Home Bibles ಯೋಹಾನ 7:32 · ಕನ್ನಡ ಬೈಬಲ್
ಯೋಹಾನ 7:32 · ಕನ್ನಡ ಬೈಬಲ್

ಆತನ ವಿಷಯವಾಗಿ ಜನರು ಗುಣುಗುಟ್ಟಿದ ರೆಂದು ಫರಿಸಾಯರು ಕೇಳಿದರು; ಫರಿಸಾಯರೂ ಪ್ರಧಾನಯಾಜಕರೂ ಆತನನ್ನು ಹಿಡಿಯುವದಕ್ಕೆ ಅಧಿ ಕಾರಿಗಳನ್ನು ಕಳುಹಿಸಿದರು.

Cross references

ಮತ್ತಾಯ 12:23

ಆಗ ಜನರೆಲ್ಲರು ವಿಸ್ಮಯ ಗೊಂಡವರಾಗಿ--ಈತನು ದಾವೀದನ ಕುಮಾರ ನಲ್ಲವೇ ಅಂದರು.

ಮತ್ತಾಯ 23:13

ಆದರೆ ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮನುಷ್ಯರ ಮುಂದೆ ಪರ ಲೋಕರಾಜ್ಯವನ್ನು ಮುಚ್ಚುತ್ತೀರಿ. ನೀವಂತೂ ಪ್ರವೇಶಿ ಸುವದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಗೆ ಹೋಗಗೊಡಿಸುವದಿಲ್ಲ.

ಲೂಕ 22:52

ಆಗ ಯೇಸು ತನ್ನ ಬಳಿಗೆ ಬಂದಿದ್ದ ಪ್ರಧಾನಯಾಜಕರಿಗೂ ದೇವಾಲ ಯದ ಅಧಿಪತಿಗಳಿಗೂ ಹಿರಿಯರಿಗೂ--ಕಳ್ಳನಿಗೆ ವಿರೋಧವಾಗಿ ಬಂದ ಹಾಗೆ ಕತ್ತಿಗಳಿಂದಲೂ ದೊಣ್ಣೆ ಗಳಿಂದಲೂ ನೀವು ಹೊರಟು ಬಂದಿರೋ?

ಯೋಹಾನ 7:45

ಬಳಿಕ ಪ್ರಧಾನಯಾಜಕರ ಮತ್ತು ಫರಿಸಾಯರ ಬಳಿಗೆ ಅಧಿಕಾರಿಗಳು ಬಂದಾಗ ಅವರಿಗೆ--ನೀವು ಯಾಕೆ ಆತನನ್ನು ಕರತರಲಿಲ್ಲ ಎಂದು ಕೇಳಿದರು.

ಯೋಹಾನ 11:47

ಆಗ ಪ್ರಧಾನಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ--ಈ ಮನುಷ್ಯನು ಅನೇಕ ಅದ್ಭುತಕಾರ್ಯಗಳನ್ನು ಮಾಡುತ್ತಾನಲ್ಲಾ, ನಾವು ಏನು ಮಾಡೋಣ?

ಯೋಹಾನ 12:19

ಆದದರಿಂದ ಫರಿಸಾಯರು ತಮ್ಮತಮ್ಮೊಳಗೆ--ನಿಮ್ಮ ಯತ್ನವೇನೂ ಸಾಗಲಿಲ್ಲವೆಂದು ನೀವು ತಿಳಿಯುವದಿಲ್ಲವೋ? ಇಗೋ, ಲೋಕವು ಆತನ ಹಿಂದೆ ಹೋಯಿತು ಎಂದು ಅಂದುಕೊಂಡರು.

ಯೋಹಾನ 18:3

ಆಗ ಯೂದನು ಪ್ರಧಾನಯಾಜಕರಿಂದ ಮತ್ತು ಫರಿಸಾಯ ರಿಂದ ಜನರ ಗುಂಪನ್ನೂ ಅಧಿಕಾರಿಗಳನ್ನೂ ಪಡೆದು ಕೊಂಡು ದೀಪಗಳಿಂದಲೂ ಪಂಜುಗಳಿಂದಲೂ ಆಯುಧಗಳಿಂದಲೂ ಅಲ್ಲಿಗೆ ಬಂದನು.

ಅಪೋಸ್ತಲರ ಕೃತ್ಯಗಳು 5:26

ಆಗ ಅಧಿಪತಿಯು ಅಧಿಕಾರಿಗಳೊಂದಿಗೆ ಹೋಗಿ ಬಲಾತ್ಕಾರವೇನೂ ಮಾಡದೆ ಅವರನ್ನು ಕರತಂದನು; ಯಾಕಂದರೆ ಜನರು ತಮಗೆ ಕಲ್ಲೆಸೆದಾರು ಎಂದು ಅವರು ಭಯಪಟ್ಟಿದ್ದರು.

Interlinear

Choose Theme