Home Bibles ನ್ಯಾಯಾಧಿಪತಿಗಳು 8:4 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 8:4 · ಕನ್ನಡ ಬೈಬಲ್

ಗಿದ್ಯೋನನು ಯೊರ್ದನಿಗೆ ಬಂದು ಅದನ್ನು ದಾಟಿ ಅವನೂ ಅವನ ಸಂಗಡ ಇದ್ದ ಮುನ್ನೂರು ಜನರೂ ದಣಿದವರಾಗಿಯೂ ಹಿಂದಟ್ಟುವವರಾಗಿಯೂ ಇದ್ದರು.

Cross references

ನ್ಯಾಯಾಧಿಪತಿಗಳು 7:25

ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನ್ನೂ ಜೇಬನ ಹಿಡಿದು ಓರೇಬನ್ನು ಓರೇಬೆಂಬ ಬಂಡೆಯಲ್ಲಿಯೂ ಜೇಬನ್ನು ಜೇಬನ ದ್ರಾಕ್ಷೇ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ ಮಿದ್ಯಾನ್ಯರನ್ನು ಹಿಂದಟ್ಟಿ ಓರೇಬ ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು.

1 ಸಮುವೇಲ 14:28

ಆಗ ಜನರಲ್ಲಿ ಒಬ್ಬನು ಅವನಿಗೆ--ಈ ಹೊತ್ತು ಆಹಾರ ತಿನ್ನುವವನು ಶಪಿಸಲ್ಪಡಲಿ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ ಅಂದನು.

1 ಸಮುವೇಲ 14:31

ಜನರು ಆ ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋ ನಿನ ವರೆಗೂ ಫಿಲಿಷ್ಟಿಯರನ್ನು ಸದೆಬಡಿದದರಿಂದ ಅವರು ಬಹಳವಾಗಿ ದಣಿದುಹೋದರು.

1 ಸಮುವೇಲ 30:8

ದಾವೀದನು ಕರ್ತನಿಗೆ--ನಾನು ಆ ದಂಡಿನ ಹಿಂದೆ ಬೆನ್ನಟ್ಟಲೋ? ನಾನು ಅವರನ್ನು ಹಿಂದಟ್ಟಬಹುದೋ ಎಂದು ಕೇಳಿದನು. ಅದಕ್ಕೆ ಆತನು--ನೀನು ಹಿಂದಟ್ಟು; ನಿಶ್ಚಯವಾಗಿ ನೀನು ಅವರನ್ನು ಹಿಂದಟ್ಟಿ ಎಲ್ಲರನ್ನು ಬಿಡಿಸಿಕೊಳ್ಳುವಿ ಅಂದನು.

1 ಸಮುವೇಲ 30:10

ದಾವೀದನು, ತಾನೂ ನಾನೂರು ಜನರೂ ಹಿಂದಟ್ಟಿಹೋದರು. ಬೆಸೋರಿನ ಹಳ್ಳವನ್ನು ದಾಟಲಾರದೆ ದಣಿದಿದ್ದದರಿಂದ ಇನ್ನೂರು ಜನರು ಅಲ್ಲಿ ನಿಂತರು.

2 ಕೊರಿಂಥದವರಿಗೆ 4:8

ಎಲ್ಲಾ ಕಡೆಗಳಲ್ಲಿ ನಮಗೆ ಕಳವಳ ವಿದ್ದರೂ ನಾವು ಸಂಕಟಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ.

2 ಕೊರಿಂಥದವರಿಗೆ 4:16

ಈ ಕಾರಣದಿಂದ ನಾವು ಧೈರ್ಯಗೆಡುವದಿಲ್ಲ; ಆದರೆ ನಮ್ಮ ಹೊರಮನುಷ್ಯನು ನಾಶವಾಗುತಾ ಇದ್ದರೂ ನಮ್ಮ ಒಳಮನುಷ್ಯನು ದಿನೇದಿನೇ ಹೊಸಬ ನಾಗುತ್ತಾ ಇರುವನು.

ಗಲಾತ್ಯದವರಿಗೆ 6:9

ಒಳ್ಳೆದನ್ನು ಮಾಡುವದರಲ್ಲಿ ಬೇಸರ ಗೊಳ್ಳದೆ ಇರೋಣ. ಯಾಕಂದರೆ ನಾವು ಮನಗುಂದ ದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುವೆವು.

ಹೆಬ್ರಿಯರಿಗೆ 12:1

ಆದಕಾರಣ ಸಾಕ್ಷಿಯವರ ಇಷ್ಟು ದೊಡ್ಡ ಮೇಘವು ನಮ್ಮ ಸುತ್ತಲು ಇರುವದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು

Interlinear

Choose Theme