Home Bibles ☰ Books ನ್ಯಾಯಾಧಿಪತಿಗಳು 9:44 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 9:44 · ಕನ್ನಡ ಬೈಬಲ್

ಅಬೀಮೆಲೆಕನೂ ಅವನ ಸಂಗಡ ಇದ್ದ ಜನರ ಗುಂಪೂ ಮುಂದಕ್ಕೆ ಓಡಿ ಪಟ್ಟಣದ ಪ್ರವೇಶ ದ್ವಾರದಲ್ಲಿ ನಿಂತರು. ಮಿಕ್ಕಾದ ಎರಡು ಗುಂಪು ಜನರು ಹೊಲದಲ್ಲಿರುವವರೆ ಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿಬಿಟ್ಟರು.

Cross references

ನ್ಯಾಯಾಧಿಪತಿಗಳು 9:15

ಮುಳ್ಳಿನ ಗಿಡವು ಮರಗಳಿಗೆ--ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವದು ಸತ್ಯ ವಾದರೆ ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು ಲೆಬನೋನಿನ ದೇವದಾರುಗಳನ್ನು ದಹಿಸಿಬಿಡಲಿ ಅಂದಿತು.

ನ್ಯಾಯಾಧಿಪತಿಗಳು 9:20

ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನ ಜನರನ್ನೂ ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನ ರಿಂದಲೂ ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ ಅಂದನು.

ಗಲಾತ್ಯದವರಿಗೆ 5:15

ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರವಾಗಿರ್ರಿ.

Interlinear

Choose Theme