ಅವನಿಗೆ ಮೂವತ್ತು ಮಂದಿ ಕುಮಾರರೂ ಮೂವತ್ತು ಮಂದಿ ಕುಮಾರ್ತೆಯರೂ ಇದ್ದರು. ಕುಮಾರ್ತೆಯರನ್ನು ಹೊರಗೆ ಮದುವೆಮಾಡಿಕೊಟ್ಟನು; ಹೊರಗಿ ನಿಂದ ಮೂವತ್ತು ಮಂದಿ ಕುಮಾರ್ತೆಯರನ್ನು ತನ್ನ ಕುಮಾರರಿಗೆ ತಕ್ಕೊಂಡನು. ಅವನು ಇಸ್ರಾಯೇಲ್ಯರಿಗೆ ಏಳು ವರುಷ ನ್ಯಾಯತೀರಿಸಿದನು.
Cross references
ಅವನಿಗೆ ಮೂವತ್ತು ಕತ್ತೇಮರಿಗಳ ಮೇಲೆ ಏರುವ ಮೂವತ್ತು ಮಂದಿ ಕುಮಾರರು ಇದ್ದರು. ಇವರಿಗೆ ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳಿದ್ದವು; ಅವುಗಳಿಗೆ ಈ ದಿನದ ವರೆಗೂ ಹವೋತ್ಯಾಯಾರೆಂಬ ಹೆಸರಿದೆ.
ಅವನಿಗೆ ಎಪ್ಪತ್ತು ಕತ್ತೇಮರಿ ಗಳ ಮೇಲೆ ಏರುವ ನಾಲ್ವತ್ತು ಮಂದಿ ಕುಮಾರರೂ ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲ್ಯರಿಗೆ ಎಂಟು ವರುಷ ನ್ಯಾಯತೀರಿಸಿ ದನು.ಪಿರಾತೋನಿಯವನಾದ ಹಿಲ್ಲೇಲನ ಮಗ ನಾದ ಅಬ್ದೋನನು ಸತ್ತು ಎಫ್ರಾಯಾಮ್ ದೇಶ ದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಹೂಣಲ್ಪಟ್ಟನು.
ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ.
ಈಗ ವಿಚಾರಿಸಿ ನೋಡಿರಿ; ಗಂಡಸು ಪ್ರಸವವೇದನೆ ಪಡುವದುಂಟೇ? ನಾನು ಯಾಕೆ ಪುರುಷರೆಲ್ಲರನು ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಯಾಕೆ ಮುಖಗಳೆಲ್ಲಾ ಕಳೆಗುಂದಿದವು?