Home Bibles ಯೋಹಾನ 21:9 · ಕನ್ನಡ ಬೈಬಲ್
ಯೋಹಾನ 21:9 · ಕನ್ನಡ ಬೈಬಲ್

ಅವರು ದಡಕ್ಕೆ ಬಂದ ಕೂಡಲೆ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ವಿಾನುಗಳನ್ನೂ ರೊಟ್ಟಿಯನ್ನೂ ಕಂಡರು.

Cross references

1 ಅರಸುಗಳು 19:5

ಅವನು ಷಿಟ್ಟೀಮ್‌ ಮರದ ಕೆಳಗೆ ಮಲಗಿಕೊಂಡು ನಿದ್ರೆಮಾಡುತ್ತಿರುವಾಗ ಇಗೋ, ಒಬ್ಬ ದೂತನು ಅವನನ್ನು ತಟ್ಟಿ ಅವನಿಗೆಎದ್ದು ತಿನ್ನು ಅಂದನು.

1 ಅರಸುಗಳು 19:6

ಅವನು ಎದ್ದು ನೋಡಿದಾಗ ಇಗೋ, ಕೆಂಡದಲ್ಲಿ ಸುಡಲ್ಪಟ್ಟ ರೊಟ್ಟಿಯೂ ಒಂದು ತಂಬಿಗೆ ನೀರೂ ಅವನ ತಲೆಯ ಕಡೆಗೆ ಇತ್ತು. ಆಗ ಅವನು ತಿಂದು ಕುಡಿದು ತಿರಿಗಿ ಮಲಗಿಕೊಂಡನು.

ಮತ್ತಾಯ 4:11

ಆಗ ಸೈತಾನನು ಆತನನ್ನು ಬಿಟ್ಟನು; ಮತ್ತು ಇಗೋ, ದೇವದೂತರು ಬಂದು ಆತನನ್ನು ಉಪಚರಿಸಿದರು.

ಮಾರ್ಕ 8:3

ನಾನು ಅವರನ್ನು ಉಪವಾಸ ವಾಗಿ ಅವರ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು; ಯಾಕಂದರೆ ಅವರಲ್ಲಿ ಕೆಲ ವರು ದೂರದಿಂದ ಬಂದಿದ್ದಾರೆ ಅಂದನು.

ಲೂಕ 12:29

ನೀವು ಏನು ತಿನ್ನಬೇಕು ಇಲ್ಲವೆ ನೀವು ಏನು ಕುಡಿಯಬೇಕು ಎಂದು ತವಕಪಡಬೇಡಿರಿ; ನೀವು ಅನುಮಾನದ ಮನಸ್ಸಿನವ ರಾಗಿರಬೇಡಿರಿ.

ಯೋಹಾನ 18:18

ಆಗ ಚಳಿಯಾಗಿದ್ದದರಿಂದ ಆಳುಗಳೂ ಅಧಿಕಾರಿಗಳೂ ಇದ್ದಲುಗಳಿಂದ ಬೆಂಕಿಮಾಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು; ಪೇತ್ರನೂ ಅವರೊಂದಿಗೆ ನಿಂತು ಕಾಯಿಸಿಕೊಳ್ಳುತ್ತಿದ್ದನು.

ಯೋಹಾನ 21:10

ಯೇಸು ಅವರಿಗೆ--ನೀವು ಈಗ ಹಿಡಿದ ವಿಾನುಗಳಲ್ಲಿ ಕೆಲ ವನ್ನು ತನ್ನಿರಿ ಅಂದನು.

ಯೋಹಾನ 21:13

ಆಗ ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಕೊಟ್ಟನು; ಹಾಗೆಯೇ ವಿಾನನ್ನೂ ಕೊಟ್ಟನು.

Interlinear

Choose Theme