Home Bibles ನ್ಯಾಯಾಧಿಪತಿಗಳು 20:48 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 20:48 · ಕನ್ನಡ ಬೈಬಲ್

ಇಸ್ರಾಯೇಲ್‌ ಜನರು ಬೆನ್ಯಾವಿಾನನ ಮಕ್ಕಳ ಮೇಲೆ ತಿರಿಗಿ ಹೋಗಿ ಪಟ್ಟಣದಲ್ಲಿ ಜನರನ್ನೂ ಪಶು ಗಳನ್ನೂ ಕೈಗೆ ಸಿಕ್ಕಿದ್ದೆಲ್ಲವನ್ನೂ ಕತ್ತಿಯಿಂದ ಹೊಡೆದು ತಾವು ಹೋದ ಸಮಸ್ತ ಪಟ್ಟಣಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.

Cross references

ದ್ವಿತೀಯೋಪದೇಶಕಾಂಡ 13:15

ಆ ಪಟ್ಟಣದ ನಿವಾಸಿಗಳನ್ನು ಕತ್ತಿಯಿಂದ ಸಂಪೂರ್ಣ ವಾಗಿ ನಾಶಮಾಡಿ ಅದನ್ನೂ ಅದರಲ್ಲಿರುವ ಎಲ್ಲವನ್ನೂ ಸಮಸ್ತ ಪಶುಗಳನ್ನೂ ಸಹ ಕತ್ತಿಯಿಂದ ನಿರ್ಮೂಲ ಮಾಡಬೇಕು.

ನ್ಯಾಯಾಧಿಪತಿಗಳು 21:23

ಆಗ ಬೆನ್ಯಾವಿಾನನ ಮಕ್ಕಳು ಅದೇ ಪ್ರಕಾರಮಾಡಿ ನಾಟ್ಯವಾಡುವ ಹೆಣ್ಣುಗಳಲ್ಲಿ ತಮ್ಮ ಲೆಕ್ಕಕ್ಕೆ ಸರಿಯಾಗಿ ಹಿಡುಕೊಂಡವರನ್ನು ಅವನವನು ತನಗೆ ಹೆಂಡತಿಯಾಗಿ ತೆಗೆದುಕೊಂಡು ತಮ್ಮ ಬಾಧ್ಯತೆಗೆ ತಿರುಗಿಕೊಂಡು ಹೋಗಿ ಪಟ್ಟಣಗಳನ್ನು ಕಟ್ಟಿ ಅವು ಗಳಲ್ಲಿ ವಾಸಿಸಿದರು.

2 ದಿನವೃತ್ತಾಂತ 25:13

ಆದರೆ ಅವರು ತಮ್ಮ ಸಂಗಡ ಯುದ್ಧಕ್ಕೆ ಹೋಗದ ಹಾಗೆ ಅಮಚ್ಯನು ಹಿಂದಕ್ಕೆ ಕಳುಹಿಸಿದ ಗುಂಪಿನವರು ಯೆಹೂದದ ಪಟ್ಟಣಗಳ ಮೇಲೆ ಬಿದ್ದು ಸಮಾರ್ಯ ಮೊದಲುಗೊಂಡು ಬೇತ್ಹೋರೋನಿನ ಮಟ್ಟಿಗೂ ಮೂರು ಸಾವಿರ ಮಂದಿಯನ್ನು ಹೊಡೆದುಬಿಟ್ಟು ಬಹುಕೊಳ್ಳೆಯನ್ನು ತೆಗೆದುಕೊಂಡರು.

2 ದಿನವೃತ್ತಾಂತ 28:6

ಅವರು ತಮ್ಮ ಪಿತೃಗಳ ಕರ್ತನಾದ ದೇವರನ್ನು ಬಿಟ್ಟದ್ದರಿಂದ ರೆಮಲ್ಯನ ಮಗ ನಾದ ಪೆಕಹನು ಒಂದೇ ದಿವಸದೊಳಗೆ ಯೆಹೂ ದದವರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು; ಇವರೆಲ್ಲರು ಪರಾಕ್ರಮಶಾಲಿ ಗಳಾಗಿದ್ದರು.

ಸಾಮೇತಿಗಳು 18:19

ಬಲವಾದ ಪಟ್ಟಣಕ್ಕಿಂತ ಅನ್ಯಾಯ ಹೊಂದಿದ ಸಹೋದರನನ್ನು ಸಂಪಾದಿಸುವದು ಕಷ್ಟ ಕರ. ಅವರ ಕಲಹಗಳು ಅರಮನೆಯ ಸಲಾಕಿಗಳಂತೆ ಇವೆ.

Interlinear

Choose Theme