ಅವರ ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ತಂದೆಗಳ ಮುಖ್ಯಸ್ಥರೂ ಅವರಿಗೆ ಬಾಧ್ಯತೆಯಾಗಿ ಕೊಡಲು ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳು ಬಾಧ್ಯ ವಾಗಿ ಹೊಂದಿದ ದೇಶಗಳು ಇವೇ.
Cross references
ದೇಶವನ್ನು ನಿಮಗೆ ಹಂಚಬೇಕಾದ ಮನುಷ್ಯರ ಹೆಸರುಗಳು ಇವೇ: ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ
ಆದರೆ ನೀವು ಯೊರ್ದನನ್ನು ದಾಟಿದ ಮೇಲೆ ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ವಾಸಮಾಡುವಾಗ ಆತನು ಸುತ್ತಲಿ ರುವ ಎಲ್ಲಾ ಶತ್ರುಗಳಿಂದ ನಿಮ್ಮನ್ನು ತಪ್ಪಿಸಿ ನಿಮಗೆ ವಿಶ್ರಾಂತಿ ಕೊಟ್ಟ ಮೇಲೆ
ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನ ವರೆಗೂ ಬೆಟ್ಟದ ದೇಶದ ಎಲ್ಲಾ ನಿವಾಸಿಗಳನ್ನೂ ಎಲ್ಲಾ ಚೀದೋನ್ಯರನ್ನೂ ನಾನು ಇಸ್ರಾಯೇಲ್ ಮಕ್ಕಳ ಎದುರಿನಿಂದ ಹೊರಡಿಸಿ ಬಿಡುವೆನು. ಆದರೆ ನಾನು ನಿನಗೆ ಹೇಳಿದ ಹಾಗೆಯೇ ನೀನು ಚೀಟುಗಳನ್ನು ಹಾಕಿ ಇಸ್ರಾಯೇಲಿಗೆ ಬಾಧ್ಯತೆಯಾಗಿ ಪಾಲಿಡಬೇಕು.
ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.
ಲೇವಿಯರ ಪಿತೃಗಳ ಹಿರಿಯರು ಕಾನಾನ್ ದೇಶದ ಶೀಲೋವಿನಲ್ಲಿರುವ ಯಾಜಕ ನಾದ ಎಲಿಯಾಜರನ ಬಳಿಗೂ ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಪಿತೃಗಳಲ್ಲಿರುವ ಹಿರಿಯರ ಬಳಿಗೂ ಬಂದು ಅವರ ಸಂಗಡ ಮಾತನಾಡಿ--
ಇವನು ಅಬೀಷೂವನ ಮಗನು, ಇವನು ಫೀನೆಹಾಸನ ಮಗನು, ಇವನು ಎಲ್ಲಾಜಾರನ ಮಗನು, ಇವನು ಪ್ರಧಾನ ಯಾಜಕ ನಾದ ಆರೋನನ ಮಗನು.
ಇದಲ್ಲದೆ ನೀವು ದೇಶವನ್ನು ಚೀಟುಹಾಕಿಸ್ವಾಸ್ತ್ಯವಾಗಿ ಹಂಚುವಾಗ, ಒಂದು ಪರಿಶುದ್ಧ ಭಾಗವನ್ನು ಪ್ರತ್ಯೇಕಿಸಿ, ಕರ್ತನಿಗೆ ಕಾಣಿಕೆಯಾಗಿ ಕೊಡಬೇಕು; ಅದು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಹತ್ತು ಸಾವಿರ ಮೊಳ ಅಗಲವಾಗಿಯೂ ಇರಲಿ, ಇದು ಅದರ ಎಲ್ಲಾ ಮೇರೆಗಳಲ್ಲಿ ಸುತ್ತಲಾಗಿ ಪರಿಶುದ್ಧವಾಗಿರಲಿ.