ಅದಕ್ಕೆ ಯೇಸು ಪ್ರತ್ಯುತ್ತರವಾಗಿ-- ನನಗೆ ದೆವ್ವ ಹಿಡಿದಿಲ್ಲ; ಆದರೆ ನನ್ನ ತಂದೆಯನ್ನು ಸನ್ಮಾನಿಸುತ್ತೇನೆ, ನೀವು ನನ್ನನ್ನು ಅವಮಾನ ಪಡಿಸುತ್ತೀರಿ.
Cross references
ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ.
ಕರ್ತನು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು, ಆತನು ನ್ಯಾಯಪ್ರಮಾಣವನ್ನು ಹೆಚ್ಚಿಸಿ ಘನಪಡಿಸುವನು.
ಆತನು ನನಗೆ--ನೀನು ನನ್ನ ಸೇವಕನು, ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ ಎಂದು ಹೇಳಿದನು.
ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಸದ್ಯಕ್ಕೆ ಒಪ್ಪಿಕೋ; ಯಾಕಂದರೆ ಎಲ್ಲಾ ನೀತಿಯನ್ನು ಹೀಗೆ ನೆರವೇರಿ ಸುವದು ನಮಗೆ ಯೋಗ್ಯವಾಗಿದೆ ಎಂದು ಹೇಳಿದನು. ಆಗ ಅವನು ಒಪ್ಪಿಕೊಂಡನು.
ಇದಲ್ಲದೆ ನನ್ನನ್ನು ಕಳುಹಿಸಿದಾತನು ನನ್ನ ಸಂಗಡ ಇದ್ದಾನೆ; ತಂದೆಯು ನನ್ನನ್ನು ಒಂಟಿಯಾಗಿ ಬಿಡಲಿಲ್ಲ;ಯಾಕಂದರೆ ಆತನು ಮೆಚ್ಚುವವುಗಳನ್ನೇ ನಾನು ಯಾವಾಗಲೂ ಮಾಡುತ್ತೇನೆ ಅಂದನು.
ಯೇಸು ಅದನ್ನು ಕೇಳಿ--ಈ ರೋಗವು ಮರಣಕ್ಕಾಗಿಯಲ್ಲ, ಆದರೆ ದೇವಕುಮಾರನು ಅದರಿಂದ ಮಹಿಮೆ ಹೊಂದುವಂತೆ ದೇವರ ಮಹಿಮೆಗೋಸ್ಕರವೇ ಬಂದದ್ದು ಎಂದು ಹೇಳಿದನು.
ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ ಅಂದನು. ಆಗ--ನಾನು ಮಹಿ ಮೆಪಡಿಸಿದ್ದೇನೆ, ತಿರಿಗಿ ಅದನ್ನು ಮಹಿಮೆಪಡಿಸುವೆನು ಎಂದು ಹೇಳುವ ಧ್ವನಿಯು ಪರಲೋಕದಿಂದ ಬಂತು.
ಅವನು ಹೊರಗೆ ಹೋದಮೇಲೆ ಯೇಸು-- ಈಗ ಮನುಷ್ಯಕುಮಾರನು ಮಹಿಮೆಪಟ್ಟಿದ್ದಾನೆ. ದೇವರು ಆತನಲ್ಲಿ ಮಹಿಮೆಪಟ್ಟಿದ್ದಾನೆ.
ನನ್ನ ಹೆಸರಿನಲ್ಲಿ ನೀವು ಏನೇನು ಬೇಡಿಕೊಳ್ಳುವಿರೋ ಅದನ್ನು ನಾನು ಮಾಡುವೆನು. ಹೀಗೆ ಮಗನಲ್ಲಿ ತಂದೆಯು ಮಹಿಮೆ ಹೊಂದುವನು.
ನಾನು ನಿನ್ನನ್ನು ಭೂಮಿಯ ಮೇಲೆ ಮಹಿಮೆಪಡಿಸಿದ್ದೇನೆ; ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮುಗಿಸಿದ್ದೇನೆ;
ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ
ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು.