ಇಸ್ರಾಯೇಲಿನ ಗೋತ್ರ ಗಳಲ್ಲಿ ಮಿಚ್ಪೆಗೆ ಕರ್ತನ ಬಳಿಗೆ ಬಾರದವರು ಯಾರಾ ದರೂ ಒಬ್ಬರಿದ್ದಾರೋ ಅಂದರು. ಆಗ ಇಗೋ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಸಭೆಯ ಬಳಿಗೆ ಪಾಳೆಯಕ್ಕೆ ಬಂದದ್ದಿರಲಿಲ್ಲ.
Cross references
ನೀವು ಮೇರೋಜನ್ನು ಶಪಿಸಿರಿ; ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ ಎಂದು ಕರ್ತನ ದೂತನು ಹೇಳುತ್ತಾನೆ; ಯಾಕಂದರೆ ಅವರು ಕರ್ತನ ಸಹಾಯಕ್ಕೂ ಪರಾಕ್ರಮಶಾಲಿಗಳಿಗೆ ವಿರೋ ಧವಾಗಿ ಕರ್ತನ ಸಹಾಯಕ್ಕೂ ಬಾರದೆ ಹೋದರು.
ಅಮ್ಮೋನಿಯನಾದ ನಾಹಾಷನು ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ವಿರೋಧ ವಾಗಿ ದಂಡು ಇರಿಸಿದನು. ಆಗ ಯಾಬೇಷಿನ ಜನರೆ ಲ್ಲರು ನಾಹಾಷನಿಗೆ--ನೀನು ನಮ್ಮ ಸಂಗಡ ಒಡಂಬ ಡಿಕೆ ಮಾಡಿದರೆ ನಾವು ನಿನ್ನನ್ನು ಸೇವಿಸುವೆವು ಅಂದರು.
ಆಗ ಅವರು ಬಂದ ದೂತರಿಗೆ--ನೀವು ಗಿಲ್ಯಾದಿನ ಲ್ಲಿರುವ ಯಾಬೇಷಿನ ಜನರಿಗೆ--ನಾಳೆ ಬಿಸಿಲೇರಿದಾಗ ನಿಮಗೆ ಸಹಾಯ ಉಂಟಾಗುವದು ಅಂದರು. ಹಾಗೆಯೇ ದೂತರು ಬಂದು ಯಾಬೇಷಿನ ಜನರಿಗೆ ಅದನ್ನು ತಿಳಿಸಿದಾಗ ಅವರು ಸಂತೋಷಪಟ್ಟರು.
ಹೀಗೆಯೇಫಿಲಿಷ್ಟಿ ಯರು ಸೌಲನಿಗೆ ಮಾಡಿದ್ದನ್ನು ಯಾಬೇಷಿನ ಗಿಲ್ಯಾದಿ ನವರು ಕೇಳಿದಾಗ
ಯಾಬೇಷ್‌ಗಿಲ್ಯಾದಿನವರು ಸೌಲನನ್ನು ಹೂಣಿಟ್ಟ ರೆಂದು ದಾವೀದನಿಗೆ ತಿಳಿಸಿದಾಗ ಅವನು ದೂತರನ್ನು ಕಳುಹಿಸಿ--ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ ಅವನನ್ನು ಹೂಣಿಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ.