ಆಗ ಇಸ್ರಾಯೇಲ್ ಮಕ್ಕಳು ತಮ್ಮ ಸಹೋದರ ನಾದ ಬೆನ್ಯಾವಿಾನನ ವಿಷಯವಾಗಿ ಪಶ್ಚಾತ್ತಾಪಪಟ್ಚು ಹೇಳಿದ್ದೇನಂದರೆ--ಈಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರವು ಛೇದಿಸಲ್ಪಟ್ಟು ಹೋಯಿತು.
Cross references
ಅವನು ಅವಳನ್ನು ನೋಡಿ ದಾಗ ತನ್ನ ವಸ್ತ್ರಗಳನ್ನು ಹರಕೊಂಡು--ಅಯ್ಯೋ, ನನ್ನ ಕುಮಾರ್ತೆಯೇ, ನೀನು ನನ್ನನ್ನು ಬಹಳವಾಗಿ ಕುಂದಿಸಿದಿ. ನನ್ನನ್ನು ತೊಂದರೆಪಡಿಸುವವರಲ್ಲಿ ನೀನು ಒಬ್ಬಳಾದಿ. ಯಾಕಂದರೆ ನಾನು ಕರ್ತನಿಗೆ ನನ್ನ ಬಾಯಿ ತೆರೆದು ಪ್ರಮಾಣಮಾಡಿದೆನು; ಹಿಂದೆಗೆಯಲಾರೆನು ಅಂದನು.
ಅದಕ್ಕೆ ಕರ್ತನು--ಅವನ ಮೇಲೆ ಹೋಗಿರಿ ಅಂದನು). ಎರಡನೇ ದಿನದಲ್ಲಿ ಇಸ್ರಾಯೇಲ್ ಮನು ಷ್ಯರು ಬೆನ್ಯಾವಿಾನನ ಮಕ್ಕಳ ಬಳಿಗೆ ಬಂದರು.
ಕರ್ತನು ಇಸ್ರಾಯೇಲ್ ಗೋತ್ರಗಳಲ್ಲಿ ಒಂದು ಲೋಪವನ್ನು ಮಾಡಿದ್ದರಿಂದ ಜನರು ಬೆನ್ಯಾವಿಾನ ನಿಗಾಗಿ ಪಶ್ಚಾತ್ತಾಪಪಟ್ಟರು.
ಆಗ ಅಬ್ನೇರನು ಯೋವಾಬನಿಗೆ--ಕತ್ತಿಯು ಯಾವಾಗಲೂ ನುಂಗಿಬಿಡುವದೋ? ಅಂತ್ಯ ದಲ್ಲಿ ಅದು ಕಹಿಯಾಗಿರುವದೆಂದು ನಿನಗೆ ಗೊತ್ತಾಗು ವದಿಲ್ಲವೋ? ತಮ್ಮ ಸಹೋದರರನ್ನು ಹಿಂಬಾಲಿಸು ವದನ್ನು ಬಿಟ್ಟು ಹಿಂದಕ್ಕೆ ತಿರುಗುವ ಹಾಗೆ ಜನರಿಗೆ ಎಷ್ಟು ಕಾಲ ಹೇಳದೆ ಇರುವಿ ಎಂದು ಕೂಗಿ ಹೇಳಿದನು.
ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.
ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು--