ಇಗೋ, ಯಾಬೇಷ್ ಗಿಲ್ಯಾದಿನಲ್ಲಿ ಇರುವವರಲ್ಲಿ ಒಬ್ಬನಾದರೂ ಇದ್ದದ್ದಿಲ್ಲ. ಆಗ ಸಭೆಯು ಪರಾಕ್ರಮಶಾಲಿಗಳಲ್ಲಿ ಹನ್ನೆರಡು ಸಾವಿರ ಮನುಷ್ಯರನ್ನು ಅಲ್ಲಿಗೆ ಕಳುಹಿಸುವಾಗ ಅವರಿಗೆ--ನೀವು ಹೋಗಿ ಯಾಬೇಷ್ ಗಿಲ್ಯಾದಿನ ನಿವಾಸಿಗಳನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಕೂಡಾ, ಕತ್ತಿಯಿಂದ ಹೊಡೆದು ಬಿಡಿರಿ.
Cross references
ಆ ಪಟ್ಟಣದ ನಿವಾಸಿಗಳನ್ನು ಕತ್ತಿಯಿಂದ ಸಂಪೂರ್ಣ ವಾಗಿ ನಾಶಮಾಡಿ ಅದನ್ನೂ ಅದರಲ್ಲಿರುವ ಎಲ್ಲವನ್ನೂ ಸಮಸ್ತ ಪಶುಗಳನ್ನೂ ಸಹ ಕತ್ತಿಯಿಂದ ನಿರ್ಮೂಲ ಮಾಡಬೇಕು.
ಆಗ ಯೆಹೋಶುವನೂ ಅವ ನೊಂದಿಗೆ ಇಸ್ರಾಯೇಲ್ಯರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಕುಮಾರರನ್ನೂ ಕುಮಾರ್ತೆಯ ರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ತಗ್ಗಿಗೆ ತಂದರು.
ನೀವು ಮೇರೋಜನ್ನು ಶಪಿಸಿರಿ; ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ ಎಂದು ಕರ್ತನ ದೂತನು ಹೇಳುತ್ತಾನೆ; ಯಾಕಂದರೆ ಅವರು ಕರ್ತನ ಸಹಾಯಕ್ಕೂ ಪರಾಕ್ರಮಶಾಲಿಗಳಿಗೆ ವಿರೋ ಧವಾಗಿ ಕರ್ತನ ಸಹಾಯಕ್ಕೂ ಬಾರದೆ ಹೋದರು.
ಆದರೆ ಇಸ್ರಾಯೇಲ್ ಮಕ್ಕಳು--ಕರ್ತನ ಬಳಿಗೆ ಸಭೆಯೊಂದಿಗೆ ಇಸ್ರಾಯೇಲಿನ ಸಮಸ್ತ ಗೋತ್ರದಲ್ಲಿ ಬಾರದವರು ಯಾರು ಅಂದರು. ಯಾಕಂದರೆ ಕರ್ತನ ಬಳಿಗೆ ಮಿಚ್ಪೆಗೆ ಬಾರದವನು ಖಂಡಿತವಾಗಿ ಸಾಯಬೇಕೆಂದು ದೊಡ್ಡ ಆಣೆಇಟ್ಟುಕೊಂಡಿದ್ದರು.
ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ದೂತರ ಕೈಯಿಂದ ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿಸೌಲನ ಹಿಂದೆಯೂ ಸಮುವೇಲನ ಹಿಂದೆಯೂ ಹೊರಡದವನ ಪಶುಗಳಿಗೆ ಈ ಪ್ರಕಾರ ಮಾಡಲ್ಪಡು ವದೆಂದು ಹೇಳಿಸಿದನು. ಆಗ ಕರ್ತನಿಂದ ಉಂಟಾದ ಭಯ ಜನರ ಮೇಲೆ ಬಿದ್ದದ್ದರಿಂದ ಅವರು ಒಂದೇ ಮನಸ್ಸಿನಿಂದ ಹಾಗೆಯೇ ಹೊರಟು ಬಂದರು.
ಈಗ ನೀನು ಹೋಗಿ ಆ ಅಮಾಲೇಕ್ಯರನ್ನು ಹೊಡೆದು ಅವರಿಗೆ ಇದ್ದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿ ಅವರನ್ನು ಕನಿಕರಿಸದೆ ಪುರುಷರನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಮೊಲೆ ಕೂಸುಗಳನ್ನೂ ದನ ಕುರಿ ಒಂಟೆ ಕತ್ತೆಗಳನ್ನೂ ಕೊಂದುಹಾಕು ಎಂಬದು.