ಕೈ ತಪ್ಪಿ ಅರಿಯದೆ ಕೊಂದರೆ ಯಾವನಾದರೂ ಸಭೆಯ ಮುಂದೆ ಬಂದು ನಿಲ್ಲುವ ಪರ್ಯಂತರ ರಕ್ತದ ಸೇಡು ತೀರಿಸಿ ಕೊಳ್ಳುವವನ ಕೈಯಿಂದ ಸಾಯದ ಹಾಗೆ ಅಲ್ಲಿ ಓಡಿ ಹೋಗುವದಕ್ಕೆ ಇಸ್ರಾಯೇಲ್ ಮಕ್ಕಳೆಲ್ಲರಿಗೂ ಅವರ ಮಧ್ಯದಲ್ಲಿ ವಾಸವಾಗಿರುವ ಪರಕೀಯರಿಗೂ ನೇಮಿಸಲ್ಪಟ್ಟ ಪಟ್ಟಣಗಳು ಇವೇ.
Cross references
ಕೈತಪ್ಪಿ ಪ್ರಾಣಹತ್ಯ ಮಾಡುವವರೆಲ್ಲರು ಅಲ್ಲಿಗೆ ಓಡಿಹೋಗುವದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲ್ ಮಕ್ಕಳಿಗೂ ಪರಕೀಯರಿಗೂ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು.
ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಬಂದವನು ಪಟ್ಟಣದ ಪ್ರವೇಶ ದ್ವಾರದಲ್ಲಿ ನಿಂತು ಆ ಪಟ್ಟಣದ ಹಿರಿಯರು ಕೇಳುವ ಹಾಗೆ ತನ್ನ ಮಾತುಗಳನ್ನು ಹೇಳುವಾಗ ಅವರು ಅವನನ್ನು ಪಟ್ಟಣದೊಳಗೆ ಸೇರಿಸಿಕೊಂಡು ತಮ್ಮ ಬಳಿಯಲ್ಲಿ ವಾಸವಾಗಿರಲು ಅವನಿಗೆ ಸ್ಥಳವನ್ನು ಕೊಡಬೇಕು.
ಇದಲ್ಲದೆ ಅವನು ನ್ಯಾಯವಿಚಾರಣೆಗೋಸ್ಕರ ಸಭೆಯ ಮುಂದೆ ಬಂದು ನಿಲ್ಲುವವರೆಗೂ ಆಗಿನ ಪ್ರಧಾನ ಯಾಜಕನು ಮರಣ ಹೊಂದುವ ವರೆಗೂ ಆ ಪಟ್ಟಣದಲ್ಲೇ ವಾಸವಾಗಿರ ಬೇಕು. ತರುವಾಯ ಕೊಂದವನು ತಾನು ಬಿಟ್ಟು ಓಡಿಹೋದ ತನ್ನ ಪಟ್ಟಣಕ್ಕೂ ಮನೆಗೂ ತಿರುಗಿ ಬರಬಹುದು.