Home Bibles ಯೋಹಾನ 20:29 · ಕನ್ನಡ ಬೈಬಲ್
ಯೋಹಾನ 20:29 · ಕನ್ನಡ ಬೈಬಲ್

ಯೇಸು ಅವನಿಗೆ--ತೋಮನೇ, ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ; ನೋಡದೆ ನಂಬಿದವರು ಧನ್ಯರು ಅಂದನು.

Cross references

ಲೂಕ 1:45

ಕರ್ತನಿಂದ ತನಗೆ ಹೇಳಲ್ಪಟ್ಟವುಗಳು ನೆರವೇರುವವೆಂದು ನಂಬಿದವಳು ಧನ್ಯಳು ಎಂದು ಹೇಳಿದಳು.

ಯೋಹಾನ 4:48

ಯೇಸು ಅವನಿಗೆ--ನೀವು ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದ ಹೊರತು ನಂಬು ವದೇ ಇಲ್ಲ ಅಂದನು.

ಯೋಹಾನ 20:8

ಆಗ ಮೊದಲು ಸಮಾಧಿಗೆ ಬಂದ ಆ ಬೇರೆ ಶಿಷ್ಯನು ಸಹ ಒಳಗೆ ಹೋಗಿ ನೋಡಿ ನಂಬಿದನು.

2 ಕೊರಿಂಥದವರಿಗೆ 5:7

(ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ).

ಹೆಬ್ರಿಯರಿಗೆ 11:1

ನಂಬಿಕೆಯು ನಿರೀಕ್ಷಿಸುವವುಗಳ ನಿಜ ಲಕ್ಷಣವೂ ಕಾಣದವುಗಳ ನಿದರ್ಶನವೂ ಆಗಿದೆ.

ಹೆಬ್ರಿಯರಿಗೆ 11:27

ನಂಬಿಕೆ ಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತ ದೇಶವನ್ನು ತೊರೆದುಬಿಟ್ಟನು. ಯಾಕಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.

ಹೆಬ್ರಿಯರಿಗೆ 11:39

ಇವರೆಲ್ಲರೂ ನಂಬಿಕೆಯ ಮೂಲಕ ಒಳ್ಳೇ ಸಾಕ್ಷಿಯನ್ನು ಹೊಂದಿದವರಾಗಿದ್ದರೂ ವಾಗ್ದಾನವನ್ನು ಹೊಂದಲಿಲ್ಲ;ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ದೇವರು ನಮಗೋಸ್ಕರ ಶ್ರೇಷ್ಠ ವಾದದ್ದನ್ನು ಏರ್ಪಡಿಸಿದ್ದನು.

1 ಪೇತ್ರ 1:8

ನೀವು ಆತನನ್ನು ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ; ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.

Interlinear

Choose Theme