ಆದರೆ ಅವರು ವಿಾಕನು ಮಾಡಿಕೊಂಡವು ಗಳನ್ನೂ ಅವನೊಂದಿಗಿದ್ದ ಯಾಜಕನನ್ನೂ ಅಪಹರಿಸಿ ಕೊಂಡು ವಿಶ್ರಾಂತಿಯಾಗಿಯೂ ಭರವಸವಾಗಿಯೂ ಇದ್ದ ಲಯಿಷಿನ ಜನರ ಮೇಲೆ ಬಂದು ಅವರನ್ನು ಕತ್ತಿಯಿಂದ ಹೊಡೆದು ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
Cross references
ಅವನು ದಾನನ ವಿಷಯವಾಗಿ--ದಾನನು ಸಿಂಹದ ಮರಿಯೇ, ಬಾಶಾನಿನಿಂದ ಹಾರಿ ಬರುವನು ಎಂದು ಹೇಳಿದನು.
ಅವರು ಶ್ವಾಸವುಳ್ಳ ಒಂದನ್ನಾದರೂ ಉಳಿಸದೆ ಅದರಲ್ಲಿರುವ ಪ್ರಾಣಗಳನ್ನೆಲ್ಲಾ ಕತ್ತಿಯಿಂದ ಹೊಡೆದು ಸಂಪೂರ್ಣವಾಗಿ ನಾಶಮಾಡಿ ಹಾಚೋರನ್ನು ಬೆಂಕಿ ಯಿಂದ ಸುಟ್ಟುಬಿಟ್ಟರು.
ಇದಲ್ಲದೆ ದಾನನ ಮಕ್ಕಳ ಮೇರೆಯು ಅವರಿಗೆ ಸಾಲದಿದ್ದರಿಂದ ಅವರು ಹೊರಟು ಹೋಗಿ ಲೆಷೆಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.
ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಮೂಡಣದಲ್ಲಿದ್ದ ಡೇರೆಗಳಲ್ಲಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಆ ದಂಡನ್ನು ಹೊಡೆದು ಬಿಟ್ಟನು. ಯಾಕಂದರೆ ಆ ದಂಡು ಭದ್ರವಾಗಿತ್ತು.
ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡು ವಾಗ ಅವರು ನಿಶ್ಚಿಂತರಾಗಿಯೂ ಚೀದೋನ್ಯರ ಹಾಗೆ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇದ್ದರು; ಯಾವ ಕಾರ್ಯದಲ್ಲಾದರೂ ನಾಚಿಕೆಪಡಿಸುವದಕ್ಕೆ ಬಿಗಿಹಿಡಿಯುವ ನ್ಯಾಯಾಧಿಪತಿಯು ದೇಶದಲ್ಲಿ ಇರ ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದರು; ಯಾವ ಮನುಷ್ಯನ ಸಂಗಡವೂ ಅವರಿಗೆ ಏನೂ ಕೆಲಸವಿರಲಿಲ್ಲ.
ನೀವು ಅಲ್ಲಿಗೆ ಹೋಗುವಾಗ ಭರವಸವಾಗಿರುವ ಜನರ ಬಳಿಗೆ ಹೋಗುವಿರಿ; ಅದು ವಿಸ್ತಾರವಾದ ದೇಶವಾಗಿದೆ; ದೇವರು ಅದನ್ನು ನಿಮ್ಮ ಕೈಗಳಲ್ಲಿ ಒಪ್ಪಿಸಿಕೊಟ್ಟಿದ್ದಾನೆ. ಆ ಸ್ಥಳದಲ್ಲಿ ಭೂಮಿ ಯಲ್ಲಿರುವ ವಸ್ತುಗಳಲ್ಲಿ ಒಂದಾದರೂ ಕೊರತೆ ಇಲ್ಲ ಅಂದರು.