ಮಧ್ಯ ರಾತ್ರಿ ಮೊದಲನೆಯ ಜಾವದಲ್ಲಿ ಕಾವಲು ಗಾರರನ್ನು ಬದಲಾಯಿಸಿದಾಗ ಗಿದ್ಯೋನನೂ ಅವನ ಸಂಗಡ ಇದ್ದ ನೂರು ಮಂದಿಯೂ ದಂಡಿನ ಹೊರಗೆ ಬಂದು ತುತೂರಿಗಳನ್ನು ಊದಿ ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದರು.
Cross references
ಬೆಳಗಿನ ಜಾವದಲ್ಲಿ ಕರ್ತನು ಅಗ್ನಿ ಮೇಘಗಳ ಸ್ತಂಭದೊಳಗಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅದನ್ನು ತೊಂದರೆಪಡಿಸಿ
ಆ ಮುನ್ನೂರು ಜನರನ್ನು ಮೂರು ಗುಂಪಾಗಿ ವಿಭಾಗಿಸಿ ಎಲ್ಲರ ಕೈಯಲ್ಲಿ ತುತೂರಿಗಳನ್ನೂ ಬರಿದಾದ ಕೊಡಗಳನ್ನೂ ಅವುಗಳಲ್ಲಿ ಇಡುವ ಪಂಜುಗಳನ್ನೂ ಕೊಟ್ಟು ಅವರಿಗೆ ಹೇಳಿದ್ದೇ ನಂದರೆ--
ಕಬ್ಬಿಣದ ಕೋಲಿನಿಂದ ಅವರನ್ನು ಮುರಿದುಬಿಡುವಿ. ಕುಂಬಾರನ ಗಡಿಗೆಯ ಹಾಗೆ ಅವ ರನ್ನು ಒಡೆದು ಚೂರುಚೂರಾಗಿ ಮಾಡಿಬಿಡುವಿ.
ಆಗ ನಾನು--ಹಾ, ದೇವರಾದ ಕರ್ತನೇ, ಇಗೋ, ಪ್ರವಾದಿಗಳು ಅವರಿಗೆ--ನೀವು ಕತ್ತಿಯನ್ನು ನೋಡುವದಿಲ್ಲ, ನಿಮಗೆ ಕ್ಷಾಮವು ಬಾರದು, ಆದರೆ ಕರ್ತನು ನಿಮಗೆ ಈ ಸ್ಥಳದಲ್ಲಿ ಸ್ಥಿರ ಸಮಾಧಾನ ಕೊಡುತ್ತಾನೆಂದು ಹೇಳುತ್ತಾರೆ ಅಂದೆನು.
ಯೆರೆವಿಾಯನು ಈ ಮಾತುಗಳನ್ನು ಪ್ರವಾದಿಸಲಾಗಿ ಕರ್ತನ ಆಲಯದಲ್ಲಿ ಮುಖ್ಯ ಅಧಿಕಾರಿಯಾಗಿದ್ದ ಯಾಜಕನಾದ ಇಮ್ಮೇರನ ಮಗನಾದ ಪಷ್ಹೂರನು ಕೇಳಿದನು.
ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು.
ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.
ಇಗೋ, ಕಳ್ಳನು ಬರುವಂತೆ ನಾನು ಬರುತ್ತೇನೆ. ನಿರ್ವಾಣನಾಗಿ ತಿರುಗಾಡುವಾಗ ಜನರು ತನ್ನ ನಾಚಿಕೆಯನ್ನು ನೋಡಿಯಾರೆಂದು ಎಚ್ಚರ ವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು.