ತರುವಾಯ ಯೆಹೂದ್ಯರ ಭಯದ ನಿಮಿತ್ತ ದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾ ಯದ ಯೋಸೇಫನು ಯೇಸುವಿನ ದೇಹವನ್ನು ತಾನು ತೆಗೆದುಕೊಂಡು ಹೋಗುವಂತೆ ಪಿಲಾತನನ್ನು ಬೇಡಿ ಕೊಂಡನು. ಆಗ ಪಿಲಾತನು ಅಪ್ಪಣೆಕೊಡಲು ಅವನು ಬಂದು ಆತನ ದೇಹವನ್ನು ತೆಗೆದುಕೊಂಡು
Cross references
ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು.
ಸಾಯಂಕಾಲವಾದಾಗ ಅರಿಮಥಾಯದ ವನಾದ ಯೋಸೇಫನೆಂಬ ಹೆಸರುಳ್ಳ ಐಶ್ವರ್ಯವಂತ ನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು.
ಆಗ ಸಂಜೆಯಾಗಿತ್ತು; ಅದು ಸಬ್ಬತ್ತಿನ ಮುಂಚಿನ ಸಿದ್ಧತೆಯ ದಿವಸವಾಗಿತ್ತು.
ಆಗ ಇಗೋ, ಅಲ್ಲಿ ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಆಲೋಚನಾ ಸಭೆಯವನೂ ಒಳ್ಳೆಯವನೂ ನೀತಿವಂತನೂ ಆಗಿ ದ್ದನು.
ಆದಾಗ್ಯೂ ಯೆಹೂದ್ಯರ ಭಯದ ನಿಮಿತ್ತ ಆತನ ವಿಷಯದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಲಿಲ್ಲ.
ಅವನ ತಂದೆತಾಯಿಗಳು ಯೆಹೂದ್ಯರಿಗೆ ಭಯಪಟ್ಟ ದ್ದರಿಂದ ಈ ಮಾತುಗಳನ್ನು ಹೇಳಿದರು; ಯಾಕಂದರೆ ಯಾವನಾದರೂ ಆತನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ನಿರ್ಣಯಿಸಿದ್ದರು.
ಆದಾಗ್ಯೂ ಮುಖ್ಯಾಧಿಕಾರಿಗಳಲ್ಲಿ ಅನೇಕರು ಆತನ ಮೇಲೆ ನಂಬಿಕೆಯಿಟ್ಟರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕರಿಸಲ್ಪಡಬಾರದೆಂದು ಅವರು ಆತನನ್ನು ಒಪ್ಪಿ ಕೊಳ್ಳಲಿಲ್ಲ.
ಇದಲ್ಲದೆ ಕರ್ತನಲ್ಲಿ ಅನೇಕ ಸಹೋದರರು ನನ್ನ ಬೇಡಿಗ ಳಿಂದಲೇ ಭರವಸವುಳ್ಳವರಾಗಿ ವಾಕ್ಯವನ್ನು ನಿರ್ಭಯ ದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯವನ್ನು ಹೊಂದಿದ್ದಾರೆ.