Home Bibles ☰ Books ಯೆಹೋಶುವ 10:13 · ಕನ್ನಡ ಬೈಬಲ್
ಯೆಹೋಶುವ 10:13 · ಕನ್ನಡ ಬೈಬಲ್

ಆದದರಿಂದ ಜನಾಂಗವು ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ಮಾಡುವ ವರೆಗೆ ಸೂರ್ಯ ಚಂದ್ರರು ನೆಲೆಯಾಗಿ ನಿಂತಿದ್ದರು. ಇದು ಯಾಷಾರಿನ ಪುಸ್ತಕದಲ್ಲಿ ಬರೆದಿರ ಲಿಲ್ಲವೋ? ಹಾಗೆಯೇ ಸೂರ್ಯನು ಅಸ್ತಮಿಸಲು ತ್ವರೆಮಾಡದೆ ಹೆಚ್ಚುಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿ ನಿಂತಿದ್ದನು.

Cross references

ಅಂಕೆಗಳ ಪುಸ್ತಕ 21:14

ಆದ ಕಾರಣ ಕರ್ತನ ಯುದ್ಧಗಳ ಪುಸ್ತಕದಲ್ಲಿ ಆತನು ಕೆಂಪು ಸಮುದ್ರದಲ್ಲಿಯೂ ಅರ್ನೋನಿನ ಹಳ್ಳಗಳಲ್ಲಿಯೂ

ಅಂಕೆಗಳ ಪುಸ್ತಕ 31:2

ನೀನು ಮಿದ್ಯಾನ್ಯರ ಕಡೆಯಿಂದ ಇಸ್ರಾಯೇಲ್‌ ಮಕ್ಕಳ ಮುಯ್ಯನ್ನು ತೀರಿಸು, ತರು ವಾಯ ನಿನ್ನ ಜನರ ಸಂಗಡ ನೀನು ಕೂಡಿಸಲ್ಪಡುವಿ ಅಂದನು.

ಯೆಹೋಶುವ 10:11

ತರುವಾಯ ಅವರು ಬೇತ್‌ಹೋರೋನಿಂದ ಇಳಿದು ಅಜೇಕದ ವರೆಗೆ ಇಸ್ರಾಯೇಲಿನ ಮುಂದೆ ಓಡಿ ಹೋಗುವಾಗ ಅವರ ಮೇಲೆ ಕರ್ತನು ಆಕಾಶದಿಂದ ಅವರನ್ನು ಕೊಲ್ಲುವ ದೊಡ್ಡ ಕಲ್ಲುಗಳನ್ನು ಬೀಳಿಸಿದನು. ಇಸ್ರಾಯೇಲ್‌ ಮಕ್ಕಳು ಕತ್ತಿಯಿಂದ ಕೊಂದವರಿಗಿಂತ ಕಲ್ಲು ಮಳೆ ಯಿಂದ ಸತ್ತವರು ಹೆಚ್ಚಾಗಿದ್ದರು.

ಯೆಹೋಶುವ 10:14

ಕರ್ತನು ಒಬ್ಬ ಮನುಷ್ಯನ ಮಾತನ್ನು ಕೇಳಿದಂಥಾ ಆ ದಿನಕ್ಕೆ ಸಮಾನ ವಾದ ದಿನವು ಪೂರ್ವದಲ್ಲಿಯೂ ಇಲ್ಲ, ಮುಂದೆಯೂ ಇಲ್ಲ; ಯಾಕಂದರೆ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದನು.

ನ್ಯಾಯಾಧಿಪತಿಗಳು 5:2

ಜನರು ಸ್ವೇಚ್ಛೆಯಿಂದ ತಮ್ಮನ್ನು ಸಮ ರ್ಪಿಸಿಕೊಂಡಾಗ ಕರ್ತನು ಇಸ್ರಾಯೇಲಿಗೋಸ್ಕರ ಮುಯ್ಯಿಗೆ ಮುಯ್ಯಿ ಮಾಡಿದ್ದರಿಂದ ನೀವು ಆತನನ್ನು ಕೊಂಡಾಡಿರಿ.

