Home Bibles ಯೋಹಾನ 16:19 · ಕನ್ನಡ ಬೈಬಲ್
ಯೋಹಾನ 16:19 · ಕನ್ನಡ ಬೈಬಲ್

ಯೇಸು ತನ್ನನ್ನು ಪ್ರಶ್ನಿಸುವದಕ್ಕೆ ಅಪೇಕ್ಷಿಸುತ್ತಿ ದ್ದಾರೆಂದು ತಿಳಿದು ಅವರಿಗೆ--ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಎಂದು ನಾನು ನಿಮಗೆ ಹೇಳಿದ್ದಕ್ಕೆ ನಿಮ್ಮ ನಿಮ್ಮೊಳಗೆ ವಿಚಾರಿಸಿಕೊಳ್ಳುತ್ತೀರೋ?

Cross references

ಕೀರ್ತನೆಗಳು 139:1

ಕರ್ತನೇ, ನನ್ನನ್ನು ಪರಿಶೋಧಿಸಿ ತಿಳುಕೊಂಡಿದ್ದೀ;

ಮತ್ತಾಯ 6:8

ಆದದರಿಂದ ನೀವು ಅವರಂತೆ ಇರಬೇಡಿರಿ; ನಿಮ್ಮ ತಂದೆಯನ್ನು ಕೇಳುವದಕ್ಕಿಂತ ಮುಂಚೆಯೇ ನಿಮಗೆ ಅಗತ್ಯವಾಗಿ ರುವವುಗಳು ಯಾವವು ಎಂಬದು ಆತನಿಗೆ ತಿಳಿದದೆ.

ಮತ್ತಾಯ 9:4

ಯೇಸು ಅವರ ಆಲೋಚನೆಗಳನ್ನು ತಿಳಿದು--ನೀವು ಯಾಕೆ ನಿಮ್ಮ ಹೃದಯಗಳಲ್ಲಿ ಕೆಟ್ಟದ್ದನ್ನು ಯೋಚಿಸುತ್ತೀರಿ?

ಮಾರ್ಕ 9:33

ಆತನು ಕಪೆರ್ನೌಮಿಗೆ ಬಂದು ಮನೆಯಲ್ಲಿದ್ದಾಗ ಅವರಿಗೆ--ದಾರಿಯಲ್ಲಿ ನಿಮ್ಮೊಳಗೆ ನೀವು ಏನು ವಾಗ್ವಾದ ಮಾಡಿದಿರಿ ಎಂದು ಕೇಳಿದನು.

ಯೋಹಾನ 2:24

ಆದರೆ ಯೇಸು ತನ್ನನ್ನು ಅವರಿಗೆ ವಶಪಡಿಸಿ ಕೊಳ್ಳಲಿಲ್ಲ; ಯಾಕಂದರೆ ಆತನು ಎಲ್ಲರನ್ನೂ ಅರಿತ ವನಾಗಿದ್ದನು.ಆತನು ಮನುಷ್ಯರ ಅಂತರಂಗವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.

ಯೋಹಾನ 7:33

ತರುವಾಯ ಯೇಸು ಅವರಿಗೆ--ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೋಗು ತ್ತೇನೆ.

ಯೋಹಾನ 13:33

ಚಿಕ್ಕಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮ ಸಂಗಡ ಇರುತ್ತೇನೆ, ನೀವು ನನ್ನನ್ನು ಹುಡುಕುವಿರಿ; ನಾನು ಹೋಗುವಲ್ಲಿಗೆ ನೀವು ಬರಲಾರಿರೆಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.

ಯೋಹಾನ 14:19

ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ; ನಾನು ಜೀವಿಸುವ ದರಿಂದ ನೀವು ಸಹ ಜೀವಿಸುವಿರಿ.

ಯೋಹಾನ 16:16

ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅಂದನು.

ಯೋಹಾನ 16:30

ನೀನು ಎಲ್ಲಾ ವಿಷಯಗಳನ್ನು ತಿಳಿದಾತನೆಂದೂ ಯಾವ ಮನುಷ್ಯನು ನಿನ್ನನ್ನು ಕೇಳು ವದು ಅಗತ್ಯವಿಲ್ಲವೆಂದೂ ಈಗ ನಮಗೆ ನಿಶ್ಚಯ ವಾಯಿತು; ಇದರಿಂದ ನೀನು ದೇವರ ಕಡೆಯಿಂದ ಹೊರಟು ಬಂದಿದ್ದೀ ಎಂದು ನಾವು ನಂಬುತ್ತೇವೆ ಅಂದರು.

ಯೋಹಾನ 21:17

ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ

ಹೆಬ್ರಿಯರಿಗೆ 4:13

ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲ ದ್ದಾಗಿಯೂ ಬೈಲಾದದ್ದಾಗಿಯೂ ಆದರೆ ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.

ಪ್ರಕಟನೆ 2:23

ಅವಳ ಮಕ್ಕಳನ್ನು ಕೊಂದೇಕೊಲ್ಲುವೆನು; ಆಗ ನಾನು ಅಂತರಿಂದ್ರಿಯಗ ಳನ್ನೂ ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆ ಂಬದು ಎಲ್ಲಾ ಸಭೆಗಳಿಗೆ ಗೊತ್ತಾಗುವದು; ನಿಮ್ಮಲ್ಲಿ ಪ್ರತಿಯೊಬ್ಬನಿಗೆ ನಿಮ್ಮ ಕೃತ್ಯಗಳ ಪ್ರಕಾರ ಕೊಡುವೆನು.

Interlinear

Choose Theme