Home Bibles ☰ Books ಯೆಹೋಶುವ 7:20 · ಕನ್ನಡ ಬೈಬಲ್
ಯೆಹೋಶುವ 7:20 · ಕನ್ನಡ ಬೈಬಲ್

ಆಗ ಆಕಾನನು ಯೆಹೋಶುವನಿಗೆ ಪ್ರತ್ಯುತ್ತರವಾಗಿ--ನಿಜವಾಗಿ ನಾನು ಇಸ್ರಾಯೇಲ್‌ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿ ಇಂತಿಂಥವುಗಳನ್ನು ಮಾಡಿದ್ದೇನೆ.

Cross references

ಆದಿಕಾಂಡ 42:21

ಆಗ ಅವರು--ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ ಅವನ ಪ್ರಾಣ ಸಂಕಟವನ್ನು ನೋಡಿಯೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು ಎಂದು ಅಂದುಕೊಂಡರು.

ನಿರ್ಗಮಕಾಂಡ 9:27

ಆಗ ಫರೋಹನು ಮೋಶೆ ಆರೋನರನ್ನು ಕರೇ ಕಳುಹಿಸಿ ಅವರಿಗೆ--ಈ ಸಾರಿ ನಾನು ಪಾಪಮಾಡಿ ದ್ದೇನೆ. ಕರ್ತನು ನೀತಿವಂತನು, ನಾನೂ ನನ್ನ ಜನರೂ ದುಷ್ಟರಾಗಿದ್ದೇವೆ.

ನಿರ್ಗಮಕಾಂಡ 10:16

ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ--ನಾನು ನಿಮ್ಮ ದೇವ ರಾದ ಕರ್ತನಿಗೂ ನಿಮಗೂ ವಿರೋಧವಾಗಿ ಪಾಪ ಮಾಡಿದ್ದೇನೆ.

ಅಂಕೆಗಳ ಪುಸ್ತಕ 22:34

ಆಗ ಬಿಳಾಮನು ಕರ್ತನ ದೂತನಿಗೆ ಹೇಳಿದ್ದುನಾನು ಪಾಪಮಾಡಿದ್ದೇನೆ; ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ; ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ ಅಂದನು.

1 ಸಮುವೇಲ 15:24

ಆಗ ಸೌಲನು ಸಮುವೇಲನಿಗೆ--ನಾನು ಕರ್ತನ ವಾಕ್ಯವನ್ನೂ ನಿನ್ನ ಮಾತುಗಳನ್ನೂ ವಿಾರಿ ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.

1 ಸಮುವೇಲ 15:30

ಅದಕ್ಕವನು--ನಾನು ಪಾಪವನ್ನು ಮಾಡಿದೆನು; ಆದರೆ ಈಗ ನೀನು ದಯಮಾಡಿ ನನ್ನ ಜನರ ಹಿರಿಯರ ಮುಂದೆಯೂ ಇಸ್ರಾಯೇಲ್ಯರ ಮುಂದೆಯೂ ನನ್ನನ್ನು ಗೌರವಿಸು ನಾನು ನಿನ್ನ ದೇವರಾದ ಕರ್ತನನ್ನು ಆರಾಧಿಸುವ ಹಾಗೆ ನೀನು ನನ್ನ ಸಂಗಡ ಹಿಂದಿರುಗಿ ಬಾ ಅಂದನು.

ಯೋಬ 7:20

ನಾನು ಪಾಪ ಮಾಡಿದ್ದೇನೆ; ಓ ಮನುಷ್ಯರನ್ನು ಕಾಯುವವನೇ, ನಾನು ನಿನಗೆ ಏನು ಮಾಡಲಿ? ನನಗೆ ನಾನೇ ಭಾರವಾಗುವ ಹಾಗೆ ನನ್ನನ್ನು ನಿನಗೆ ಗುರಿಯಾಗಿ ಇಟ್ಟು ಕೊಳ್ಳುವದು ಯಾಕೆ?ಯಾಕೆ ನನ್ನ ದ್ರೋಹವನ್ನು ಮನ್ನಿಸುವದಿಲ್ಲ? ನನ್ನ ಅಕ್ರಮವನ್ನು ಪರಿಹರಿಸುವ ದಿಲ್ಲವೇಕೆ? ಈಗ ಧೂಳಿನಲ್ಲಿ ಮಲಗಿಕೊಳ್ಳುವೆನು; ನೀನು ಮುಂಜಾವಿನಲ್ಲಿ ನನ್ನನ್ನು ಹುಡುಕಿದರೆ ನಾನು ಇರುವದಿಲ್ಲ.

ಯೋಬ 33:27

ಆತನು ಮನುಷ್ಯರನ್ನು ನೋಡಿ--ಯಾವನಾದರೂ--ನಾನು ಪಾಪಮಾಡಿ; ನ್ಯಾಯವನ್ನು ವಕ್ರಮಾಡಿದ್ದೇನೆ, ಆದರೆ ನನಗೆ ಅದರಿಂದ ಲಾಭವಾಗಲಿಲ್ಲ ಎಂದು ಹೇಳಿದರೆ;

ಕೀರ್ತನೆಗಳು 38:18

ನನ್ನ ಅಕ್ರಮವನ್ನು ತಿಳಿಸುವೆನು; ನನ್ನ ಪಾಪಕ್ಕೋಸ್ಕರ ದುಃಖಪಡುವೆನು.

ಮತ್ತಾಯ 26:9

ಯಾಕಂದರೆ ಈ ತೈಲವನ್ನು ಹೆಚ್ಚಿನ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಅಂದರು.

ಮತ್ತಾಯ 27:4

ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು.

Interlinear

Choose Theme