ಆಗ ಬೆನ್ಯಾವಿಾನನ ಮಕ್ಕಳು ಗಿಬೆಯದಿಂದ ಹೊರಟು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಆ ದಿನದಲ್ಲಿ ನೆಲಕ್ಕೆ ಬೀಳುವಂತೆ ಸಂಹರಿಸಿದರು.
Cross references
ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು.
ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಸೈನ್ಯ ದೊಡನೆ ಹೊರಟರೆ ದುಷ್ಟ ಕಾರ್ಯಗಳಿಗೆಲ್ಲಾ ದೂರ ವಾಗಿರುವಂತೆ ನಿನ್ನನ್ನು ಕಾಪಾಡಿಕೋ.
ಇನ್ನೂ ಇಸ್ರಾಯೇಲ್ ಮಕ್ಕಳಲ್ಲಿ ಕತ್ತಿ ಹಿಡಿಯುವ ಹದಿನೆಂಟು ಸಾವಿರ ಜನರನ್ನು ನೆಲಕ್ಕೆ ಉರುಳಿಸಿದರು.
ಈಗ ನಿಮಗೆ ದಾಸರೂ ದಾಸಿಗಳೂ ಆಗಿರುವ ಹಾಗೆ ಯೆಹೂದದವರನ್ನೂ ಯೆರೂಸಲೇಮಿನ ಮಕ್ಕಳನ್ನೂ ನಿಮ್ಮ ವಶಮಾಡಬೇಕೆಂದು ಅಂದುಕೊಳ್ಳುತ್ತೀರಿ. ಆದರೆ ನಿಮ್ಮಲ್ಲಿಯೇ ನಿಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಗಳು ಇಲ್ಲವೋ?
ಯಾವ ಅರಸನೂ ಅಧಿಕವಾದ ಸೈನ್ಯದಿಂದ ರಕ್ಷಿಸಲ್ಪಡುವದಿಲ್ಲ. ಪರಾಕ್ರಮ ಶಾಲಿಯು ಅಧಿಕಶಕ್ತಿಯಿಂದ ಬಿಡಿಸಲ್ಪಡುವದಿಲ್ಲ.
ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ.
ನಿನ್ನ ಮಾರ್ಗವು ಸಮುದ್ರದಲ್ಲಿ ಅದೆ; ನಿನ್ನ ಹಾದಿಯು ಬಹಳ ನೀರುಗಳಲ್ಲಿ ಅವೆ; ನಿನ್ನ ಹೆಜ್ಜೆಗಳು ತಿಳಿಯ ಲ್ಪಡಲಿಲ್ಲ.ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.
ನಾನು ಇವೆಲ್ಲವುಗಳ ಮೇಲೆ ಮನಸ್ಸಿಟ್ಟು ಇವೆಲ್ಲವುಗಳಲ್ಲಿ ನಾನು ತೀರ್ಮಾನಿಸಿ ದ್ದೇನಂದರೆ--ನೀತಿವಂತನು ಮತ್ತು ಜ್ಞಾನಿ ಇವರ ಕೆಲಸಗಳು ದೇವರ ಕೈಯಲ್ಲಿವೆ; ಯಾವ ಮನುಷ್ಯನೂ ಅವರ ಮುಂದಿರುವ ಎಲ್ಲವುಗಳನ್ನು, ಅಂದರೆ ಪ್ರೀತಿ ಯನ್ನು ಅಥವಾ ದ್ವೇಷವನ್ನು ತಿಳಿಯಲಾರನು.
ಕರ್ತನು ನನಗೆ--ನೀನು ಹೋಗಿ ನಾರಿನ ದಟ್ಟಿಯನ್ನು ತೆಗೆದುಕೊಂಡು ನಿನ್ನ ನಡುವಿಗೆ ಕಟ್ಟು, ಆದರೆ ಅದನ್ನು ನೀರಿನಲ್ಲಿ ಹಾಕಬೇಡ ಅಂದನು;
ಓ ಇಸ್ರಾಯೇಲೇ, ನೀನು ಗಿಬ್ಯದ ದಿನಗಳ ಮೊದ ಲಿನಿಂದ ಪಾಪ ಮಾಡಿದ್ದೀ; ಅವರು ಅಲ್ಲೇ ನಿಂತು ಕೊಂಡರು. ಅನ್ಯಾಯದ ಮಕ್ಕಳಿಗೆ ವಿರೋಧವಾದ ಯುದ್ಧವು ಗಿಬ್ಯದಲ್ಲಿ ಅವರನ್ನು ಮುಟ್ಟಲಿಲ್ಲ.