Home Bibles ನ್ಯಾಯಾಧಿಪತಿಗಳು 4:3 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 4:3 · ಕನ್ನಡ ಬೈಬಲ್

ಆಗ ಇಸ್ರಾಯೇಲ್‌ ಮಕ್ಕಳು ಕರ್ತನಿಗೆ ಕೂಗಿದರು. ಯಾಕಂದರೆ ಅವನಿಗೆ ಒಂಭೈನೂರು ಕಬ್ಬಿಣದ ರಥಗಳಿ ದ್ದವು; ಅವನು ಇಸ್ರಾಯೇಲ್‌ ಮಕ್ಕಳನ್ನು ಇಪ್ಪತ್ತು ವರುಷ ಬಲವಾಗಿ ಬಾಧೆಪಡಿಸಿದನು.

Cross references

ನಿರ್ಗಮಕಾಂಡ 2:23

ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್‌ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು.

ದ್ವಿತೀಯೋಪದೇಶಕಾಂಡ 28:29

ಕುರುಡನು ಕತ್ತಲಲ್ಲಿ ತಡವರಿಸು ವಂತೆ ಮಧ್ಯಾಹ್ನದಲ್ಲಿ ತಡವರಿಸುತ್ತಾ ಇರುವಿ; ನಿನ್ನ ಮಾರ್ಗಗಳಲ್ಲಿ ಸಫಲವಾಗುವದಿಲ್ಲ; ನೀನು ಯಾವಾ ಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ ಸುಲಿಗೆ ಯನ್ನೂ ಅನುಭವಿಸುವವನಾಗುವಿ.

ದ್ವಿತೀಯೋಪದೇಶಕಾಂಡ 28:33

ನಿನ್ನ ಭೂಮಿಯ ಫಲವನ್ನೂ ನಿನ್ನ ಎಲ್ಲಾ ಆದಾಯವನ್ನೂ ನೀನರಿಯದ ಜನವು ತಿಂದುಬಿಡುವದು; ನೀನು ಯಾವಾ ಗಲೂ ಬಲಾತ್ಕಾರವನ್ನೂ ಸಂಕಟವನ್ನೂ ಅನುಭವಿ ಸುವಿ.

ದ್ವಿತೀಯೋಪದೇಶಕಾಂಡ 28:47

ನೀನು ಎಲ್ಲವುಗಳ ಸಮೃದ್ಧಿಯಲ್ಲಿ ನಿನ್ನ ದೇವರಾದ ಕರ್ತನಿಗೆ ಸಂತೋಷದಿಂದಲೂ ಮನಸ್ಸಿನ ಸೌಖ್ಯ ದಿಂದಲೂ ಸೇವಿಸದೆ ಇದದ್ದರಿಂದ

ಯೆಹೋಶುವ 17:16

ಅದಕ್ಕೆ ಯೋಸೇಫನ ಮಕ್ಕಳು--ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿ ಇರುವ ಬೇತ್‌ಷೆಯಾನ್‌ನಲ್ಲಿಯೂ ಅದರ ಊರು ಗಳಲ್ಲಿಯೂ ಇಜ್ರೇಲಿನ ತಗ್ಗಿನಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಉಂಟು ಅಂದರು.

ನ್ಯಾಯಾಧಿಪತಿಗಳು 1:19

ಕರ್ತನು ಯೂದನ ಸಂಗಡ ಇದ್ದದರಿಂದ ಅವನು ಬೆಟ್ಟದ ನಿವಾಸಿಗಳನ್ನು ಹೊರಡಿಸಿಬಿಟ್ಟನು; ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿ ಣದ ರಥಗಳಿದ್ದದರಿಂದ ಅವನು ಅವರನ್ನು ಹೊರ ಡಿಸಲಾರದೆ ಹೋದನು.

ನ್ಯಾಯಾಧಿಪತಿಗಳು 3:9

ತರುವಾಯ ಇಸ್ರಾಯೇಲ್‌ ಮಕ್ಕಳು ಕರ್ತನನ್ನು ಕೂಗಿದಾಗ ಕರ್ತನು ಅವರನ್ನು ರಕ್ಷಿಸುವ ರಕ್ಷಕನನ್ನು ಅಂದರೆ ಕಾಲೇಬನ ತಮ್ಮನಾದ ಕೆನಜನ ಮಗನಾದ ಒತ್ನೀಯೇಲನನ್ನು ಎಬ್ಬಿಸಿದನು.

