ಯೆಹೋಶುವ 3:9 · ಕನ್ನಡ ಬೈಬಲ್
ಆಗ ಯೆಹೋಶುವನು ಇಸ್ರಾಯೇಲ್ ಮಕ್ಕಳಿಗೆ--ನೀವು ಇಲ್ಲಿಗೆ ಬಂದು ನಿಮ್ಮ ದೇವರಾದ ಕರ್ತನ ವಾಕ್ಯಗಳನ್ನು ಕೇಳಿರಿ ಅಂದನು.
Cross references
ದ್ವಿತೀಯೋಪದೇಶಕಾಂಡ 4:1
ಹೀಗಿರುವದರಿಂದ ಈಗ ಇಸ್ರಾಯೇಲೇ, ನೀವು ಬದುಕಿ ನಿಮ್ಮ ಪಿತೃಗಳ ದೇವರಾದ ಕರ್ತನು ನಿಮಗೆ ಕೊಡುವ ದೇಶವನ್ನು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ನಿಮಗೆ ಬೋಧಿಸುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿ ಅವುಗಳನ್ನು ಮಾಡಿರಿ.
ದ್ವಿತೀಯೋಪದೇಶಕಾಂಡ 12:8
ನಾವು ಈಗ ಇಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ದೃಷ್ಟಿಯಲ್ಲಿ ತೋರುವ ಪ್ರಕಾರ ಮಾಡುವಂತೆ ನೀವು ಮಾಡಬೇಡಿರಿ.