Home Bibles ನ್ಯಾಯಾಧಿಪತಿಗಳು 15:20 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 15:20 · ಕನ್ನಡ ಬೈಬಲ್

ಅವನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರುಷ ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು.

Cross references

ಆದಿಕಾಂಡ 49:16

ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು.

ನ್ಯಾಯಾಧಿಪತಿಗಳು 13:1

ಇಸ್ರಾಯೇಲ್‌ ಮಕ್ಕಳು ತಿರಿಗಿ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ ಕರ್ತನು ಅವರನ್ನು ನಾಲ್ವತ್ತು ವರುಷದ ವರೆಗೆ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಟ್ಟನು.

ನ್ಯಾಯಾಧಿಪತಿಗಳು 13:5

ಇಗೋ, ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವಿ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರುವದಿಲ್ಲ. ಗರ್ಭದಿಂದಲೇ ಆ ಹುಡುಗನು ದೇವರ ನಾಜೀರನಾಗಿ ರುವನು. ಅವನು ಇಸ್ರಾಯೇಲ್ಯರನ್ನು ಫಿಲಿಷ್ಟಿ ಯರ ಕೈಯಿಂದ ಬಿಡಿಸಿ ರಕ್ಷಿಸಲು ಪ್ರಾರಂಭಿಸುವನು ಅಂದನು.

ನ್ಯಾಯಾಧಿಪತಿಗಳು 16:31

ಅವನ ಸಹೋದರರೂ ಅವನ ತಂದೆಯ ಮನೆಯವರೆಲ್ಲರೂ ಹೋಗಿ ಅವನನ್ನು ತಕ್ಕೊಂಡು ಬಂದು ಚೊರ್ಗಕ್ಕೂ ಎಷ್ಟಾವೋಲಿಗೂ ನಡುವೆ ಅವನ ತಂದೆ ಯಾದ ಮಾನೋಹನ ಸಮಾಧಿಯಲ್ಲಿ ಅವನನ್ನು ಹೂಣಿಟ್ಟರು. ಅವನು ಇಸ್ರಾಯೇಲಿಗೆ ಇಪ್ಪತ್ತು ವರುಷ ನ್ಯಾಯತೀರಿಸಿದನು.

1 ಸಮುವೇಲ 4:18

ಅವನು ದೇವರ ಒಡಂಬಡಿಕೆಯ ಮಂಜೂಷದ ಮಾತನ್ನು ಹೇಳಿದಾಗ ಏಲಿಯು ಆಸನದ ಮೇಲಿನಿಂದ ಬಾಗಲಿನ ಪಾರ್ಶ್ವವಾಗಿ ಹಿಂದಕ್ಕೆ ಬಿದ್ದು ಕುತ್ತಿಗೆ ಮುರಿದು ಸತ್ತನು. ಯಾಕಂದರೆ ಅವನು ಮುದುಕನಾಗಿಯೂ ಭಾರವುಳ್ಳ ವನಾಗಿಯೂ ಇದ್ದನು. ಅವನು ನಾಲ್ವತ್ತು ವರುಷ ಇಸ್ರಾಯೇಲಿಗೆ ನ್ಯಾಯತೀರಿಸಿದನು.

ಹೆಬ್ರಿಯರಿಗೆ 11:32

ಇನ್ನೂ ಏನು ಹೇಳಬೇಕು? ಗಿಡಿಯೋನ್‌ ಬಾರಾಕ್‌ ಸಂಸೋನ್‌ ಎಫ್‌ಥ ದಾವೀದ್‌ ಸಮುವೇಲ್‌ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವದಕ್ಕೆ ನನಗೆ ಸಮಯ ಸಾಲದು.

Interlinear

Choose Theme