ನ್ಯಾಯಾಧಿಪತಿಗಳು 20:35 · ಕನ್ನಡ ಬೈಬಲ್
ಆದರೆ ಅವರು ತಮಗೆ ಕೇಡು ಸವಿಾಪವಾಗಿತ್ತೆಂದು ಅರಿಯದೆ ಇದ್ದರು. ಆಗ ಕರ್ತನು ಇಸ್ರಾಯೇಲಿನ ಮುಂದೆ ಬೆನ್ಯಾವಿಾನನನ್ನು ಹೊಡೆದನು. ಆ ದಿನದಲ್ಲಿ ಇಸ್ರಾಯೇಲ್ ಮಕ್ಕಳು ಬೆನ್ಯಾವಿಾನ್ಯರಲ್ಲಿ ಕತ್ತಿ ಹಿಡಿ ಯುವವರಾದ ಇಪ್ಪತ್ತೈದು ಸಾವಿರದ ನೂರು ಮನುಷ್ಯ ರನ್ನು ನಾಶಮಾಡಿದರು.
Cross references
ನ್ಯಾಯಾಧಿಪತಿಗಳು 20:15
ಗಿಬೆಯದ ನಿವಾಸಿಗಳಲ್ಲಿ ಆದು ಕೊಳ್ಳಲ್ಪಟ್ಟ ಏಳುನೂರು ಜನರಾಗಿ ಎಣಿಸಲ್ಪಟ್ಟವರ ಹೊರತಾಗಿ ಪಟ್ಟಣಗಳಿಂದ ಬಂದು ಕೂಡಿದ, ಕತ್ತಿ ಹಿಡಿಯುವ ಮನುಷ್ಯರಾದ ಬೆನ್ಯಾವಿಾನನ ಮಕ್ಕಳು ಆ ಕಾಲದಲ್ಲಿ ಇಪ್ಪತ್ತಾರು ಸಾವಿರ ಜನರಾಗಿ ಎಣಿಸ ಲ್ಪಟ್ಟರು.
ನ್ಯಾಯಾಧಿಪತಿಗಳು 20:44
ಬೆನ್ಯಾವಿಾನ್ಯರಲ್ಲಿ ಹದಿನೆಂಟು ಸಾವಿರ ಜನರು ಬಿದ್ದರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು.
ಯೋಬ 20:5
ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.