ಓ ಅರಸರೇ, ಕೇಳಿರಿ; ಓ ಪ್ರಭುಗಳೇ, ಕಿವಿಗೊಡಿರಿ; ನಾನು, ನಾನೇ ಕರ್ತನಿಗೆ ಹಾಡುವೆನು; ಇಸ್ರಾಯೇಲಿನ ದೇವರಾದ ಕರ್ತನನ್ನು ಕೀರ್ತಿಸುವೆನು.
Cross references
ಇಗೋ, ನಾನು ನಾನಾಗಿಯೇ ಆಕಾಶದ ಕೆಳಗೆ ಜೀವಶ್ವಾಸವಿರುವವುಗಳನ್ನೆಲ್ಲಾ ನಾಶ ಮಾಡುವದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ; ಆಗ ಭೂಮಿಯಲ್ಲಿರುವದೆಲ್ಲಾ ಸತ್ತುಹೋಗುವದು.
ಇಗೋ, ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡಲೂ ನಿಮ್ಮ ತರುವಾಯ ನಿಮ್ಮ ಸಂತತಿ ಯವರ ಸಂಗಡಲೂ
ನಾನು ಇಗೋ, ನಾನೇ ಅವನೊಂದಿಗೆ ದಾನ್ ಕುಲದವನೂ ಅಹೀಸಾ ಮಾಕನ ಮಗನೂ ಆದ ಒಹೊಲೀಯಾಬನನ್ನು ಕೊಟ್ಟಿ ದ್ದೇನೆ. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವ ದಕ್ಕೆ ಜಾಣನಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನು ಇಟ್ಟಿದ್ದೇನೆ.
ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.
ಓ ಆಕಾಶಗಳೇ ಕಿವಿಗೊಡಿರಿ, ನಾನು ಮಾತನಾಡುತ್ತೇನೆ; ಓ ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಕೇಳು.
ಕರ್ತನ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.
ದೆಬೋರಳಾದ ನಾನು ಏಳುವ ಮಟ್ಟಿಗೂ ಇಸ್ರಾಯೇಲಿನಲ್ಲಿ ತಾಯಾಗಿ ನಾನು ಏಳುವ ಮಟ್ಟಿಗೂ ಹಳ್ಳಿಗಳ ನಿವಾಸಿಗಳು ನಿಂತುಹೋದರು; ಇಸ್ರಾಯೇಲಿನಲ್ಲಿ ನಿಂತುಹೋದರು.
ಆಗ ಎಲೀಯನು ಜನರಿಗೆ--ಕರ್ತನ ಪ್ರವಾದಿ ಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ; ಆದರೆ ಬಾಳನ ಪ್ರವಾದಿಗಳು ನಾನೂರಐವತ್ತು ಮಂದಿ ಇದ್ದಾರೆ.
ಅದಕ್ಕವನು--ಸೈನ್ಯಗಳ ದೇವ ರಾದ ಕರ್ತನಿಗೋಸ್ಕರ ನಾನು ಬಹು ರೋಷವುಳ್ಳವ ನಾಗಿದ್ದೇನೆ; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿ ಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನು ಹೌದು, ನಾನೊಬ್ಬನೇ ಉಳಿದಿ ದ್ದೇನೆ; ಆದರೆ ಅವರು ನನ್ನ ಪ್ರಾಣವನ್ನು ತೆಗೆದುಬಿಡಲು ಹುಡುಕುತ್ತಾರೆ ಅಂದನು.
ಅದಕ್ಕೆ ಅವನು--ಸೈನ್ಯಗಳ ದೇವರಾದ ಕರ್ತನಿಗೋಸ್ಕರ ನಾನು ಮಹಾ ರೋಷವು ಳ್ಳವನಾಗಿದ್ದೆನು; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನೊಬ್ಬನೇ ಉಳಿದಿದ್ದೇನೆ; ಅವರು ನನ್ನ ಪ್ರಾಣವನ್ನು ತೆಗೆಯಲು ಹುಡುಕುತ್ತಾರೆ ಅಂದನು.
ಇದಲ್ಲದೆ ಅರಸನಾಗಿರುವ ಆರ್ತಷಸ್ತನಾದ ನಾನು ನದಿಯ ಆಚೆಯಲ್ಲಿರುವ ಎಲ್ಲಾ ಬೊಕ್ಕಸದವ ರಿಗೆ ಕೊಡುವ ಅಪ್ಪಣೆ ಏನಂದರೆ--
ಆದದರಿಂದ ಓ ಅರಸುಗಳೇ, ಈಗ ಜ್ಞಾನವಂತ ರಾಗಿರಿ; ಭೂ ನ್ಯಾಯಾಧಿಪತಿಗಳೇ, ಶಿಕ್ಷಣ ಪಡೆಯಿರಿ.
ಈಗ ನನ್ನ ಸುತ್ತಲಿರುವ ಶತ್ರುಗಳ ಮೇಲೆ ನನ್ನ ತಲೆಯು ಎತ್ತಲ್ಪಟ್ಟಿರುವದು. ಆದದರಿಂದ ಆತನ ಗುಡಾರದಲ್ಲಿ ಉತ್ಸಾಹದ ಬಲಿಗಳನ್ನು ಅರ್ಪಿ ಸುವೆನು; ಹೌದು, ಕರ್ತನಿಗೆ ಹಾಡಿ ಕೀರ್ತಿಸುವೆನು.
ಎಲ್ಲಾ ಜನರೇ, ಇದನ್ನು ಕೇಳಿರಿ; ಭೂಲೋಕದ ನಿವಾಸಿಗಳಿರಾ, ಕೇಳಿರಿ;
ನಿನ್ನ ಸಾಕ್ಷಿಗಳನ್ನು ಕುರಿತು ಅರಸರ ಮುಂದೆ ಮಾತನಾಡು ತ್ತೇನೆ, ನಾಚಿಕೆಪಡುವದಿಲ್ಲ.
ಓ ಕರ್ತನೇ, ನಿನ್ನ ಬಾಯಿಯ ಮಾತುಗಳನ್ನು ಕೇಳುವಾಗ ಭೂಮಿಯ ಅರಸರೆಲ್ಲರೂ ನಿನ್ನನ್ನು ಕೊಂಡಾಡುವರು.
ನನ್ನ ಪ್ರಾಣವಿರುವ ವರೆಗೂ ಕರ್ತನನ್ನು ಸ್ತುತಿಸುವೆನು; ನನ್ನ ಜೀವಮಾನವೆಲ್ಲಾ ನನ್ನ ದೇವರನ್ನು ಕೀರ್ತಿ ಸುವೆನು.