Home Bibles ☰ Books ಯೆಹೋಶುವ 21:7 · ಕನ್ನಡ ಬೈಬಲ್
ಯೆಹೋಶುವ 21:7 · ಕನ್ನಡ ಬೈಬಲ್

ಇದಲ್ಲದೆ ಮೆರಾರಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ ಗಾದನ ಗೋತ್ರದಲ್ಲಿಯೂ ಜೆಬುಲೂನನ ಗೋತ್ರ ದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು.

Cross references

ನಿರ್ಗಮಕಾಂಡ 6:19

ಮೆರಾರೀಯ ಕುಮಾರರು: ಮಹ್ಲೀ ಮೂಷೀ. ವಂಶಾ ವಳಿಗಳ ಪ್ರಕಾರ ಇವರೇ ಲೇವಿಯ ಗೋತ್ರಗಳು.

ಅಂಕೆಗಳ ಪುಸ್ತಕ 3:20

ಮೆರಾರೀಯ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಮಹ್ಲೀಯೂ ಮೂಷೀಯೂ. ತಂದೆಗಳ ಮನೆಯ ಪ್ರಕಾರವಾಗಿ ಲೇವಿಯರ ಕುಟುಂಬಗಳು ಇವೇ.

ಯೆಹೋಶುವ 21:34

ಉಳಿದ ಲೇವಿಯರಾದ ಮೆರಾರೀಯ ಮಕ್ಕಳ ಕುಟುಂಬಗಳಿಗೆ ಜೆಬುಲೂನನ ಗೋತ್ರದಲ್ಲಿ ಯೊಕ್ನೆ ಯಾಮನ್ನೂ ಆದರ ಉಪನಗರಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ

ಯೆಹೋಶುವ 21:40

ಹೀಗೆಯೇ ಲೇವಿಯರ ಕುಟುಂಬಗಳಲ್ಲಿ ಉಳಿದಂಥ ಮೆರಾರೀಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಚೀಟಿನಿಂದ ದೊರೆತ ಪಟ್ಟಣಗಳೆಲ್ಲಾ ಹನ್ನೆರಡು ಪಟ್ಟಣಗಳೂ ಅವುಗಳ ಉಪನಗರಗಳೂ.

1 ದಿನವೃತ್ತಾಂತ 6:62

ಗೇರ್ಷೋಮನ ಕುಮಾರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ, ಹದಿಮೂರು ಪಟ್ಟಣಗಳು ಕೊಡಲ್ಪಟ್ಟಿದ್ದವು.

1 ದಿನವೃತ್ತಾಂತ 6:63

ಮೆರಾ ರೀಯ ಕುಮಾರರಿಗೂ ಅವರ ಕುಟುಂಬಗಳ ಪ್ರಕಾರ ಚೀಟು ಹಾಕಿ ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬೂಲೂನನ ಗೋತ್ರ ದಿಂದಲೂ, ಹನ್ನೆರಡು ಪಟ್ಟಣಗಳು ಕೊಡಲ್ಪಟ್ಟಿದ್ದವು.

1 ದಿನವೃತ್ತಾಂತ 6:77

ಮೆರಾರೀಯ ಉಳಿದ ಮಕ್ಕಳಿಗೂ ಜೆಬುಲೂನನ ಗೋತ್ರದಿಂದ ರಿಮ್ಮೋನೋ ಅದರ ಉಪನಗರಗಳೂ, ತಾಬೋರೂ ಅದರ ಉಪನಗರಗಳೂ,

Interlinear

Choose Theme