Home Bibles ಯೋಹಾನ 20:23 · ಕನ್ನಡ ಬೈಬಲ್
ಯೋಹಾನ 20:23 · ಕನ್ನಡ ಬೈಬಲ್

ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ ಅವು ಅವರಿಗೆ ಕ್ಷಮಿಸಲ್ಪಡುವವು; ಯಾರ ಪಾಪಗಳನ್ನು ನೀವು ಉಳಿ ಸುತ್ತೀರೋ ಅವು ಅವರಿಗೆ ಉಳಿಯುತ್ತವೆ ಎಂದು ಹೇಳಿದನು.

Cross references

ಮತ್ತಾಯ 16:19

ನಾನು ನಿನಗೆ ಪರಲೋಕ ರಾಜ್ಯದ ಬೀಗದ ಕೈಗಳನ್ನು ಕೊಡುತ್ತೇನೆ; ನೀನು ಯಾವದನ್ನು ಭೂಮಿಯ ಮೇಲೆ ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವದು; ನೀನು ಯಾವ ದನ್ನು ಭೂಮಿಯ ಮೇಲೆ ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವದು ಅಂದನು.

ಮತ್ತಾಯ 18:18

ನಾನು ನಿಮಗೆ ನಿಜವಾಗಿ ಹೇಳುವದೇನಂ ದರೆ--ನೀವು ಭೂಮಿಯ ಮೇಲೆ ಯಾವದನ್ನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡು ವದು. ಮತ್ತು ನೀವು ಭೂಮಿಯ ಮೇಲೆ ಯಾವದನ್ನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪ ಡುವದು.

ಮಾರ್ಕ 2:5

ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.

ಅಪೋಸ್ತಲರ ಕೃತ್ಯಗಳು 2:38

ಆಗ ಪೇತ್ರನು ಅವರಿಗೆ--ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ.

ಅಪೋಸ್ತಲರ ಕೃತ್ಯಗಳು 10:43

ಆತನ ಹೆಸರಿನಲ್ಲಿ ನಂಬಿಕೆಯಿ ಡುವ ಪ್ರತಿಯೊಬ್ಬನು ಆತನಲ್ಲಿ ಪಾಪ ಪರಿಹಾರವನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿ ಗಳೆಲ್ಲರು ಸಾಕ್ಷಿಕೊಡುತ್ತಾರೆ ಅಂದನು.

ಅಪೋಸ್ತಲರ ಕೃತ್ಯಗಳು 13:38

ಆದದರಿಂದ ಜನರೇ, ಸಹೋದರರೇ, ಈ ಮನುಷ್ಯನ ಮೂಲಕವಾಗಿ ಪಾಪಪರಿಹಾರವು ದೊರೆಯುತ್ತದೆಂಬದು ನಿಮಗೆ ಸಾರೋಣವಾಗು ತ್ತದೆಂದೂ

1 ಕೊರಿಂಥದವರಿಗೆ 5:4

ನೀವೂ ನನ್ನಾತ್ಮವೂ ಕರ್ತನಾದ ಯೇಸುವಿನ ಸಾಮರ್ಥ್ಯ ಸಹಿತ ಒಟ್ಟುಗೂಡಿ ಬಂದಿರಲಾಗಿ

2 ಕೊರಿಂಥದವರಿಗೆ 2:6

ಇಂಥವನಿಗೆ ನಿಮ್ಮಲ್ಲಿ ಹೆಚ್ಚಾದವರಿಂದ ಉಂಟಾದ ಆ ಶಿಕ್ಷೆಯೇ ಸಾಕು.

ಎಫೆಸದವರಿಗೆ 2:20

ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯ ವಾದ ಮೂಲೆಗಲ್ಲು;

1 ತಿಮೋಥೆಯ 1:20

ಹುಮೆನಾಯನೂ ಅಲೆಕ್ಸಾಂದ ರನೂ ಅವರಲ್ಲಿದ್ದಾರೆ. ಇವರು ದೇವದೂಷಣೆ ಮಾಡ ಬಾರದೆಂಬದನ್ನು ಕಲಿತುಕೊಳ್ಳುವಂತೆ ನಾನು ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.

Interlinear

Choose Theme