Home Bibles ನ್ಯಾಯಾಧಿಪತಿಗಳು 19:10 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 19:10 · ಕನ್ನಡ ಬೈಬಲ್

ಆದರೆ ಆ ಮನುಷ್ಯನು ಆ ರಾತ್ರಿ ಅಲ್ಲಿರುವದಕ್ಕೆ ಮನಸ್ಸಿಲ್ಲದೆ ಎದ್ದು ತಡಿ ಕಟ್ಟಿದ ಎರಡು ಕತ್ತೆಗಳ ಸಂಗಡಲೂ ತನ್ನ ಉಪಪತ್ನಿಯ ಸಂಗಡಲೂ ಹೊರಟುಹೋಗಿ ಯೆರೂಸಲೇಮೆಂಬ ಯೆಬೂಸಿಗೆ ಸರಿಯಾಗಿ ಬಂದನು.

Cross references

ಯೆಹೋಶುವ 15:8

ಅಲ್ಲಿಂದ ಯೆಬೂಸಿ ಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣ ಪಾರ್ಶ್ವವಾಗಿ ಹಿನ್ನೋಮನ ತಗ್ಗನ್ನು ದಾಟಿ ಉತ್ತರಕ್ಕಿರುವ ಯೆಬೂಸಿಯರ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕಾಗಿ ಹಿನ್ನೋಮ್‌ ತಗ್ಗಿನ ಮುಂದಿರುವ ಬೆಟ್ಟದ ತುದಿ ವರೆಗೂ

ಯೆಹೋಶುವ 15:63

ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೂದನ ಮಕ್ಕಳು ಹೊರಡಿಸಿ ಬಿಡುವದಕ್ಕಾಗಲಿಲ್ಲ. ಆದದರಿಂದ ಈ ದಿವಸದ ವರೆಗೂ ಯೆಬೂಸಿಯರು ಯೂದನ ಮಕ್ಕಳ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.

ಯೆಹೋಶುವ 18:28

ಚೇಲ, ಎಲೆಫ್‌, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯತ್‌, ಕಿರ್ಯತ್‌ ಎಂಬ ಹದಿನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು. ಇವೇ ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಇರುವ ಬಾಧ್ಯತೆಗಳಾಗಿದ್ದವು.

ನ್ಯಾಯಾಧಿಪತಿಗಳು 1:8

ಯೂದನ ಮಕ್ಕಳು ಯೆರೂಸಲೇಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.

2 ಸಮುವೇಲ 5:6

ಆಗ ಅರಸನೂ ಅವನ ಜನರೂ ದೇಶದ ನಿವಾಸಿ ಗಳಾದ ಯೆಬೂಸಿಯರು ಒಳಗೆ ಯೆರೂಸಲೇಮಿಗೆ ಬಂದರು. ದಾವೀದನು ಇದರಲ್ಲಿ ಬರಲಾರನೆಂದು ಅವರು ನೆನಸಿ ದಾವೀದನಿಗೆ--ನೀನು ಕುರುಡರನ್ನೂ ಕುಂಟರನ್ನೂ ತೆಗೆದುಹಾಕದ ಹೊರತು ನೀನು ಇಲ್ಲಿಗೆ ಬರಲಾರಿ ಅಂದರು.

1 ದಿನವೃತ್ತಾಂತ 11:4

ತರುವಾಯ ದಾವೀದನು ಸಮಸ್ತ ಇಸ್ರಾಯೇಲ್ಯರು ಯೆಬೂಸು ಎಂಬ ಹೆಸರುಳ್ಳ ಯೆರೂಸಲೇಮಿಗೆ ಹೋದರು.

Interlinear

Choose Theme