಡವಿಬಿಟ್ಟು ಅದರಲ್ಲಿ ಉಪ್ಪು ಎರಚಿಬಿಟ್ಟನು.

2 ಸಮುವೇಲ 3:39

ನಾನು ಅರಸನಾಗಿ ಅಭಿಷೇಕಿಸ ಲ್ಪಟ್ಟಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಕುಮಾರ ರಾದ ಈ ಮನುಷ್ಯರು ನನಗೆ ಕಠಿಣರಾಗಿದ್ದಾರೆ. ಕೆಟ್ಟತನ ಮಾಡುವವನಿಗೆ ಕರ್ತನು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವನು ಅಂದನು.

1 ಅರಸುಗಳು 16:34

ಅವನ ದಿವಸಗಳಲ್ಲಿ ಬೇತೇಲಿನವನಾದ ಹೀಯೇ ಲನು ಯೆರಿಕೋವನ್ನು ಕಟ್ಟಿಸಿದನು; ಕರ್ತನು ನೂನನ ಮಗನಾದ ಯೆಹೋಶುವನ ಮುಖಾಂತರ ಹೇಳಿದ್ದ ವಾಕ್ಯದ ಪ್ರಕಾರವೇ ಅವನು ಅದಕ್ಕೆ ಅಸ್ತಿವಾರವನ್ನು ಹಾಕಿದಾಗ ತನ್ನ ಚೊಚ್ಚಲ ಮಗನಾದ ಅಬೀರಾಮನೂ ಅದರ ಬಾಗಲುಗಳನ್ನು ಇಟ್ಟಾಗ ಅವನ ಚಿಕ್ಕಮಗನಾದ ಸೆಗೂಬನೂ ಸತ್ತರು.

ಕೀರ್ತನೆಗಳು 7:17

ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು.

ಕೀರ್ತನೆಗಳು 94:23

ಅವರ ಅಪರಾಧವನ್ನು ಅವರ ಮೇಲೆ ತಿರಿಗಿ ಬರಮಾಡುವನು; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಕರ್ತನು ಅವರನ್ನು ಸಂಹರಿಸುವನು.

ಸಾಮೇತಿಗಳು 5:22

ದುಷ್ಟ ನನ್ನು ಅವನ ಸ್ವಂತ ಅಕ್ರಮಗಳೇ ಹಿಡಿಯುವವು; ತನ್ನ ಪಾಪಗಳ ಪಾಶಗಳಿಂದಲೇ ಅವನು ಬಂಧಿಸಲ್ಪಡು ವನು.ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು.

ಯೆಶಾಯ 3:11

ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.

Interlinear

Choose Theme