Home Bibles ☰ Books ನ್ಯಾಯಾಧಿಪತಿಗಳು 6:9 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 6:9 · ಕನ್ನಡ ಬೈಬಲ್

ಅವನು ಅವರಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ--ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿದೆನು; ದಾಸತ್ವದ ಮನೆ ಯಿಂದ ಹೊರಡ ಮಾಡಿದೆನು; ಐಗುಪ್ತ್ಯರ ಕೈಯಿಂದ ಲೂ ನಿಮ್ಮನ್ನು ಬಾಧೆಪಡಿಸುವವರೆಲ್ಲರ ಕೈಯಿಂದಲೂ ತಪ್ಪಿಸಿ ಅವರನ್ನು ನಿಮ್ಮ ಮುಂದೆ ಹೊರಗೆಹಾಕಿ ಅವರ ದೇಶವನ್ನು ನಿಮಗೆ ಕೊಟ್ಟೆನು.

Cross references

ನಿರ್ಗಮಕಾಂಡ 33:2

ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ ಅಮೋರಿಯರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಹೊರಡಿಸಿ ಬಿಡುವೆನು.

1 ಸಮುವೇಲ 10:18

ನಾನು ನಿಮ್ಮನ್ನು ಐಗುಪ್ತ್ಯದಿಂದ ಬರಮಾಡಿ ಐಗುಪ್ತರ ಕೈಯಿಂದಲೂ ನಿಮ್ಮನ್ನು ಬಾಧೆಪಡಿಸಿದ ಸಮಸ್ತ ರಾಜ್ಯಗಳ ಕೈಯಿಂದಲೂ ಬಿಡಿಸಿದೆನು.

ಕೀರ್ತನೆಗಳು 44:2

ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.

ಕೀರ್ತನೆಗಳು 105:43

ಆತನು ತನ್ನ ಜನರನ್ನು ಆನಂದದಿಂದಲೂ ತಾನು ಆದುಕೊಂಡವರನ್ನು ಉತ್ಸಾ ಹದಿಂದಲೂ ಹೊರಗೆ ಬರಮಾಡಿದನು,

Interlinear

Choose Theme