Home Bibles ☰ Books ಯೆಹೋಶುವ 2:7 · ಕನ್ನಡ ಬೈಬಲ್
ಯೆಹೋಶುವ 2:7 · ಕನ್ನಡ ಬೈಬಲ್

ಆ ಮನುಷ್ಯರು ಯೊರ್ದನಿಗೆ ಹೋಗುವ ಹಾದಿಯಲ್ಲಿ ನದಿಯ ರೇವುಗಳ ವರೆಗೂ ಅವರನ್ನು ಹಿಂದಟ್ಟಿದರು. ಅವರನ್ನು ಹಿಂದಟ್ಟುವವರು ಹೊರಟುಹೋದ ಕೂಡಲೆ ಹೆಬ್ಬಾಗಲನ್ನು ಮುಚ್ಚಿದರು.

Cross references

ಯೆಹೋಶುವ 2:5

ಬಾಗಲನ್ನು ಮುಚ್ಚುವ ವೇಳೆಯಲ್ಲಿ ಆ ಮನುಷ್ಯರು ಕತ್ತಲೆಯಲ್ಲಿ ಹೊರಟುಹೋದರು. ಅವರು ಎಲ್ಲಿ ಹೋದರೋ ನಾನು ಅರಿಯೆ; ಅವರನ್ನು ಬೇಗ ಹಿಂದಟ್ಟಿರಿ; ನಿಮಗೆ ಸಿಕ್ಕುವರು ಅಂದಳು.

ನ್ಯಾಯಾಧಿಪತಿಗಳು 3:28

ಅವರ ಸಂಗಡ--ನೀವು ನನ್ನ ಹಿಂದೆ ಬನ್ನಿರಿ; ಕರ್ತನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು ಎಂದು ಅಂದನು. ಅವರು ಅವನ ಹಿಂದೆ ಬಂದು ಮೋವಾಬ್ಯ ರಿಗೆ ಎದುರಾದ ಯೊರ್ದನಿನ ರೇವುಗಳನ್ನು ಹಿಡಿದು ಒಬ್ಬರನ್ನಾದರೂ ದಾಟಗೊಡದೆ

ನ್ಯಾಯಾಧಿಪತಿಗಳು 12:5

ಗಿಲ್ಯಾದ್ಯರು ಎಫ್ರಾಯಾಮ್ಯರ ಮುಂದುಗಡೆ ಇರುವ ಯೊರ್ದನಿನ ರೇವುಗಳನ್ನು ಹಿಡಿದರು. ಆಗ ಏನಾಯಿತಂದರೆ--ಎಫ್ರಾಯಾಮ್ಯರಲ್ಲಿ ತಪ್ಪಿಸಿಕೊಂಡ ಯಾವನಾದರೂ ಬಂದು--ದಾಟುತ್ತೇನೆ ಎಂದು ಹೇಳಿದರೆ; ಗಿಲ್ಯಾ ದ್ಯರು--ನೀನು ಎಫ್ರಾಯಾಮ್ಯನೋ? ಎಂದು ಅವ ನನ್ನು ಕೇಳಿದಾಗ ಅವನು--ಅಲ್ಲ ಅಂದರೆ ಅವನಿಗೆ ನೀವು--ಷಿಬ್ಬೋಲೆತ್‌ ಅನ್ನಬೇಕು ಅಂದರು.

ಅಪೋಸ್ತಲರ ಕೃತ್ಯಗಳು 5:23

ನಿಜವಾಗಿಯೂ ಸೆರೆಮನೆಯು ಎಲ್ಲಾ ಭದ್ರತೆಯಿಂದ ಮುಚ್ಚಲ್ಪಟ್ಟದ್ದನ್ನೂ ಕಾವಲುಗಾರರು ಬಾಗಲುಗಳಲ್ಲಿ ನಿಂತಿರುವದನ್ನೂ ನಾವು ಕಂಡೆವು; ಆದರೆ ಅದನ್ನು ತೆರೆದಾಗ ನಾವು ಯಾರನ್ನೂ ಒಳಗೆ ಕಾಣಲಿಲ್ಲ ಎಂದು ಹೇಳಿದರು.

Interlinear

Choose Theme