Home Bibles ಯೆಹೋಶುವ 14:3 · ಕನ್ನಡ ಬೈಬಲ್
ಯೆಹೋಶುವ 14:3 · ಕನ್ನಡ ಬೈಬಲ್

ಮೋಶೆಯು ಯೊರ್ದನಿಗೆ ಆಚೆ ಎರಡುವರೆ ಗೋತ್ರಗಳಿಗೆ ಬಾಧ್ಯತೆಯನ್ನು ಕೊಟ್ಟಿದ್ದನು. ಆದರೆ ಲೇವಿಯರಿಗೆ ಯಾವ ಬಾಧ್ಯತೆಯನ್ನೂ ಕೊಡಲಿಲ್ಲ;

Cross references

ಅಂಕೆಗಳ ಪುಸ್ತಕ 32:29

ಮೋಶೆಯು ಅವರಿಗೆ--ಗಾದನ ಮಕ್ಕಳೂ ರೂಬೇನನ ಮಕ್ಕಳೂ ಎಲ್ಲರು ಯುದ್ಧಕ್ಕೆ ಸಿದ್ಧವಾಗಿದ್ದು ನಿಮ್ಮ ಸಂಗಡ ಯೊರ್ದನ್‌ ನದಿಯನ್ನು ಕರ್ತನ ಮುಂದೆ ದಾಟಿದರೆ ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್‌ ದೇಶವನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು.

ದ್ವಿತೀಯೋಪದೇಶಕಾಂಡ 3:12

ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್‌ ನದಿಯ ಸವಿಾಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು ಅರ್ಧ ಗಿಲ್ಯಾದ್‌ ಬೆಟ್ಟವನ್ನೂ ಅದರ ಪಟ್ಟಣಗಳನ್ನೂ ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಕೊಟ್ಟೆನು.

ಯೆಹೋಶುವ 12:6

ಇವರನ್ನು ಕರ್ತನ ಸೇವಕನಾದ ಮೋಶೆಯೂ ಇಸ್ರಾಯೇಲ್‌ ಮಕ್ಕಳೂ ಹೊಡೆದು ಬಿಟ್ಟು ಅವರ ದೇಶವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವಾಸ್ತ್ಯವಾಗಿ ಕೊಟ್ಟನು.

ಯೆಹೋಶುವ 13:8

ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ:

ಯೆಹೋಶುವ 13:14

ಆದರೆ ಮೋಶೆಯು ಲೇವಿಯರ ಗೋತ್ರಕ್ಕೆ ಮಾತ್ರ ಯಾವ ಬಾಧ್ಯತೆಯನ್ನೂ ಕೊಡಲಿಲ್ಲ; ಯಾಕಂದರೆ ಅವನು ಅವರಿಗೆ ಹೇಳಿದ ಪ್ರಕಾರ ಇಸ್ರಾಯೇಲಿನ ದೇವರಾದ ಕರ್ತನ ದಹನ ಬಲಿಗಳೇ ಅವರ ಬಾಧ್ಯತೆಯಾಗಿವೆ.

ಯೆಹೋಶುವ 13:16

ಅರ್ನೋನ್‌ ನದಿಯ ತೀರದ ಲ್ಲಿರುವ ಅರೋಯೇರ್‌ ನದಿಯ ಮಧ್ಯದಲ್ಲಿರುವ ಪಟ್ಟಣವು ಮೊದಲುಗೊಂಡು

ಯೆಹೋಶುವ 13:17

ಮೇದೆಬದ ಬಳಿ ಯಲ್ಲಿರುವ ಸಕಲ ಸಮನಾದ ಭೂಮಿಯೂ ಸಮನಾದ ಭೂಮಿಯಲ್ಲಿರುವ ಹೆಷ್ಬೋನು ಅದರ ಎಲ್ಲಾ ಪಟ್ಟಣಗಳಾದ ದೀಬೋನು, ಬಾಮೋತ್‌ಬಾಳ್‌, ಬೆತ್ಬಾಳ್ಮೆಯೋನ್‌,

ಯೆಹೋಶುವ 13:32

ಸೂರ್ಯೋದಯದ ದಿಕ್ಕಿನಲ್ಲಿ ಯೆರಿಕೋವಿನ ಬಳಿಯಲ್ಲಿ ಹೀಗೆಯೇ ಮೋಶೆಯು ಯೊರ್ದನಿಗೆ ಆಚೆಯಲ್ಲಿರುವ ಮೋವಾಬಿನ ಬೈಲುಗಳಲ್ಲಿ ಬಾಧ್ಯತೆ ಯಾಗಿ ಹಂಚಿದ ದೇಶಗಳು ಇವೇ.ಆದರೆ ಲೇವಿ ಯನ ಗೋತ್ರಕ್ಕೆ ಮೋಶೆಯು ಯಾವ ಬಾಧ್ಯತೆಯನ್ನು ಕೊಡಲಿಲ್ಲ. ಇಸ್ರಾಯೇಲ್‌ ದೇವರಾದ ಕರ್ತನು ಅವರಿಗೆ ಹೇಳಿದ ಪ್ರಕಾರ ತಾನೇ ಅವರ ಬಾಧ್ಯತೆ.

Interlinear

Choose Theme