Home Bibles ನ್ಯಾಯಾಧಿಪತಿಗಳು 3:5 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 3:5 · ಕನ್ನಡ ಬೈಬಲ್

ಇಸ್ರಾಯೇಲ್‌ ಮಕ್ಕಳು ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ಮಧ್ಯದಲ್ಲಿ ವಾಸವಾಗಿದ್ದು

Cross references

ಆದಿಕಾಂಡ 10:15

ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ

ಆದಿಕಾಂಡ 15:19

ಕೇನಿಯರೂ ಕೆನಿಜೀಯರೂ ಕದ್ಮೋನಿ ಯರೂ

ನಿರ್ಗಮಕಾಂಡ 3:8

ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.

ನಿರ್ಗಮಕಾಂಡ 3:17

ಐಗುಪ್ತದಲ್ಲಿ ನಿಮಗುಂಟಾಗಿರುವ ಸಂಕಟದಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ಇರುವ ಹಾಲೂ ಜೇನೂ ಹರಿಯುವ ದೇಶಕ್ಕೆ ಬರಮಾಡುವೆನೆಂದು ಹೇಳಿದ್ದೇನೆ ಎಂದು ಅವರಿಗೆ ಹೇಳು.

ನಿರ್ಗಮಕಾಂಡ 34:16

ಇದಲ್ಲದೆ ಅವರ ಕುಮಾರ್ತೆಯರನ್ನು ನಿನ್ನ ಕುಮಾರರಿಗೋಸ್ಕರ ತಕ್ಕೊಳ್ಳಬೇಕಾಗಬಹುದು. ತಕ್ಕೊಂಡರೆ ಅವರ ಕುಮಾರ್ತೆಯರು ತಮ್ಮ ದೇವರುಗಳನ್ನು ಆರಾಧಿಸಿ ನಿಮ್ಮ ಕುಮಾರರು ತಮ್ಮ ದೇವರುಗಳನ್ನು ಆರಾಧಿಸುವಂತೆ ಮಾಡಾರು.

ಅಂಕೆಗಳ ಪುಸ್ತಕ 13:29

ಅಮಾಲೇಕ್ಯರು ದೇಶದ ದಕ್ಷಿಣದಲ್ಲಿ ವಾಸವಾಗಿದ್ದಾರೆ; ಹಿತ್ತಿಯರು ಯೆಬೂಸಿಯರು ಅಮೋ ರಿಯರು ಪರ್ವತಗಳಲ್ಲಿಯೂ ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸ ವಾಗಿದ್ದಾರೆ ಎಂದು ಹೇಳಿದರು.

ದ್ವಿತೀಯೋಪದೇಶಕಾಂಡ 7:1

ನೀನು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಬರಮಾಡಿದಾಗ ಆತನು ನಿನಗಿಂತ ದೊಡ್ಡ ವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಅಂದರೆ ಹಿತ್ತಿಯರನ್ನೂ ಗಿರ್ಗಾಷಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗ ಗಳನ್ನು ನಿನ್ನ ಮುಂದೆ ಹೊರಡಿಸಿ

ಯೆಹೋಶುವ 9:1

ಯೊರ್ದನಿಗೆ ಈಚೆಯಲ್ಲಿ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಲೆಬನೋನಿಗೆ ಎದು ರಾದ ಮಹಾಸಮುದ್ರದ ಸಮಸ್ತ ಪ್ರಾಂತ್ಯಗಳಲ್ಲಿಯೂ ಇರುವ ಹಿತ್ತಿಯರ ಅಮೋರಿಯರ ಕಾನಾನ್ಯರ ಪೆರಿಜ್ಜೀ ಯರ ಹಿವ್ವಿಯರ ಯೆಬೂಸಿಯರ ಅರಸುಗಳು ಇದನ್ನು ಕೇಳಿದಾಗ ಆದದ್ದೇನಂದರೆ,

ನ್ಯಾಯಾಧಿಪತಿಗಳು 1:4

ಯೂದನು ಹೋದಾಗ ಕರ್ತನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟನು. ಬೆಜೆಕಿನಲ್ಲಿ ಇವರು ಅವರಲ್ಲಿ ಹತ್ತು ಸಾವಿರ ಜನರನ್ನು ಕೊಂದರು.

ನ್ಯಾಯಾಧಿಪತಿಗಳು 1:5

ಅವರು ಬೆಜೆಕಿನಲ್ಲಿ ಅದೋನೀಬೆಜೆಕನನ್ನು ಕಂಡು ಅವನಿಗೆ ವಿರೋಧವಾಗಿ ಯುದ್ಧಮಾಡಿ ಅಲ್ಲಿ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಕೊಂದುಹಾಕಿದರು.

ನ್ಯಾಯಾಧಿಪತಿಗಳು 1:29

ಇದಲ್ಲದೆ ಎಫ್ರಾಯಾಮ್‌ ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾ ನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.

1 ಅರಸುಗಳು 9:20

ಇಸ್ರಾಯೇಲಿನ ಮಕ್ಕಳಲ್ಲದೆ ಅಮೋರ್ಯರು ಹಿತ್ತೀಯರು ಪೆರಿಜ್ಜೀಯರು ಹಿವ್ವೀಯರು ಯೆಬೂಸಿ ಯರು ಇವರಲ್ಲಿ ಉಳಿದ ಸಮಸ್ತ ಜನರೂ

ನೆಹೆಮ್ಯ 9:8

ಅವನ ಹೃದಯವು ನಿನ್ನ ಮುಂದೆ ನಂಬಿಕೆಯುಳ್ಳದ್ದೆಂದು ಕಂಡುಕೊಂಡು ಕಾನಾನ್ಯರೂ ಹಿತ್ತಿಯರೂ ಅಮೋರಿ ಯರೂ ಪೆರಿಜ್ಜೀಯರೂ ಯೆಬೂಸಿಯರೂ ಗಿರ್ಗಾಷಿ ಯರೂ ಇವರ ದೇಶವನ್ನು ಅವನ ಸಂತಾನಕ್ಕೆ ಕೊಡುವ ಹಾಗೆ ಅವನ ಸಂಗಡ ಒಡಂಬಡಿಕೆಯನ್ನು ಮಾಡಿದಿ; ನೀನು ಸತ್ಯವಂತನಾಗಿರುವದರಿಂದ ನಿನ್ನ ವಾಕ್ಯಗಳನ್ನು ಈಡೇರಿಸಿದಿ.

ಕೀರ್ತನೆಗಳು 106:34

ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.

ಕೀರ್ತನೆಗಳು 106:35

ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು.

Interlinear

Choose Theme