Home Bibles ಯೋಹಾನ 19:31 · ಕನ್ನಡ ಬೈಬಲ್
ಯೋಹಾನ 19:31 · ಕನ್ನಡ ಬೈಬಲ್

ಅದು ಸಿದ್ಧತೆಯ ದಿನವಾದದ್ದರಿಂದ ಸಬ್ಬತ್‌ ದಿನದಲ್ಲಿ ದೇಹಗಳು ಶಿಲುಬೆಯ ಮೇಲೆ ಇರಬಾರ ದೆಂದು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಯೆಹೂದ್ಯರು ಪಿಲಾತನನ್ನು ಬೇಡಿಕೊಂಡರು. (ಯಾಕಂದರೆ ಆ ಸಬ್ಬತ್‌ದಿನವು ವಿಶೇಷವಾದ ದಿನವಾಗಿತ್ತು).

Cross references

ನಿರ್ಗಮಕಾಂಡ 12:16

ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ಸಭೆಯೂ ಏಳನೆಯ ದಿನದಲ್ಲಿ ಪರಿಶುದ್ಧ ಸಭೆಯೂ ನಿಮಗೆ ಇರಬೇಕು. ಊಟಮಾಡುವದನ್ನು ಬಿಟ್ಟು ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡ ಬಾರದು.

ಲೇವ್ಯಕಾಂಡ 23:7

ಮೊದಲನೆಯ ದಿನದಲ್ಲಿ ನಿಮಗೆ ಪವಿತ್ರ ಸಭಾಕೂಟವಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು.

ದ್ವಿತೀಯೋಪದೇಶಕಾಂಡ 21:22

ಇದಲ್ಲದೆ ಒಬ್ಬ ಮನುಷ್ಯನ ಮೇಲೆ ಮರಣಕ್ಕೆ ಯೋಗ್ಯವಾದ ಪಾಪವಿರುವದರಿಂದ ಅವನಿಗೆ ಮರಣ ವನ್ನು ವಿಧಿಸಿ ಮರಕ್ಕೆ ತೂಗುಹಾಕಿದ್ದಾದರೆಅವನ ಹೆಣವು ರಾತ್ರಿಯಲ್ಲಿ ಮರದ ಮೇಲಿರಬಾರದು; ಅವನನ್ನು ಹೇಗಾದರೂ ಅದೇ ದಿವಸದಲ್ಲಿ ಹೂಣಿಡ ಬೇಕು; (ಯಾಕಂದರೆ ತೂಗಾಡುವವನು ದೇವರಿಂದ ಶಾಪಗ್ರಸ್ತನಾಗಿದ್ದಾನೆ); ಆದರೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.

ಯೆಹೋಶುವ 8:29

ಆಯಿಯ ಅರಸನನ್ನು ಸಾಯಂಕಾಲದ ವರೆಗೂ ಒಂದು ಮರದಲ್ಲಿ ತೂಗ ಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶು ವನು ಅವನ ಹೆಣವನ್ನು ಮರದಿಂದ ಇಳಿಸಿ ಅದನ್ನು ಆ ಪಟ್ಟಣದ ಬಾಗಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿ ಈ ವರೆಗೆ ಇರುವ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಹಾಕಿದರು.

ಯೆಹೋಶುವ 10:26

ತರುವಾಯ ಯೆಹೋಶುವನು ಅವರನ್ನು ಹೊಡೆದು ಐದು ಮರಗಳಲ್ಲಿ ತೂಗಹಾಕಿ ಸಾಯಿಸಿ ದನು. ಅವರು ಸಾಯಂಕಾಲದ ವರೆಗೂ ಮರಗಳಲ್ಲಿ ತೂಗಾಡುತ್ತಿದ್ದರು.

ಸಾಮೇತಿಗಳು 12:10

ನೀತಿವಂತನು ತನ್ನ ಪಶುವಿನ ಪ್ರಾಣವನ್ನು ರಕ್ಷಿಸುತ್ತಾನೆ. ಆದರೆ ದುಷ್ಟರ ಅಂತಃಕರುಣೆಯು ಕ್ರೂರತನವೇ.

ಮೀಕ 3:3

ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ.

ಮತ್ತಾಯ 27:62

ಮರುದಿನ ಅಂದರೆ ಸೌರಣೆಯ ದಿನ ಕಳೆದ ಮೇಲೆ ಪ್ರಧಾನಯಾಜಕರು ಮತ್ತು ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು--

ಮಾರ್ಕ 15:42

ಆಗ ಸಂಜೆಯಾಗಿತ್ತು; ಅದು ಸಬ್ಬತ್ತಿನ ಮುಂಚಿನ ಸಿದ್ಧತೆಯ ದಿವಸವಾಗಿತ್ತು.

ಯೋಹಾನ 19:1

ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಆತನನ್ನು ಕೊರಡೆ ಯಿಂದ ಹೊಡಿಸಿದನು.

ಯೋಹಾನ 19:14

ಅದು ಪಸ್ಕಕ್ಕೆ ಸಿದ್ಧಮಾಡುವ ದಿನದಲ್ಲಿ ಸುಮಾರು ಆರನೇ ತಾಸಾಗಿತ್ತು; ಅವನು ಯೆಹೂದ್ಯರಿಗೆ--ಇಗೋ, ನಿಮ್ಮ ಅರಸನು ಅಂದನು.

ಯೋಹಾನ 19:42

ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದದ್ದರಿಂದ ಅವರು ಯೇಸುವನ್ನು ಸಮಾಧಿಯಲ್ಲಿ ಇಟ್ಟರು. ಯಾಕಂದರೆ ಆ ಸಮಾಧಿಯು ಸವಿಾಪದಲ್ಲಿತ್ತು.

Interlinear

Choose Theme