ಅವರು ಪ್ರತ್ಯುತ್ತರವಾಗಿ ಅವನಿಗೆ--ನೀನು ಸಹ ಗಲಿಲಾಯದವನೋ? ಗಲಿ ಲಾಯದಲ್ಲಿ ಪ್ರವಾದಿಯು ಏಳುವದೇ ಇಲ್ಲ, ಪರಿ ಶೋಧಿಸಿ ನೋಡು ಅಂದರು.ಪ್ರತಿಯೊಬ್ಬನು ತನ್ನ ಸ್ವಂತ ಮನೆಗೆ ಹೋದನು.
Cross references
ಆದರೆ ಅವರು--ಹಿಂದಕ್ಕೆ ಸರಿ ಎಂದು ಹೇಳಿ --ಇವನು ಪ್ರವಾಸಿಯಾಗಿ ಬಂದು ನ್ಯಾಯಾಧಿಪತಿ ಆಗಬೇಕೆಂದಿದ್ದಾನೆ; ಈಗ ನಿನಗೆ ಅವರಿಗಿಂತ ಹೆಚ್ಚು ಕೆಟ್ಟದ್ದನ್ನು ಮಾಡುತ್ತೇವೆ ಅಂದರು. ಅವರು ಲೋಟನನ್ನು ಬಹಳವಾಗಿ ಇರುಕಿಸಿ ಬಾಗಲನ್ನು ಮುರಿಯಲು ಸವಿಾಪಕ್ಕೆ ಬಂದರು.
ಅದಕ್ಕ ವನು--ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವ ನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿ ದ್ದಾರೆ? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದೀಯೋ ಅಂದನು. ಆಗ ಮೋಶೆಯು ಭಯಪಟ್ಟು--ನಿಶ್ಚಯವಾಗಿ ಈ ಕಾರ್ಯವು ತಿಳಿದುಬಂತು ಎಂದು ಅಂದುಕೊಂಡನು.
ಆಗ ಕೆನಾನನ ಮಗನಾದ ಚಿದ್ಕೀಯನು ಸವಿಾ ಪಕ್ಕೆ ಬಂದು ವಿಾಕಾಯೆಹುವಿನ ಕೆನ್ನೆಯ ಮೇಲೆ ಹೊಡೆದು--ಕರ್ತನ ಆತ್ಮವು ನನ್ನನ್ನು ಬಿಟ್ಟು ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಹೋಯಿತು ಅಂದನು.
ಪರಿಹಾಸ್ಯಮಾಡುವವನನ್ನು ಗದರಿಸುವವನು ತನಗೆ ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು.
ಆದಾಗ್ಯೂ ಸಂಕಟಪಟ್ಟ ದೇಶಕ್ಕೆ ಅಂಧ ಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬು ಲೋನ್ ಮತ್ತು ನಫ್ತಾಲೀ ಸೀಮೆಗಳನ್ನು ಆತನು ಅವಮಾನಕ್ಕೆ ಗುರಿಮಾಡಿ ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯ ವನ್ನೆಲ್ಲಾ ಘನಪಡಿಸಿದ್ದಾನೆ.
ಯೊರ್ದನಿನ ಆಚೆ ಸಮುದ್ರದ ಮಾರ್ಗದಲ್ಲಿರುವ ಜೆಬುಲೋನ್ ಪ್ರಾಂತ್ಯದಲ್ಲಿಯೂ ನೆಫ್ತಲೀಮ್ ಪ್ರಾಂತ್ಯ ಮತ್ತು ಅನ್ಯಜನರ ಗಲಿಲಾಯದಲ್ಲಿಯೂ
ಅದಕ್ಕೆ ನತಾನಯೇಲನು ಅವನಿಗೆ--ನಜರೇತಿ ನಿಂದ ಒಳ್ಳೇದೇನಾದರೂ ಬರುವದೋ? ಅಂದಾಗ ಫಿಲಿಪ್ಪನು ಅವನಿಗೆ--ಬಂದು ನೋಡು ಅಂದನು.
ಬೇರೆಯವರು--ಈತನೇ ಆ ಕ್ರಿಸ್ತನು ಅಂದರು. ಆದರೆ ಕೆಲವರು--ಕ್ರಿಸ್ತನು ಗಲಿಲಾಯದಿಂದ ಬರುವನೋ?
ಅದಕ್ಕೆ ಅವರು ಅವನಿಗೆ--ನೀನು ಕೇವಲ ಪಾಪ ದಲ್ಲಿಯೇ ಹುಟ್ಟಿದವನು; ನೀನು ನಮಗೆ ಬೋಧಿಸು ತ್ತೀಯೋ ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.