ನ್ಯಾಯಾಧಿಪತಿಗಳು 16:28

ಆಗ ಸಂಸೋನನು ಕರ್ತನನ್ನು ಕೂಗಿಕರ್ತನಾದ ದೇವರೇ, ನಾನು ನನ್ನ ಎರಡು ಕಣ್ಣುಗಳಿ ಗಾಗಿ ಒಂದೇ ಸಾರಿ ಫಿಲಿಷ್ಟಿಯರಿಗೆ ಮುಯ್ಯಿಗೆ ಮುಯ್ಯಿ ಮಾಡುವ ಹಾಗೆ ಈ ಸಾರಿ ಮಾತ್ರ ನನ್ನನ್ನು ನೆನಸಿ ಬಲಪಡಿಸು,

2 ಸಮುವೇಲ 1:18

ಇದ ಲ್ಲದೆ ದಾವೀದನು ಬಿಲ್ಲೆಂಬ ಗೀತವನ್ನು ಯೆಹೂದನ ಮಕ್ಕಳಿಗೆ ಕಲಿಸಬೇಕೆಂದು ಹೇಳಿದನು; ಇಗೋ, ಇದು ಯಾಷಾರಿನ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ,

2 ಅರಸುಗಳು 20:10

ಅದಕ್ಕೆ ಹಿಜ್ಕೀ ಯನು--ನೆರಳು ಹತ್ತು ಮೆಟ್ಟಲು ಇಳಿಯುವದು ಅಲ್ಪವಾದದ್ದು; ಹಾಗಲ್ಲ, ನೆರಳು ಹತ್ತು ಮೆಟ್ಟಲು ಹಿಂದಕ್ಕೆ ತಿರುಗಲಿ ಅಂದನು.

ಎಸ್ತೇರ್ 8:13

ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿಗೆಮುಯ್ಯಿ ಮಾಡಲು ಆ ದಿನಕ್ಕೆ ಅವರು ಸಿದ್ಧವಾಗಿರುವ ಹಾಗೆ ಈ ಆಜ್ಞಾಪತ್ರದ ಪ್ರತಿಯು ಪ್ರಾಂತ್ಯ, ಪ್ರಾಂತ್ಯದಲ್ಲಿ ಸಕಲ ಜನರಿಗೂ ಸಾರಿ ಹೇಳ ಲ್ಪಟ್ಟಿತು.

ಯೋಬ 9:7

ಉದಯಿಸದ ಹಾಗೆ ಸೂರ್ಯನಿಗೆ ಅಪ್ಪಣೆಕೊಡುತ್ತಾನೆ; ನಕ್ಷತ್ರಗಳಿಗೆ ಮುದ್ರೆಹಾಕುತ್ತಾನೆ;

ಕೀರ್ತನೆಗಳು 19:4

ಭೂಮಿಯ ಮೇಲೆಲ್ಲಾ ಅವು ಗಳ ಪ್ರಭುತ್ವವೂ ಭೂಲೋಕದ ಅಂತ್ಯದ ವರೆಗೆ ಅವುಗಳ ನುಡಿಗಳೂ ಹರಡಿವೆ; ಅವುಗಳಲ್ಲಿ ಆತನು ಸೂರ್ಯನಿಗೆ ಗುಡಾರವನ್ನು ಹಾಕಿದ್ದಾನೆ.

ಕೀರ್ತನೆಗಳು 74:16

ಹಗಲು ನಿನ್ನದು; ರಾತ್ರಿಯು ಸಹ ನಿನ್ನದು; ನೀನು ಬೆಳಕನ್ನೂ ಸೂರ್ಯ ನನ್ನೂ ಸಿದ್ಧಮಾಡಿದ್ದೀ.

ಕೀರ್ತನೆಗಳು 136:7

ದೊಡ್ಡ ಬೆಳಕುಗಳನ್ನು ಉಂಟು ಮಾಡಿದಾತ ನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

Interlinear

Choose Theme