ಮನಸ್ಸೆಯ ಮೇರೆ ಯಾವದಂದರೆ; ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿಗೂ ಅಲ್ಲಿಂದ ಬಲ ಪಾರ್ಶ್ವವಾಗಿ ತಪ್ಪೂಹದ ನಿವಾಸಗಳಿಗೆ ಹೋಗುವದು.
Cross references
ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗನಾದ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಕೂಡಿ ಅಶುದ್ಧ ಮಾಡಿದನು.
ಆಗ ಅವನ ಸಹೋ ದರರು ಶೆಕೆಮಿನಲ್ಲಿ ತಮ್ಮ ತಂದೆಯ ಮಂದೆಯನ್ನು ಮೇಯಿಸುವದಕ್ಕೆ ಹೋದರು.
ಯಾಕೋಬನು ಅವನಿಗೆ--ಹೋಗಿ ನಿನ್ನ ಸಹೋದರರ ಕ್ಷೇಮಸಮಾಚಾರವನ್ನೂ ಮಂದೆಗಳ ಕ್ಷೇಮಸಮಾಚಾರವನ್ನೂ ತಿಳಿದುಕೊಂಡು ಬಂದು ನನಗೆ ತಿಳಿಸು ಎಂದು ಹೇಳಿ ಹೆಬ್ರೋನ್ ತಗ್ಗಿನಿಂದ ಕಳುಹಿಸಿದನು. ಆಗ ಅವನು ಶೆಕೆಮಿಗೆ ಬಂದನು.
ಪಶ್ಚಿಮದ ಮೇರೆ ಮಿಕ್ಮೆತಾತಿನಿಂದ ಉತ್ತರಕ್ಕೆ ಹೊರಟು ಮೂಡಣಕ್ಕೆ ತಾನತ್ ಶೀಲೋವಿಗೆ ತಿರುಗಿ ಯಾನೋಹಕ್ಕೆ ಮೂಡಣ ಕಡೆಯಾಗಿ ಹಾದು ಹೋಗಿ
ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಸಮುದ್ರದಲ್ಲಿ ಮುಗಿಯುವದು. ಇದು ಎಫ್ರಾಯಾ ಮನ ಮಕ್ಕಳ ಗೋತ್ರ, ಅವರ ಕುಂಟುಂಬಗಳ ಪ್ರಕಾರವೇ ಉಂಟಾದ ಬಾಧ್ಯತೆ.
ಹಾಗೆಯೇ ಅವರು ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ ಎಫ್ರಾ ಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಯೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯರ್ತ್‌ಬ ವನ್ನೂ ನೇಮಿಸಿದರು.
ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಅದರ ಉಪನಗರಗಳನ್ನೂ ಗೆಜೆರನ್ನೂ ಅದರ ಉಪನಗರ ಗಳನ್ನೂ
ಯೆಹೋಶುವನು ಶೆಕೆಮಿನಲ್ಲಿ ಇಸ್ರಾಯೇಲಿನ ಸಮಸ್ತ ಗೋತ್ರದವರನ್ನು ಕೂಡಿಸಿ ಇಸ್ರಾಯೇಲಿನ ಹಿರಿಯರನ್ನೂ ಅವರ ಮುಖ್ಯಸ್ಥ ರನ್ನೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ಕರೆಸಿದನು. ಅವರು ದೇವರ ಮುಂದೆ ಬಂದು ನಿಂತರು.
ಇದ ಲ್ಲದೆ ಇಸ್ರಾಯೇಲ್ ಮಕ್ಕಳು ಐಗುಪ್ತದಿಂದ ತಂದ ಯೋಸೇಫನ ಎಲುಬುಗಳನ್ನು ಅವರು ಶೆಕೆಮಿನಲ್ಲಿ ಯಾಕೋಬನು ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ನೂರು ಬೆಳ್ಳಿನಾಣ್ಯಗಳಿಗೆ ಕೊಂಡು ಕೊಂಡಿದ್ದ, ಯೋಸೇಫನ ಮಕ್ಕಳಿಗೆ ಬಾಧ್ಯತೆ ಯಾದ, ನೆಲದ ಭಾಗದಲ್ಲಿ ಹೂಣಿಟ್ಟರು.ಆರೋ ನನ ಮಗನಾದ ಎಲೀಯಾಜರನು ಸತ್ತನು; ಅವ ನನ್ನು ಅವನ ಮಗನಾದ ಫೀನೆಹಾಸನಿಗೆ ಎಫ್ರಾ ಯಾಮ್ ಬೆಟ್ಟದ ದೇಶದಲ್ಲಿ ಕೊಡಲ್ಪಟ್ಟ ಗುಡ್ಡದಲ್ಲಿ ಹೂಣಿಟ್ಟರು.
ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿನಲ್ಲಿರುವ ತನ್ನ ತಾಯಿಯ ಸಹೋದರರ ಬಳಿಗೆ ಹೋಗಿ ಅವರ ಸಂಗಡವೂ ತನ್ನ ತಾಯಿಯ ತಂದೆ ಮನೆಯ ಕುಟುಂಬದವರೆ ಲ್ಲರ ಸಂಗಡವೂ ಮಾತನಾಡಿ--
ರೆಹಬ್ಬಾಮನು ಶೆಕೆಮಿಗೆ ಹೋದನು; ಯಾಕಂದರೆ ಅವನನ್ನು ಅರಸನಾಗ ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರು ಶೆಕೆಮಿಗೆ ಬಂದರು.
ಯಾರೊಬ್ಬಾಮನು ಎಫ್ರಾಯಾಮನ ಬೆಟ್ಟದಲ್ಲಿ ಶೆಕೆಮನನ್ನು ಕಟ್ಟಿಸಿ ಅದರಲ್ಲಿ ವಾಸಿಸಿದನು. ಅಲ್ಲಿಂದ ಹೊರಟುಹೋಗಿ ಪೆನೂವೇಲನ್ನು ಕಟ್ಟಿಸಿದನು.
ಇದಲ್ಲದೆ ಆಶ್ರಯ ಪಟ್ಟಣಗಳಾಗಿರುವ ಹಾಗೆ ಅವರಿಗೆ ಎಫ್ರಾಯಾಮ್ ಬೆಟ್ಟದಲ್ಲಿರುವ ಶೆಕೆಮನ್ನೂ ಅದರ ಉಪನಗರಗಳನ್ನೂ, ಗೆಜರನ್ನೂ ಅದರ ಉಪನಗರಗಳನ್ನೂ,