ಮನಸ್ಸೆಯವರು ಬೇತ್‌ಷೆಯಾನ್ ತಾನಾಕ್ ದೋರ್ ಇಬ್ಲೆಯಾಮ್ ಮೆಗಿದ್ದೋ ಎಂಬ ಪಟ್ಟಣ ಗಳನ್ನು ಅವುಗಳ ಗ್ರಾಮಗಳನ್ನು ಸ್ವಾಧೀನಮಾಡಿ ಕೊಳ್ಳಲಿಲ್ಲ. ಆದದರಿಂದ ಕಾನಾನ್ಯರು ಆ ಪ್ರಾಂತ ಗಳಲ್ಲೇ ವಾಸಿಸುವದಕ್ಕೆ ದೃಢಮಾಡಿದರು.
Cross references
ಅವರ ಸಂಗಡಲೂ ಅವರ ದೇವರುಗಳ ಸಂಗಡಲೂ ಯಾವ ಒಡಂಬಡಿಕೆಯನ್ನೂ ಮಾಡಬಾರದು.ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು.
ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಒಪ್ಪಿಸಲು ನೀನು ಅವರನ್ನು ಹೊಡೆದು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ಅವರ ಸಂಗಡ ಒಡಂಬಡಿಕೆ ಮಾಡಿ ಕೊಳ್ಳಬಾರದು. ಇಲ್ಲವೆ ಅವರಿಗೆ ದಯೆತೋರಿಸ ಬಾರದು.
ಉತ್ತರಕ್ಕೆ ಇರುವ ಆಶೇರಿನಿಂದ ಪೂರ್ವಕ್ಕೆ ಇರುವ ಇಸ್ಸಾಕಾರನ ವರೆಗೆ ಒಟ್ಟಿಗೆ ಕೂಡಿಕೊಳ್ಳುವದು. ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದ ಲ್ಲಿಯೂ ಇರುವ ಮೂರು ಸೀಮೆಗಳಾದ ಬೇತ್‌ಷೆ ಯಾನ್ ಇಬ್ಲೆಯಾಮ್ ದೋರ್ ಎಂದೋರ್ ತಾನಕ್ ಮೆಗಿದ್ದೋನ್ ಅವುಗಳ ಗ್ರಾಮಗಳೂ ಇವು ಮನಸ್ಸೆ ಯವು.
ಮನಸ್ಸೆಯ ಅರ್ಧಗೋತ್ರದಲ್ಲಿ ತಾನಾಕನ್ನೂ ಅದರ ಉಪನಗರ ಗಳನ್ನೂ; ಗತ್‌ರಿಮ್ಮೋನನ್ನೂ ಅದರ ಉಪನಗರ ಗಳನ್ನೂ ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು.
ಬೆನ್ಯಾವಿಾನನ ಮಕ್ಕಳು ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲಿಲ್ಲ. ಆದರೆ ಯೆಬೂಸಿಯರು ಈ ದಿನದ ವರೆಗೆ ಬೆನ್ಯಾವಿಾ ನನ ಮಕ್ಕಳ ಸಂಗಡ ವಾಸವಾಗಿದ್ದಾರೆ.
ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸವಿಾಪ ವಾದ ತಾನಾಕದಲ್ಲಿ ಯುದ್ಧಮಾಡಿದರು; ಅವರು ಹಣದ ಲಾಭ ತಕ್ಕೂಳ್ಳಲಿಲ್ಲ.
ಸೌಲನು ಮತ್ತು ಜನರು ಅಗಾಗನನ್ನೂ ಪಶುಕುರಿಗಳಲ್ಲಿ ಮೇಲ್ತರವಾದ ವುಗಳನ್ನೂ ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದನು. ಆದರೆ ತಿರಸ್ಕರಿಸಲ್ಪಡತಕ್ಕ ಕನಿಷ್ಠವಾದವು ಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.
ಅವನ ಆಯುಧಗಳನ್ನು ಅಷ್ಟೋರೆತ್ ದೇವತೆಯ ಮಂದಿರ ದಲ್ಲಿಟ್ಟು ಅವನ ಶರೀರವನ್ನು ಬೇತ್ಷೆಯಾನಿನ ಕೋಟೆಯ ಗೋಡೆಗೆ ನೇತುಹಾಕಿದರು,
ಇವರ ತರುವಾಯ ದೇಶದಲ್ಲಿ ಉಳಿದ ಇಸ್ರಾಯೇಲ್ ಮಕ್ಕಳು ನಿರ್ಮೂಲ ಮಾಡದ ಅವರ ಮಕ್ಕಳು; ಇವರ ಮೇಲೆ ಸೊಲೊಮೋನನು ಇಂದಿನ ವರೆಗೂ ದಾಸತ್ವದ ಬಿಟ್ಟೀ ನೇಮಕವನ್ನಿಟ್ಟನು.
ಅವನ ದಿವಸಗಳಲ್ಲಿ ಐಗುಪ್ತದ ಅರಸನಾದ ಫರೋಹನೆಕೋ ಎಂಬವನು ಅಶ್ಶೂರಿನ ಅರಸನ ಮೇಲೆ ಯೂಫ್ರೇ ಟೀಸ್ ನದಿಗೆ ಹೋದನು; ಅರಸನಾದ ಯೋಷೀ ಯನು ಅವನ ಮೇಲೆ ಹೋದನು; ಅವನು ಇವನನ್ನು ನೋಡಿದಾಗ ಮೆಗಿದ್ದೋವಿನ ಬಳಿಯಲ್ಲಿ ಕೊಂದು ಹಾಕಿದನು.
ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.
ಆದರೆ ನಾನು ಏಸಾವನನ್ನು ಬರಿದುಮಾಡಿದ್ದೇನೆ; ಅದರ ರಹಸ್ಯ ಸ್ಥಳಗಳನ್ನು ತೆರೆದಿದ್ದೇನೆ; ಅವನು ತನ್ನನ್ನು ತಾನೇ ಅಡಗಿಸಿಕೊಳ್ಳಲಾರನು; ಅವನ ಸಂತಾನವು ಹಾಳಾಯಿತು; ಅವನ ಸಹೋದರರೂ ನೆರೆಯವರೂ ಅವನೂ ಇಲ್ಲವಾದರು.