Home Bibles ಯೋಹಾನ 16:6 · ಕನ್ನಡ ಬೈಬಲ್
ಯೋಹಾನ 16:6 · ಕನ್ನಡ ಬೈಬಲ್

ಆದರೆ ಇವುಗಳನ್ನು ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯದಲ್ಲಿ ದುಃಖವು ತುಂಬಿಯದೆ.

Cross references

ಲೂಕ 22:45

ಆತನು ಪ್ರಾರ್ಥನೆ ಮಾಡಿ ಎದ್ದಮೇಲೆ ತನ್ನ ಶಿಷ್ಯರ ಕಡೆಗೆ ಬಂದು ಅವರು ದುಃಖದ ನಿಮಿತ್ತವಾಗಿ ನಿದ್ರೆ ಮಾಡುತ್ತಿರುವದನ್ನು ಕಂಡು ಅವರಿಗೆ--

ಲೂಕ 24:17

ಆಗ ಆತನು ಅವರಿಗೆ--ನೀವು ಮಾರ್ಗದಲ್ಲಿ ನಡೆಯುತ್ತಾ ವ್ಯಸನವುಳ್ಳವರಾಗಿ ಒಬ್ಬರಿಗೊಬ್ಬರು ಮಾತನಾಡಿ ಕೊಳ್ಳುತ್ತಿರುವ ಈ ವಿಷಯಗಳು ಯಾವ ತರದವುಗಳು ಎಂದು ಕೇಳಿದನು.

ಯೋಹಾನ 14:1

ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

ಯೋಹಾನ 14:27

ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ.

ಯೋಹಾನ 16:20

ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ಅಳುತ್ತಾ ಗೋಳಾಡುವಿರಿ, ಆದರೆ ಲೋಕವು ಸಂತೋಷಿಸುವದು; ನೀವು ದುಃಖಿಸುವಿರಿ, ಆದರೆ ನಿಮ್ಮ ದುಃಖವು ಹೋಗಿ ಆನಂದವು ಬರುವದು.

ಯೋಹಾನ 20:11

ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು; ಆಕೆಯು ಅಳುತ್ತಾ ಸಮಾಧಿಯೊಳಗೆ ಬೊಗ್ಗಿ ನೋಡಿದಾಗ

Interlinear

Choose Theme