ನ್ಯಾಯಾಧಿಪತಿಗಳು 3:15

ಆದರೆ ಇಸ್ರಾಯೇಲ್‌ ಮಕ್ಕಳು ಕರ್ತನನ್ನು ಕೂಗಿದಾಗ ಕರ್ತನು ಅವರಿಗೆ ಬೆನ್ಯಾವಿಾನ ನಾದ ಗೇರನ ಮಗನಾದ ಏಹೂದನನ್ನು ರಕ್ಷಿಸುವದಕ್ಕೆ ಎಬ್ಬಿಸಿದನು. ಅವನು ಎಡಗೈಯವನಾಗಿದ್ದನು. ಅವನ ಕೈಯಿಂದ ಇಸ್ರಾಯೇಲ್‌ ಮಕ್ಕಳು ಮೋವಾಬಿನ ಅರಸನಾದ ಎಗ್ಲೋನನಿಗೆ ಕಾಣಿಕೆಯನ್ನು ಕಳುಹಿಸಿ ದರು.

ನ್ಯಾಯಾಧಿಪತಿಗಳು 5:8

ಅವರು ಹೊಸ ದೇವರುಗಳನ್ನು ಆದುಕೊಂಡರು; ಆಗ ಯುದ್ಧವು ಬಾಗಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಾಲ್ವತ್ತು ಸಾವಿರ ಜನರೊಳಗೆ ಗುರಾಣಿಯೂ ಕಠಾರಿಯೂ ಕಾಣಲ್ಪಟ್ಟವೋ?

ನ್ಯಾಯಾಧಿಪತಿಗಳು 6:6

ಆದಕಾರಣ ಇಸ್ರಾಯೇಲ್ಯರು ಮಿದ್ಯಾನ್ಯರಿಂದ ಬಹಳ ಕುಗ್ಗಿಹೋದರು. ಆಗ ಇಸ್ರಾ ಯೇಲ್‌ ಮಕ್ಕಳು ಕರ್ತನಿಗೆ ಕೂಗಿಕೊಂಡರು.

ನ್ಯಾಯಾಧಿಪತಿಗಳು 10:10

ಆಗ ಇಸ್ರಾಯೇಲ್‌ ಮಕ್ಕಳು ಕರ್ತನಿಗೆ ಕೂಗಿ--ನಮ್ಮ ದೇವರನ್ನು ಬಿಟ್ಟು ಬಾಳನನ್ನು ಸೇವಿಸಿದ್ದರಿಂದ ನಾವು ನಿನಗೆ ವಿರೋಧವಾಗಿ ಪಾಪ ಮಾಡಿದೆವು ಅಂದರು.

ನ್ಯಾಯಾಧಿಪತಿಗಳು 10:16

ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು ಕರ್ತನನ್ನು ಸೇವಿಸಿ ದರು. ಆಗ ಆತನ ಮನಸ್ಸು ಇಸ್ರಾಯೇಲಿನ ಕಷ್ಟ ಕ್ಕೋಸ್ಕರ ನೊಂದುಕೊಂಡಿತು.

1 ಸಮುವೇಲ 7:8

ಆಗ ಇಸ್ರಾಯೇಲ್‌ ಮಕ್ಕಳು ಇದನ್ನು ಕೇಳಿ ಫಿಲಿಷ್ಟಿಯರಿಗೋಸ್ಕರ ಭಯಪಟ್ಟು ಸಮುವೇಲ ನಿಗೆ--ನಮ್ಮ ದೇವರಾದ ಕರ್ತನು ನಮ್ಮನ್ನು ಫಿಲಿಷ್ಟಿ ಯರ ಕೈಯಿಂದ ತಪ್ಪಿಸಿ ರಕ್ಷಿಸುವ ಹಾಗೆ ನೀನು ನಮಗೋಸ್ಕರವಾಗಿ ಮೌನವಾಗಿರದೆ ಆತನಿಗೆ ಮೊರೆ ಯಿಡು ಅಂದರು.

ಕೀರ್ತನೆಗಳು 50:15

ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.

ಕೀರ್ತನೆಗಳು 78:34

ಅವರನ್ನು ಕೊಲ್ಲುವಾಗ ಅವರು ಆತನನ್ನು ಹುಡುಕಿ ತಿರುಗಿಕೊಂಡು ದೇವರನ್ನು ಹೊತ್ತಾರೆ ವಿಚಾರಿಸಿ

ಕೀರ್ತನೆಗಳು 106:42

ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು.

ಯೆರೆಮಿಯ 2:27

ಅವರು ಮರಕ್ಕೆ ನೀನು ನನ್ನ ತಂದೆ ಎಂದೂ ಕಲ್ಲಿಗೆ--ನೀನು ನನ್ನನ್ನು ಹೆತ್ತಿದ್ದೀ ಎಂದೂ ಹೇಳುತ್ತಾರಲ್ಲಾ? ಯಾಕಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ಅವರ ಕಷ್ಟ ಕಾಲದಲ್ಲಿ--ಎದ್ದು, ನಮ್ಮನ್ನು ರಕ್ಷಿಸು ಎಂದು ಹೇಳುವರು.

Interlinear

Choose Theme