ಆಗ ಹೊಂಚುಹಾಕಿಕೊಂಡಿದ್ದವರು ತೀವ್ರವಾಗಿ ಗಿಬೆಯಕ್ಕೆ ಹೋದರು. ಹೊಂಚುಹಾಕಿದ್ದವರು ಸಾಲಾಗಿ ಹೊರಟು ಪಟ್ಟಣದಲ್ಲಿರುವವರೆಲ್ಲರನ್ನು ಕತ್ತಿಯಿಂದ ಹೊಡೆದರು.
Cross references
ಯಾವನಾದರೂ ಅದನ್ನು ಮುಟ್ಟಬಾರದು; ಮುಟ್ಟಿದ ಪಶುವನ್ನಾಗಲಿ ಮನುಷ್ಯನನ್ನಾಗಲಿ ನಿಶ್ಚಯ ವಾಗಿ ಕಲ್ಲೆಸೆದು ಕೊಲ್ಲಬೇಕು. ಇಲ್ಲವೆ ಈಟಿಯಿಂದ ತಿವಿಯಬೇಕು. ದೀರ್ಘವಾಗಿ ತುತೂರಿಯು ಊದುವ ಸಮಯದಲ್ಲಿ ಅವರು ಬೆಟ್ಟದ ಮೇಲೆ ಬರಬೇಕು ಅಂದನು.
ಅವರು ಟಗರಿನ ಕೊಂಬುಗಳ ತುತೂರಿಗಳಿಂದ ದೀರ್ಘ ಧ್ವನಿ ಗೈಯುವಾಗ ನೀವು ಆ ತುತೂರಿಯ ಧ್ವನಿಯನ್ನು ಕೇಳಿದವರಾಗಿ ಜನರೆಲ್ಲರು ಮಹಾ ಆರ್ಭಟವಾಗಿ ಆರ್ಭಟಿಸಬೇಕು; ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದು ಹೋಗುವದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಹೋಗುವನು ಎಂದು ಹೇಳಿದನು.
ಆಯಿಯ ಅರಸನು ಇದನ್ನು ಕಂಡಾಗ ಆ ಪಟ್ಟಣದ ಜನರು ತ್ವರೆಪಟ್ಟು ಉದಯ ಕಾಲದಲ್ಲಿ ಎದ್ದು ನಿಶ್ಚಯಿಸಿದ ವೇಳೆಯಲ್ಲಿ ಅವನೂ ಅವನ ಜನರೆಲ್ಲರೂ ಇಸ್ರಾಯೇಲ್ಯರಿಗೆ ಎದುರಾಗಿ ಯುದ್ಧ ಮಾಡಲು ಬೈಲಿಗೆ ಹೊರಟರು. ಆದರೆ ಅವನು ಪಟ್ಟಣದ ಹಿಂದೆ ತನಗೋಸ್ಕರ ಹೊಂಚಿಕೊಂಡಿರುವ ವರನ್ನು ಅರಿಯದೆ ಇದ್ದನು.
ಆಗ ಹೊಂಚಿಕೊಂಡಿ ದ್ದವರು ತ್ವರೆಯಾಗಿ ತಮ್ಮ ಸ್ಥಳದಿಂದ ಎದ್ದು ಅವನು ತನ್ನ ಕೈಯನ್ನು ಚಾಚುತ್ತಲೇ ಪಟ್ಟಣಕ್ಕೆ ಬಂದು ಅದನ್ನು ಹಿಡಿದು ತ್ವರೆಯಾಗಿ ಬೆಂಕಿಯನ್ನು ಹಚ್ಚಿದರು.